ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ದ್ವೀತೀಯ ಸ್ಥಾನ

ತುಮಕೂರು : ಉಡುಪಿ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದಅಂತಾರಾಷ್ಟ್ರೀಯ ಮಟ್ಟದ ಸಾಂಸ್ಕøತಿಕ ಜಾಂಬೂರಿ ವಿಜ್ಞಾನ ಮೇಳ-ಸ್ಪೈಸ್ ಕಾರ್ಯಕ್ರಮದ ಪ್ರಾಜೆಕ್ಟ್‍ಗಳ ಪ್ರದರ್ಶನ ಸ್ವರ್ಧೆಗಳಲ್ಲಿ ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ದ್ವೀತಿಯ ಸ್ಥಾನ ಗಳಿಸಿದೆ.

ನಗರದ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ 16 ಮಂದಿ ವಿದ್ಯಾರ್ಥಿಗಳ ಆರು ತಂಡಗಳೊಂದಿಗೆ ಆರು ವಿವಿಧ ಪ್ರಾಜೆಕ್ಟ್‍ಗಳೊಂದಿಗೆ ಸ್ವರ್ಧೆಗಳಲ್ಲಿ ಭಾಗವಹಿಸಿದ್ದರು. 6 ತಂಡಗಳಲ್ಲಿ, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಿಂದ 2, ಸಿವಿಲ್ ವಿಭಾಗ-3 ಮತ್ತು ಕಂಪ್ಯೂಟರ ಸೈನ್ಸ ವಿಭಾಗದ -1 ತಂಡ ಪ್ರಾಜೆಕ್ಟ್‍ಗಳ ಸ್ವರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ 35 ಕಾಲೇಜುಗಳ ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗಳು ಪ್ರದರ್ಶನಗೊಂಡವು.

ಎಲೆಕ್ಟ್ರಿಕಲ್&ಎಲೆಕ್ಟ್ರಾನಿಕ್ಸ್ ವಿಭಾಗದ’ರೋಬೋಟಿಕ ನರ್ಸ್ ಫಾರ್‍ರಿಮೋಟ್ ಪ್ಲೇಸ್’ಪ್ರಾಜೆಕ್ಟ್‍ಗೆ ದ್ವೀತೀಯ ಸ್ಥಾನ ಪ್ರಶಸ್ತಿ ಲಭಿಸಿದೆ. ರೋಬೋ ಅಂಬ್ಯು (ರೋಬೋಟಿಕ್‍ಅಂಬುಲೆನ್ಸ್) ಮಾಡೆಲ್ ರೂಪಿಸಿದ ವಿದ್ಯಾರ್ಥಿಗಳಾದ ಅಭಿಷೇಕ್, ಅನುಷಾ, ಅಮೃತವಾಣಿ, ಅಬ್ದುಲ್‍ಗಫೂರ್‍ಅವರು ಕೋವಿಡ್-19 ಸಂದರ್ಭದಲ್ಲಿ ಡಾಕ್ಟರ್, ನರ್ಸ್‍ಗಳ ಕೊರತೆಯನ್ನು ಗಮನಿಸಿ ಪ್ರಾಧ್ಯಾಪಕ ಪ್ರೊ. ಪ್ರವೀಣ್‍ಕುಮಾರ್ ಸಿ. ಅವರ ಮಾರ್ಗದರ್ಶನದಲ್ಲಿ ‘ರೋಬೋಟಿಕ್ ನರ್ಸ್’ ಎಂಬ ಹೊಸ ಪರಿಕಲ್ಪನೆಯಿಂದ, ನರ್ಸ್‍ಗಳಿಲ್ಲದೆ ಕೇವಲ ರೊಬೋಟ್ ಮೂಲಕ ಚಿಕಿತ್ಸೆ ನೀಡುವ ತಾಂತ್ರಿಕ ಕೌಶಲ್ಯವನ್ನು ಒಳಗೊಂಡಂತೆ ಈ ಆವಿμÁ್ಕರ ಮಾಡಿದ್ದಾರೆ. ಇದು ವಿಜ್ಞಾನ ಮೇಳದಲ್ಲಿ ಪ್ರದರ್ಶನಗೊಂಡು ವಿಶೇಷ ಗಮನ ಸೆಳೆಯಿತು.

ಈ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದ ತಂಡಕ್ಕೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿ ಈ ಪ್ರಾಜೇಕ್ಟ್‍ಗಳನ್ನು ಸಮಾವೇಶಕ್ಕೆ ಆಗಮಿಸಿದ್ದ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ವಿಕ್ಷಿಸಿದಾರೆಂದು ಆಯೋಜಕರು ಕಾರ್ಯಕ್ರಮದಲ್ಲಿ ತಿಳಿಸಿದರು.

Leave a Reply

Your email address will not be published. Required fields are marked *