ತುಮಕೂರು : ಬಸ್ ಚಾಲಕನಿಗೆ ಹೃದಯಾಘಾತವಾಗಿ ಬಸ್ ಅಡ್ಡ-ದಿಡ್ಡಿ ಓಡಿಸುತ್ತಿದ್ದನ್ನು ತಪ್ಪಿಸಿ ಚಾಲಕ ಮತ್ತು ಪ್ರಯಾಣಿಕರ ಜೀವ ಉಳಿಸಿದ ಪೊಲೀಸ್ ಪೇದೆಯೊಬ್ಬರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ.ವಿ. ಅವರು ಪ್ರಶಂಸಿಸಿದ್ದಾರೆ.
ಮೇ4ರಂದು ರಂದು ತುಮಕೂರು ಜಿಲ್ಲೆಯಿಂದ ಗದಗ ಜಿಲ್ಲೆಗೆ ಲೋಕಸಭಾ ಚುನಾವಣಾ ಬಂದೋಬಸ್ತ್ ಕರ್ತವ್ಯಕ್ಕೆಂದು ತುಮಕೂರು ನಗರದ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್‍ಟೇಬಲ್ ರಾಘವೇಂದ್ರ ಕ್ಷತ್ರಿ ಮತ್ತು ಸಿಬ್ಬಂದಿಯವರು ಕೆ.ಎಸ್.ಆರ್. ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಮಧ್ಯರಾತ್ರಿಯ ಸಮಯದಲ್ಲಿ ಚಿತ್ರದುರ್ಗ ಸಮೀಪ ಬಸ್ಸಿನ ಚಾಲಕರಿಗೆ ಹೃದಯಾಘಾತವಾಗಿ ಬಸ್ಸನ್ನು ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದರು.
ಇದನ್ನು ಗಮನಿಸಿದ ಸಂಚಾರಿ ಪೊಲೀಸ್ ಪೇದೆ ರಾಘವೇಂದ್ರ ಕ್ಷತ್ರಿ ಅವರು ತಕ್ಷಣ ಬಸ್ಸನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ, ಚಾಲಕನನ್ನು 112 ಅಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಬಸ್ಸಿನ ಚಾಲಕನ ಪ್ರಾಣ ಮತ್ತು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸರನ್ನು ರಕ್ಷಿಸಿದ ರಾಘವೇಂದ್ರ ಕ್ಷತ್ರಿರವರಿಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರು ತಮ್ಮ ಸಮಯ ಪ್ರಜ್ಞೆಯನ್ನು ಅಭಿನಂದಿಸಿ, ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.