ಸೊಗಡು ಶಿವಣ್ಣನವರ ಬೃಹತ್ ರೋಡ್ ಶೋ-ಮತದಾರರ ಬೆಂಬಲ

ತುಮಕೂರು: ನಗರವು ಶರವೇಗದಲ್ಲಿ ಬೆಳೆಯುತ್ತಿದ್ದು ಶಿಕ್ಷಣ, ಆರೋಗ್ಯ, ಕೈಗಾರಿಕೆ, ಮೂಲಸೌಕರ್ಯಗಳ ಅಭಿವೃದ್ಧಿ, ಪಾರದರ್ಶಕ ಆಡಳಿತ, ಉತ್ತಮ ಹಾಗೂ ದಕ್ಷ ಪ್ರಾಮಾಣಿಕ ವ್ಯಕ್ತಿಯ ಆಯ್ಕೆ ದೃಷ್ಟಿಯಿಂದ ಪ್ರಸ್ತುತ ಚುನಾವಣೆಯಲ್ಲಿ ಪ್ರಜ್ಞಾವಂತ ಮತ್ತು ಸ್ವಾಭಿಮಾನಿ ತುಮಕೂರು ನಾಗರೀಕರು ನನ್ನ ಗೆಲುವಿಗೆ ನಿರ್ಧರಿಸಿದ್ದು, ಸ್ವಾಭಿಮಾನಿ ಮತದಾರರು ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಿ ಗೆಲುವಿಗೆ ಆರ್ಶೀವದಿಸಬೇಕೆಂದು ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಮತದಾರರಲಿ ಮನವಿ ಮಾಡಿದರು.

ಇವರು ಇಂದು ತುಮಕೂರು ನಗರದ ಜೈಪುರ, ಪೂರ್‍ಹೌಸ್ ಕಾಲೋನಿ, ಲೇಬರ್ ಕಾಲೋನಿ, ವಿನೋಬನಗರ, ಸುಬ್ರಹ್ಮಣ್ಯ ಟೆಂಪಲ್, ಚಾಂದಿನಿಚೌಕ, ಕುರಿಪಾಳ್ಯ, ಮೆಳೇಕೋಟೆ ರಸ್ತೆ ಮೂಲಕ ಧಾನಪ್ಯಾಲೇಸ್ ವೃತ್ತದವರೆಗೆ 3000 ಸಾವಿರ ಸ್ವಾಭಿಮಾನಿ ಕಾರ್ಯಕರ್ತರ ಬೃಹತ್ ರೋಡ್ ಶೋ ನಡೆಸಿ ಮಾತನಾಡುತ್ತಾ, ಈ ಬಾರಿಯ ಚುನಾವಣೆಯು ನನ್ನ ಕೊನೆಯ ಚುನಾವಣೆಯಾಗಿದ್ದು, ನಾನು ನಗರದ ಎಲ್ಲಾ ಪ್ರದೇಶಗಳಿಗೆ ಮತಯಾಚನೆಗೆ ತೆರಳಿದ ಸಂಧರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ನಾಗರೀಕರು ನನಗೆ ಸ್ಪಂದಿಸುತ್ತಿದ್ದಾರಲ್ಲದೆ, ಮನೆ ಮನೆಗೆ ತೆರಳುತ್ತಿರುವ ಸ್ವಾಭಿಮಾನಿ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಮತಯಾಚನೆ ಮಾಡುತ್ತಿದ್ದು, ನಗರದೆಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದು ಹೇಳೀದರು.

ಮತಯಾಚನೆಗೆ ತೆರಳಿದ ಸಂಧರ್ಭದಲ್ಲಿ ಸಮಸ್ಯೆಗಳ ಸರಮಾಲೆಗಳನ್ನೇ ಮತದಾರರು ಹೇಳುತ್ತಿದ್ದು, ಹಾಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯನಿರ್ವಹಿಸಿದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲಾ ಸಮಸ್ಯೆ ಬೇಡಿಕೆಗಳ ಬಗ್ಗೆ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಕ್ರಮಕ್ಕೆ ಮುಂದಾಗುತ್ತೇನೆ ಎಂದು ಸೊಗಡು ಶಿವಣ್ಣ ತಿಳಿಸಿದರು.

ನಗರ ವ್ಯಾಪ್ತಿಯ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಇದಕ್ಕೆ ಸ್ಥಳೀಯ ಸಂಸದ ಹಾಗೂ ಶಾಸಕರೇ ನೇರ ಕಾರಣರಾಗಿದ್ದಾರೆ ಎಂದು ಗಂಭೀರವಾಗಿ ಸೊಗಡು ಶಿವಣ್ಣ ಆರೋಪಿಸಿದರು, ನಗರದಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳ ಗುಣಮಟ್ಟದ ಶಂಕೆ ವ್ಯಕ್ತಪಡಿಸಿದರು. ಈಗಾಗಲೆ ನಗರ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳಲ್ಲಿ ಕೆಲವು ಕಾಮಗಾರಿಗಳಿಗೆ ಕೆಲಸ ಮಾಡದೆ ಹಣ ಪಾವತಿಸಲು ಅನುಕೂಲ ಮಾಡಿರುವ ಬಗ್ಗೆಯೂ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಬೃಹತ್ ರೋಡ್ ಶೋ ಮೂಲಕ ಪ್ರಚಾರದ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೊಗಡು ಶಿವಣ್ಣನವರ ಕ್ರಮ ಸಂಖ್ಯೆ: 14, ಚಿನ್ಹೆ ರೋಡ್ ರೋಲರ್ ಎಂಬುದನ್ನು ಪದೇ ಪದೇ ಮತದಾರರಲ್ಲಿ ಗಮನಕ್ಕೆ ತಿಳಿ ಹೇಳಿದ ಸೊಗಡು ಬಳಗದ ಸ್ವಾಭಿಮಾನಿ ಕಾರ್ಯಕರ್ತರು, ಚಿನ್ಹೆ ರೋಡ್ ರೋಲರ್ ಎಂಬುದರ ಬಗ್ಗೆ ವಿಶೇಷವಾಗಿ ಮತಯಾಚನೆಗೆ ಮುಂದಾಗಿದ್ದಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಈ ರೋಡ್ ಶೋನಲ್ಲಿ ಪ್ರಮುಖ ಸ್ವಾಭಿಮಾನಿ ಕಾರ್ಯಕರ್ತರಾದ ಶಾಂತರಾಜು, ಧನಿಯಾಕುಮಾರ್, ಡಿಎಸ್‍ಎಸ್‍ನರಸಿಂಹಯ್ಯ, ಶಬ್ಬೀರ್À ಅಹ್ಮದ್, ನಾಸೀರ್(ಸಂತೆಪೇಟೆ), ಕುಸುಮಾ, ಸುಭಾನ್, ತನ್ವೀರ್, ಶೋಯಬ್‍ಇಮ್ರಾನ್‍ಅಹ್ಮದ್, ಅಕ್ಮಲ್ ಪಾಷ, ಡಾ.ಸಂಜಯ್‍ನಾಯಕ್, ಗೋಕುಲ್ ಮಂಜುನಾಥ್, ಜೋತಿಪ್ರಕಾಶ್ (ಜೆಪಿ), ಸಿದ್ದಲಿಂಗಸ್ವಾಮಿ, ಒನಿಡಾನಟರಾಜ್, ಚೌಡೇಶ್, ಪಿ.ರವಿಶಂಕರ್, ವಿಕಾಸ್ ಟಿ.ಸಿ, ಶಿವಶಂಕರ್(ಸುಣ್ಣದಕಲ್ಲು), ಬಾವಿಕಟ್ಟೆ ವಿನಯ್, ವಿನಯ್, ಹೊಸಕೋಟೆ ನಟರಾಜ್, ಜಯಪ್ರಕಾಶ್ (ಜಿಮ್), ಮಂಜುನಾಥ ಜಿ.ಹೊಸಹಳ್ಳಿ ಮುಂತಾದ 3000ಕ್ಕೂ ಹೆಚ್ಚು ಸ್ವಾಭಿಮಾನಿ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *