ರಾಜ್ಯದಲ್ಲಿ ಪ್ರಬಲವಾದ ಪರ್ಯಾಯ ರಾಜಕೀಯ ಶಕ್ತಿ ಉದಯವಾಗ ಬೇಕು- ಮಾರಸಂದ್ರ ಮುನಿಯಪ್ಪ

ತುಮಕೂರು: ಮಾತನಾಡಿ,ರಾಜ್ಯದಲ್ಲಿ ಇದುವರೆಗೂ ಆಡಳಿತ ನಡೆಸಿರುವ ಮೂರು ಪಕ್ಷಗಳು ಹೈಕಮಾಂಡ್ ಕೈಗೊಂಬೆಗಳಾಗಿ ರಾಜ್ಯದ ಹಿತ ಮರೆತಿವೆ.ಇದರ ಪರಿಣಾಮ ನೀರಾವರಿ,ತೆರಿಗೆ, ಜಿ.ಎಸ್.ಟಿ. ಪಾಲು ಹಂಚಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ.ಇದರ ವಿರುದ್ದ ದ್ವನಿ ಎತ್ತಬೇಕೆಂದರೆ ರಾಜ್ಯದಲ್ಲಿ ಪ್ರಬಲವಾದ ಪರ್ಯಾಯ ರಾಜಕೀಯ ಶಕ್ತಿ ಉದಯವಾಗುವ ಅನಿವಾರ್ಯವಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಅಲ್ ಇಂಡಿಯಾ ಬಿ.ಎಸ್.ಪಿ.ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದರು.

ನಗರದ ಕನ್ನಡ ಭವನದಲ್ಲಿ ನವಕರ್ನಾಟಕ ನಿರ್ಮಾಣ ಆಂದೋಲನದವತಿಯಿಂದ ಜನರ ನಡುವೆ ಜನತಾ ಪ್ರಾಣಾಳಿಕೆ ಚರ್ಚೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಡಿ.ಎಸ್.ಎಸ್. ರಾಜ್ಯಾಧ್ಯಕ್ಷರು ಹಾಗೂ ರಿಪಬ್ಲಿಕ್ ಪಾರ್ಟಿ ಅಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್.ಮೂರ್ತಿ ಮಾತನಾಡಿ ಅರ್ಥಿಕ,ಸಾಮಾಜಿಕ ಸಮಾನತೆಯಿಲ್ಲದ ಜನರಿಗೆ,ಸಂವಿಧಾನದ ಮೂಲಕ ರಾಜಿಕೀಯ ಸಮಾನತೆಯನ್ನು ನೀಡಿದ್ದೇನೆ.ಪ್ರಜಾಪ್ರಭುತ್ವದಲ್ಲಿ ಅರ್ಥಿಕ, ಸಾಮಾಜಿಕ ಸಮಾನತೆ ದೊರೆಯದಿದ್ದರೆ ಜನ ಧಂಗೆ ಏಳುತ್ತಾರೆ ಎಂಬ ಬಾಬಾ ಸಾಹೇಬರ ಮಾತನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.ಪ್ರಜಾತಾಂತ್ರಿಕ ವ್ಯವಸ್ಥೆಯಾದ ಹೋರಾಟದ ಮೂಲಕ ಅರ್ಥಿಕ,ಸಾಮಾಜಿಕ ಸಮಾನತೆ ಗಳಿಸುವತ್ತ ನಾವೆಲ್ಲರೂ ಮುಂದಾಗಬೇಕಿದೆ ಎಂದು ತಿಳಿಸಿದರು.

ದೇಶದಲ್ಲಿರುವ ಎಲ್ಲಾ ಜನರಿಗೂ ಶಿಕ್ಷಣ, ಉದ್ಯೋಗ, ವಸತಿ, ಸಂಪತ್ತಿನಲ್ಲಿ ಸಮಾನ ಅವಕಾಶಗಳು ಸಿಗಬೇಕೆಂದು ಪ್ರತಿಪಾದಿಸಿದ್ದರು, ಇದುವರೆಗೂ ನಮ್ಮನ್ನಾಳಿದ ಪಕ್ಷಗಳು ಈ ನಿಟ್ಟಿನಲ್ಲಿ ಯಾವ ಬದಲಾವಣೆಯನು ತಂದಿಲ್ಲ ಎಂದರು.

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ,ಇದುವರೆಗೂ ರಾಜ್ಯದಲ್ಲಿ ಆಳ್ವಿಕೆ ಮಾಡಿದ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಜನರ ದ್ವನಿಯಾಗಿ ಕೆಲಸ ಮಾಡಿಲ್ಲ. ಇಂದಿನ ಸರಕಾರ ಜನರಿಗೆ ಗ್ಯಾರಂಟಿ ನೀಡಿರುವುದು 2028ರ ಚುನಾವಣೆಯಲ್ಲಿ ತಮ್ಮ ಪಕ್ಷದ ಮತಗಳ ಗ್ಯಾರಂಟಿಗೋಸ್ಕರ. ಸರಕಾರದ ಗ್ಯಾರಂಟಿಯೋಜನೆಗಳು ಜನರ ಬಡತನ, ನಿರುದ್ಯೋಗ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಯಾಗಿಲ್ಲ. ಬದಲಾಗಿ ಪಕ್ಷಗಳಿಗೆ ಒಟ್ ಬ್ಯಾಂಕ್ ತಂದುಕೊಡುವ ಯೋಜನೆಗಳಾಗಿವೆ. ರಾಜ್ಯದಲ್ಲಿ ಕೃಷ್ಣಾ ಕೊಳ್ಳದ ಜನರು ತಮ್ಮ ಬೆಳೆಗಳಿಗೆ ನೀರಿಲ್ಲದೆ ಪರಿತಪಿಸುತಿದ್ದಾರೆ. ದಿಕ್ಕು ತಪ್ಪಿದ ರೀತಿಯಲ್ಲಿ ರಾಜ್ಯದ ಆಡಳಿತ ನಡೆಯುತ್ತಿದೆ.ಬಿಜೆಪಿ ಪಕ್ಷ ಭಾರತ್ ಮಾತಾಕಿ ಜೈ, ಜೈಶ್ರೀರಾಮ್ ಇವೆಲ್ಲವೂ ಒಟ್ ಬ್ಯಾಂಕ್ ರಾಜಕಾರಣದ ಭಾಗವೇ ಆಗಿವೆ.ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಿ, ಹೊಸ ಪಕ್ಷದ ಉದಯಕ್ಕೆ ಮುಂದಾಗೋಣ ಎಂದರು.

ವೇದಿಕೆಯಲ್ಲಿ ಬಿ.ಎಸ್.ಪಿ ರಾಜ್ಯ ಉಪಾಧ್ಯಕ್ಷ ಗುರುಮೂರ್ತಿ,ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಪಿಎನ್.ರಾಮಯ್ಯ, ಜಯಕರ್ನಾಟ್ಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಅರುಣಗೌಡ,ಆರ್.ಪಿ.ಐ ರಾಜ್ಯಾಧ್ಯಕ್ಷ ಮೋಹನ್‍ರಾಜ್, ಕನ್ನಡ ಹೋರಾಟಗಾರರಾದ ಶಿವರಾಮ್, ಬಹುಜನ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್.ರಮೇಶ್,ಟಿಪ್ಟು ಕ್ರಾಂತಿ ಸೇನೆಯ ಡಾ.ದಸ್‍ಗೀರ್ ಮುಲ್ಲಾ, ಕರ್ನಾಟಕ ಸಮತಾ ಸೈನಿಕ ದಳದ ರಾಧಾಕೃಷ್ಣ, ಚನ್ನಕೃಷ್ಣಪ್ಪ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರುಣಕುಮಾರ್, ಎನ್., ಡಾ.ಪುನಿತ್ ರಾಜಕುಮಾರ್ ವೀರ ಕನ್ನಡಿಗರ ವೇದಿಕೆಯ ಡಾ.ಮದರಸಾ ಮುಜಾವರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ನಗರದ ಟೌನ್‍ಹಾಲ್ ವೃತ್ತದಿಂದ ಕನ್ನಡ ಭವನದವರೆಗೆ ಕರ್ನಾಟಕ ಜನಪರ ನಿರ್ಮಾಣ ಆಂದೋಲನದವತಿಯಿಂದ ಮರವಣಿಗೆ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *