ತುಮಕೂರು : ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬರುವ ಚಾನಲ್ ದುರಸ್ತಿ ಕಾರ್ಯ ನಡೆಯುತ್ತಿದ್ದು ಕಾಮಗಾರಿ ತಡವಾದರೆ ತುಮಕೂರು ಜಿಲ್ಲೆಗೆ ನೀರಿನ ಕೊರತೆ ಉಂಟಾಗಬಹುದು ಎಂಬ ವಿಚಾರವಾಗಿ ಇಂದು ಮಾನ್ಯ ಮಾಜಿ ಸಚಿವರಾದ ಶ್ರೀ ಸೊಗಡು ಶಿವಣ್ಣನವರು ಹಾಗೂ ಪಂಚಾಕ್ಷರಯ್ಯನವರು ಹಾಗೂ ಶ್ರೀ ಗೋವಿಂದರಾಜು ಶ್ರೀ ಪ್ರಸನ್ನ ಕುಮಾರ್ ತಿಪಟೂರು ರವರುಗಳ ಜೊತೆಗೂಡಿ ಸ್ಥಳಕ್ಕೆ ತೆರಳಿ ಕಾಮಗಾರಿ ವೀಕ್ಷಿಸಿ ಅಲ್ಲಿಂದಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸುಧೀರ್ಘವಾಗಿ ಮಾತನಾಡಿದರು.
ಶೀಘ್ರವಾಗಿ ಕಾಮಗಾರಿ ಪೂರ್ಣ ಗೊಳಿಸುವಂತೆ ಸೂಚಿಸಿದರು.
ಸಾರ್ವಜನಿಕರು ಎಚ್ಚರಿಕೆಯಿಂದಿರಲು ಡೀಸಿ ಮನವಿ
ಹೇಮಾವತಿ ಜಲಾಶಯದಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಹಾಗೂ ಕೆರೆ ಕೆಟ್ಟೆಗಳನ್ನು ತುಂಬಿಸಲು ನೀರು ಹರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜಿಲ್ಲೆಯ ಹೇಮಾವತಿ ನಾಲೆಗಳಿಗೆ ಹರಿಯಲಿದೆ. ಜಲಾಶಯದ ಒಳಹರಿವಿನ ಪ್ರಮಾಣ ಯಾವುದೇ ಸಮಯದಲ್ಲಾದರೂ ಏರಿಕೆಯಾಗುವ ಸಂಭವವಿದ್ದು, ಹೆಚ್ಚುವರಿ ನೀರನ್ನು ನಾಲೆಗೆ ಬಿಡುವುದರಿಂದ ಸಾರ್ವಜನಿಕರು ನಾಲೆಯ ಅಕ್ಕ-ಪಕ್ಕ ಸುಳಿದಾಡಬಾರದು ಹಾಗೂ ಈಜಲು, ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು, ಮತ್ತಿತರ ಕಾರಣಗಳಿಗಾಗಿ ನಾಲೆ ಬಳಿಗೆ ಹೋಗಬಾರದೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮನವಿ ಮಾಡಿದ್ದಾರೆ.
ಹೇಮಾವತಿ ಜಲಾಶಯದಲ್ಲಿ ನೀರಿನ ಸಂಗ್ರಹಣಾ ಸಾಮಥ್ರ್ಯವು ಜುಲೈ 18ರಂದು 28.66 ಟಿಎಂಸಿ.ಗಳಷ್ಟಿದ್ದು, ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಬರುವ ನೀರಿನ ಒಳಹರಿವು ಏರಿಕೆಯಾಗಿ ಜಲಾಶಯ ತುಂಬುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಿಂದ ನದಿ ಮತ್ತ ಯೋಜನಾ ವ್ಯಾಪ್ತಿಯ ಎಲ್ಲ ನಾಲೆಗಳಿಂದ ಜುಲೈ 19ರಿಂದ ನೀರನ್ನು ಹರಿಸಲಾಗುವುದರಿಂದ ಯೋಜನಾ ವ್ಯಾಪ್ತಿಯಲ್ಲಿರುವ ಎಲ್ಲ ಅಧಿಕಾರಿಗಳು ನೀರು ಪೋಲಾಗದಂತೆ ತುರ್ತು ಕ್ರಮಗಳನ್ನು ಕೈಗೊಂಡು ಸಾರ್ವಜನಿಕರು ಮತ್ತು ರೈತರಿಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು.
ಸುಗಮ ನೀರು ನಿರ್ವಹಣೆ ಸಂಬಂಧ ಯೋಜನಾ ವ್ಯಾಪ್ತಿಯ ಜನರು ಹಾಗೂ ಅಚ್ಚುಕಟ್ಟುದಾರರು ಇಲಾಖಾಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ