ಮುರಳೀಧರ ಹಾಲಪ್ಪನವರಿಂದ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನಕ್ಕೆ ಕ್ರೀಡಾಧಿಕಾರಿಗಳ ಸಭೆ

ತುಮಕೂರು:ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಂಬಂಧ ಇಂದು ಕರ್ನಾಟಕ ರಾಜ್ಯ
ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನೇತೃತ್ವದಲ್ಲಿ ಕೈಗಾರಿಕೆಗಳ ಮುಖ್ಯಸ್ಥರು ಮತ್ತು ಕ್ರೀಡಾ ಅಧಿಕಾರಿಗಳ ಸಭೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಮುರುಳೀಧರ ಹಾಲಪ್ಪ,ಕೈಗಾರಿಕೆಗಳ ಸಿ.ಎಸ್.ಆರ್ ನಿಧಿ ಬಳಕೆ ಮಾಡಿಕೊಂಡು, ಜಿಲ್ಲೆಯ ಮಹಾತ್ಮಗಾಂದಿ üಕ್ರೀಡಾಂಗಣದಲ್ಲಿರುವ ಅಥ್ಲೇಟಿಕ್ ಕ್ರೀಡಾಂಗಣ, ಜಿಮ್ ಒಳಾಂಗಣ ಕ್ರೀಡಾಂಗಣಗಳಿಗೆ ಅಗತ್ಯ ಮೂಲಭೂತ ಸೌಕರ್ಯಕಲ್ಪಿಸುವುದು ಹಾಗೂ ಜಿಲ್ಲೆಯಲ್ಲಿ ನಡೆಯುವ ಕ್ರೀಡಾಕೂಟಗಳಿಗೆ ದೊಡ್ಡದೊಡ್ಡಉದ್ದಿಮೆದಾರರಿಂದ ಸಹಾಯ ಮತ್ತು ಸಹಕಾರಕೋರುವ ನಿಟ್ಟಿನಲ್ಲಿ ಕೈಗಾರಿಕೆಗಳ ಮುಖ್ಯಸ್ಥರನ್ನು ಸ್ಟೇಡಿಯಂಗೆ ಆಹ್ವಾನಿಸಿ, ಅವರಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು, ಅವರಿಂದ ದೊರೆಯುವ ಸಹಾಯ ಮತ್ತು ಸಹಕಾರದಿಂದಕ್ರೀಡಾಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ ಮೊದಲ ಪ್ರಯತ್ನ ಇದಾಗಿದೆ.ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿರೇಹಳ್ಳಿ, ವಸಂತನರಸಾಪುರ ಹಾಗೂ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಗಳ ಕಂಪನಿಗಳ ಮುಖ್ಯಸ್ಥರ ಸಭೆ ನಡೆಸಿ, ಜಿಲ್ಲಾಡಳಿತದಿಂದ ಅಧಿಕೃತವಾಗಿ ಮನವಿ ಮಾಡಲು ಸಭೆ ನಡೆಸಲಾಗುವುದುಎಂದರು.

ಇಂದು ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದ ಇನ್‍ಕ್ಯಾಫ್ ಮತ್ತುಕ್ರೋಮೋಟ್ ಬಯೋಸೈನ್ಸ್ ಕಂಪನಿಗಳ ಪ್ರತಿನಿಧಿಗಳ ಜೊತೆಗೆ, ಸ್ಟೇಡಿಯಂನಲ್ಲಿಇರುವ ವ್ಯಾಯಾಮ ಶಾಲೆ,ಒಳಾಂಗಣ ಕ್ರೀಡಾಂಗಣಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಜೊತೆಗೆ, ಉದಯೋನ್ಮುಖ ಕ್ರೀಡಾಪಟುಗಳನ್ನು ದತ್ತು ಪಡೆದು, ಅವರ ಕ್ರೀಡಾಬೆಳವಣಿಗೆಗೆ ಸಹಕರಿಸುವಂತೆ ಕಂಪನಿಗಳ ಪ್ರತಿನಿಧಿಗಳಿಗೆ ಮುರುಳೀಧರ ಹಾಲಪ್ಪಮನವಿ ಮಾಡಿದರು.

ಕ್ರೋಮಾಟ್ ಬಯೋಸೈನ್ಸ್‍ನ ರಾಜೇಶ್ ಮಾತನಾಡಿ,ಸ್ಥಳೀಯರಿಗೆ ಸಹಾಯ, ಸಹಕಾರ ನೀಡುವುದರಿಂದ ಕಂಪನಿಗೂ ಒಳ್ಳೆಯ ಹೆಸರು ಬರಲಿದೆ.ಅಲ್ಲದೆಜನರಿಗೆಇದು ನಮ್ಮ ಕಂಪನಿ ಎಂಬ ಭಾವನೆ ಬರಲಿದೆ.ಹಾಗಾಗಿ ಕಂಪನಿಯ ಹಿರಿಯರೊಂದಿಗೆ ಮಾತನಾಡಿಅಗತ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇನ್‍ಕ್ಯಾಫ್‍ನ ಅಧಿಕಾರಿ ಮಾತನಾಡಿ, ನಮ್ಮದುಎನ್.ಎಂ.ಸಿ ಕಂಪನಿಯಾಗಿದ್ದು, ಇಲ್ಲಿನ ಅಗತ್ಯತೆಗಳ ಪಟ್ಟಿ ಮಾಡಿ, ಎಂ.ಡಿ. ಮತ್ತು ಹೆಚ್.ಆರ್ ಅವರ ಮುಂದಿಟ್ಟು ಮನವರಿಕೆ ಮಾಡಿಕೊಡಲಾಗುವುದುಎಂದರು.

ಈ ವೇಳೆ ಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕರೋಹಿತ್‍ಗಂಗಾಧರ್,ಕ್ರೀಡಾಧಿಕಾರಿಇಸ್ಮಾಯಿಲ್,ಹಿರಿಯಕ್ರೀಡಾಪುಟುಟಿ.ಕೆ.ಆನಂದ್,ಕ್ರೀಡಾ ತರಬೇತುದಾರರಾದ ಶಿವಶಂಕರ್,ಗುಬ್ಬಿ ಚನ್ನಬಸವೇಶ್ವರಕ್ರೀಡಾ ಸಮಿತಿಯ ಶಂಕರ್‍ಕುಮಾರ್, ಮುಖಂಡರಾದಕೊಪ್ಪಲ್‍ನಾಗರಾಜು,ಗೋವಿಂದೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *