ತುಮಕೂರು : ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಶೇ 75.16 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದ್ದು, ಶಿರಾದ ಡಿ. ಹರ್ಷಿತಾ 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷದ ಫಲಿತಾಂಶಕ್ಕಿಂತ ತುಮಕೂರು ಶೈಕ್ಷಣಿಕ ಜಿಲ್ಲೆ ಫಲಿತಾಂಶ ನಾಲ್ಕು ಸ್ಥಾನ ಮೇಲೇರಿದೆ.
ಅಂತೆಯೇ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ ಶೇ.62.44 ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಫಲಿತಾಂಶದಲ್ಲಿ 9ನೇ ಸ್ಥಾನದಲ್ಲಿದ್ದ ಜಿಲ್ಲೆ, 30ನೇ ಸ್ಥಾನದಲ್ಲಿದೆ.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 22,198 ವಿದ್ಯಾರ್ಥಿಗಳ ಪೈಕಿ 16,683ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ 5,515 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 12,715 ವಿದ್ಯಾರ್ಥಿಗಳ ಪೈಕಿ 7,939 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 4,776 ಮಂದಿ ಅನುತ್ತೀರ್ಣರಾಗಿದ್ದಾರೆ.
ಎರಡು ಶೈಕ್ಷಣಿಕ ಜಿಲ್ಲೆ ಫಲಿತಾಂಶದಲ್ಲಿ ಸಿರಾದ ವಾಸವಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ. ಹರ್ಷಿತಾ 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಶೇ 75.16 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ 16ನೇ ಸ್ಥಾನದಲ್ಲಿದ್ದು, ಕಳೆದ ವರ್ಷದ ಫಲಿತಾಂಶಕ್ಕಿಂತ ನಾಲ್ಕು ಸ್ಥಾನ ಮೇಲೇರಿದೆ.
ಅಂತೆಯೇ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ ಶೇ.62.44 ಫಲಿತಾಂಶ ದಾಖಲಿಸಿದ್ದು, ಕಳೆದ ವರ್ಷ ಫಲಿತಾಂಶದಲ್ಲಿ 9ನೇ ಸ್ಥಾನದಲ್ಲಿದ್ದ ಜಿಲ್ಲೆ, 30ನೇ ಸ್ಥಾನದಲ್ಲಿದೆ.
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 22,198 ವಿದ್ಯಾರ್ಥಿಗಳ ಪೈಕಿ 16,683ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ 5,515 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ತುಮಕೂರು
ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆದ 12,715 ವಿದ್ಯಾರ್ಥಿಗಳ ಪೈಕಿ 7,939 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, 4,776 ಮಂದಿ ಅನುತ್ತೀರ್ಣರಾಗಿದ್ದಾರೆ.
ಎರಡು ಶೈಕ್ಷಣಿಕ ಜಿಲ್ಲೆ ಫಲಿತಾಂಶದಲ್ಲಿ ಸಿರಾದ ವಾಸವಿ ಪ್ರೌಢಶಾಲೆ ವಿದ್ಯಾರ್ಥಿನಿ ಡಿ. ಹರ್ಷಿತಾ 625ಕ್ಕೆ 624 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
[3:41 ಠಿm, 9/5/2024] ಗಿeಟಿಞಚಿಣಚಿಛಿhಚಿಟಚಿ.ಊ.ಗಿ: ಶಿವಮೊಗ್ಗ ಜಿಲ್ಲೆ 28ರಿಂದ 3ನೇ ಸ್ಥಾನಕ್ಕೆ ಹೈಜಂಪ್ ಮಾಡಿದೆ.
ಕಳೆದ ವರ್ಷದ ಫಲಿತಾಂಶ ಹೋಲಿಸಿದರೆ ಈ ಬಾರಿ ಅಚ್ಚರಿಯ ಫಲಿತಾಂಶ ಕಂಡುಬಂದಿದೆ. ಈ ಸಲ ಫಲಿತಾಂಶ ಕಡಿಮೆ ಆಗಲು ವೆಬ್‍ಕಾಸ್ಟಿಂಗ್ ಕಾರಣ. ರಾಜ್ಯದ ಎಲ್ಲೆಡೆ ವೆಬ್‍ಕಾಸ್ಟಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಿದ್ದೇವೆ. ಇದನ್ನು ಎಲ್ಲ ಪೆÇೀಷಕರು, ಶಿಕ್ಷಕರು ಸ್ವಾಗತಿಸಿದ್ದಾರೆ ಎಂದು ಪರೀಕ್ಷೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಶೇ 30 ರಷ್ಟು ಫಲಿತಾಂಶ ಕಡಿಮೆಯಾಗಿತ್ತು. ಫಲಿತಾಂಶ ಉತ್ತಮಪಡಿಸಲು ಕೃಪಾಂಕ ಪಡೆಯಲು ಈಗ ಶೇ 25 ಫಲಿತಾಂಶ ಪಡೆದರೆ ಸಾಕು. ಕೃಪಾಂಕದ ಪ್ರಮಾಣವನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ. ಅಪೂರ್ಣ ಫಲಿತಾಂಶ ಪಡೆದಿರುವ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುವುದು ಎಂದು ಪರೀಕ್ಷಾ ಮಂಡಳಿ ನಿರ್ದೇಶಕ ಮಂಜುಳಾ ತಿಳಿಸಿದ್ದಾರೆ.
ಕರ್ನಾಟಕ ಎಸ್‍ಎಸ್‍ಎಲ್‍ಸಿ ಫಲಿತಾಂಶ 2024; ಜಿಲ್ಲಾವಾರು ಉತ್ತೀರ್ಣ ಪ್ರಮಾಣ
ಕರ್ನಾಟಕ 10ನೇ ತರಗತಿ ಫಲಿತಾಂಶ 2024 ಪ್ರಕಟವಾಗಿದ್ದು, ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಗಮನಿಸಿದರೆ, ಕಳೆದ ವರ್ಷ ಉತ್ತಮ ಸಾಧನೆ ತೋರಿದ್ದ ಜಿಲ್ಲೆಗಳೆಲ್ಲವೂ ಈ ಬಾರಿ ಭಾರಿ ಕುಸಿತ ಕಂಡಿವೆ. ಕೆಳಗೆ ಜಿಲ್ಲಾವಾರು ಉತ್ತೀರ್ಣ ಪ್ರಮಾಣ ಮತ್ತು ಕಳೆದ ವರ್ಷದ ಉತ್ತೀರ್ಣ ಪ್ರಮಾಣವನ್ನು ನೀಡಲಾಗಿದೆ.
ಉಡುಪಿ ಶೇ 94 (89.49), ದಕ್ಷಿಣ ಕನ್ನಡ ಶೇ 92.12 (89.47),3 ಶಿವಮೊಗ್ಗ ಶೇ 88.67 (84.04), ಕೊಡಗು ಶೇ 88.67 (93.19), ಉತ್ತರ ಕನ್ನಡ ಶೇ 86.54 (90.53), ಹಾಸನ ಶೇ 86.28 (96.68), ಮೈಸೂರು ಶೇ 85.5 (89.75), ಶಿರಸಿ ಶೇ 84.64 (87.39), ಬೆಂಗಳೂರು ಗ್ರಾಮಾಂತರ ಶೇ 83.67 (96.48), ಚಿಕ್ಕಮಗಳೂರು ಶೇ 83.39 (89.69), ವಿಜಯಪುರ ಶೇ 79.82 (91.23), ಬೆಂಗಳೂರು ದಕ್ಷಿಣ ಶೇ 79 (78.95), ಬಾಗಲಕೋಟೆ ಶೇ 77.92 (85.14), ಬೆಂಗಳೂರು ಉತ್ತರ ಶೇ 77.09 (80.93) ಹಾವೇರಿ ಶೇ 75. 85 (89.11), ತುಮಕೂರು ಶೇ 75.16 (89.43),ಗದಗ ಶೇ 74.76 (86.51), ಚಿಕ್ಕಬಳ್ಳಾಪುರ ಶೇ 73.61 (96.15), ಮಂಡ್ಯ ಶೇ 73.59 (96.74), ಕೋಲಾರ ಶೇ 73.57 (94.6), ಚಿತ್ರದುರ್ಗ-72.85 (96.8), ಧಾರವಾಡ-72.67 (86.55), ದಾವಣಗೆರೆ-72.49 (90.43), ಚಾಮರಾಜನಗರ-71.59 (94.37), ಚಿಕ್ಕೋಡಿ-69.82 (91.07), ರಾಮನಗರ-69.53 (89.42), ವಿಜಯನಗರ-65.61 (91.41),ಬಳ್ಳಾರಿ-64.99 (81.54), ಬೆಳಗಾವಿ-64.93 (85.85), ಮಧುಗಿರಿ-62.44 (93-23), ರಾಯಚೂರು-61.2 (84.02), ಕೊಪ್ಪಳ-61.16 (90.27), ಬೀದರ್-57.52 (78.73), ಕಲಬುರಗಿ-53.04 (84.51), ಯಾದಗಿರಿ-50.59 (75.49) ಆವರಣದಲ್ಲಿರುವುದು ಹಿಂದಿನ ವರ್ಷದ ಶೇಕಡವಾರು ಫಲಿತಾಂಶ.