ವಿದ್ಯಾರ್ಥಿಗಳು ಮೊಬೈಲ್ ಪಕ್ಕಕ್ಕಿಟ್ಟು ಪುಸ್ತಕ ಓದಿ

ತಿಪಟೂರು: ಮೊಬೈಲ್ ಕೇವಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ವಸ್ತುವಾಗ ಬೇಕೇ ಹೊರತು, ಮಾರಕ ವಸ್ತುವಾಗಬಾರದು ವಿದ್ಯಾರ್ಥಿಗಳು ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಪುಸ್ತಕ ಹಿಡಿದು ಓದಬೇಕು. ಯಾವುದಾದರೂ ಸರಿಯೇ ಒಳ್ಳೆಯದನ್ನು ಕಲಿಯಬೇಕು ಎಂದು ಪ್ರಸಿದ್ಧ ರಂಗಭೂಮಿ ಕಲಾವಿದರು ಮತ್ತು ಕೇಂದ್ರಸಾಹಿತ್ಯ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕøತರಾದ ಡಾ|| ಲಕ್ಷ್ಮಣ ದಾಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2024-25 ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್., ಎನ್. ಸಿ. ಸಿ., ದಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್, ಐ ಕ್ಯೂ ಎ ಸಿ ಮತ್ತು ಇತರೆ ಘಟಕಗಳ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನೀವೆಲ್ಲರೂ ತಾಯಿಗೆ ಹೆಚ್ಚು ಗೌರವ ಕೊಡಬೇಕು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಬಹಳ ಎತ್ತರಕ್ಕೆ ಎತ್ತರಕ್ಕೆ ಬೆಳೆದಷ್ಠು ಜನರು ನಿಮ್ಮ ಹತ್ತಿರ ಹಗುತ್ತಾರೇ ಬಸವಣ್ಣನವರ ವಚನಗಳನ್ನು ಹಾಗೂ ಪುರಂದರದಾಸರ ಕೀರ್ತನೆಗಳನ್ನು ಕಲಿಯಬೇಕು. ಪ್ರಸಿದ್ಧ ಹಾಸ್ಯ ನಟರಾದ ನರಸಿಂಹ ರಾಜು ಅವರು ಈ ಕ್ಷೇತ್ರದವರೇ. ಇಂತಹ ಹಲವಾರು ಕಲಾವಿದರು ಈ ನಾಡಿನಲ್ಲಿ ಹುಟ್ಟಿದ್ದಾರೆ. ಅವರನ್ನೊಮ್ಮೆ ಸ್ಮರಿಸಬೇಕು. ಕಾಲೇಜಿನಲ್ಲಿ ಉತ್ತಮವಾಗಿ ಪಾಠ ಮಾಡುವ ಶಿಕ್ಷಕ ವೃಂದವಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಮಾಡಿದ ತಿಪಟೂರಿನ ನಗರಸಭೆಯ ಅಧ್ಯಕ್ಷರಾದ ಯಮುನಾ ಧರಣೇಶ್ ಮಾತನಾಡಿ ಜ್ಞಾನವನ್ನು ಬಯಸುವವನೇ ನಿಜವಾದ ವಿದ್ಯಾರ್ಥಿ. ವಿದ್ಯಾರ್ಥಿಯು ತನ್ನ ಜ್ಞಾನ ಹೆಚ್ಚಿಸುವ ವಿಷಯದ ಕಡೆ ಗಮನಹರಿಸಬೇಕು. ವಿದ್ಯಾರ್ಥಿಗಳಲ್ಲಿ ಪ್ರಮುಖವಾಗಿ ಐದು ಗುಣಗಳಿರಬೇಕು. ಪರಿಶ್ರಮ, ಫೆÇೀಕಸ್, ಅಲಟ್ರ್ನೆಸ್, ಈಟ್ಲೆಸ್ ಮತ್ತು ಗೃಹತ್ಯಾಗಿ ಎಂಬ ಐದು ಗುಣಗಳು ಒಬ್ಬ ವ್ಯಕ್ತಿಯನ್ನು ಉತ್ತಮ ವಿದ್ಯಾರ್ಥಿಯನ್ನಾಗಿ ರೂಪಿಸಲು ಸಹಾಯ ಮಾಡುತ್ತವೆ. ವಿದ್ಯಾರ್ಥಿಗಳು ಓದುವುದರ ಕಡೆ ಮನಸ್ಸನ್ನು ಕೇಂದ್ರೀಕರಿಸಬೇಕು. ಸಾಧ್ಯವಾದಷ್ಟು ಮನೆಯಿಂದ ಹೊರಗಿದ್ದು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕು. ಸುತ್ತಮುತ್ತ ಇರುವ ವ್ಯಕ್ತಿಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು. ವಿದ್ಯಾರ್ಥಿಗಳು ಪಟ್ಟದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪೆÇ್ರಫೆಸರ್ ಡಾ|| ಹೆಚ್. ಬಿ.ಕುಮಾರಸ್ವಾಮಿಯವರು ತಿಪಟೂರು ಒಂದು ಶೈಕ್ಷಣಿಕ ಕ್ಷೇತ್ರವಾಗಿದೆ. ಈ ಕಾಲೇಜಿಗೆ ಬಹಳ ದೂರದಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ತಂದೆ ತಾಯಿಯಂದಿರು ಬಹಳ ನಂಬಿಕೆ ಇಟ್ಟು ಇಲ್ಲಿಗೆ ಓದಲು ಕಳುಹಿಸಿರುತ್ತಾರೆ. ವಿದ್ಯಾರ್ಥಿಗಳಾದವರು ಉತ್ತಮ ರೀತಿಯಲ್ಲಿ ಓದಿ ತಂದೆ ತಾಯಿಗೆ ಮತ್ತು ಕಾಲೇಜಿಗೆ ಕೀರ್ತಿ ತಂದು ಕೊಡಬೇಕು ಎಂದು ಹೇಳಿದರು.

ಡಾ|| ಶಿವಕುಮಾರ್.ಸಿ.ಜಿ ಅವರು ಮಾತನಾಡಿ ಕಾಲೇಜಿಗೆ 2007ರಲ್ಲಿ ಈ ಕಾಲೇಜು ಪ್ರಾರಂಭವಾಯಿತು. ಇದರ ಮೊದಲ ಪ್ರಾಂಶುಪಾಲರು ಜಯದೇವಪ್ಪ. ಅಂದಿನಿಂದ ಇಲ್ಲಿಯವರೆಗೆ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಹಲವಾರು ರಾಂಕ್ ಗಳನ್ನು ಕೂಡ ಪಡೆದುಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಥವಾ ಕೌಶಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳು ಸರ್ಕಾರಿ ಕೆಲಸ ಪಡೆಯಲು ಉತ್ತೇಜನ ನೀಡುತ್ತಾ ಬಂದಿದೆ. ಎನ್ ಎಸ್ ಎಸ್ ಘಟಕವು ನಾಲ್ಕು ಹಂತಗಳಲ್ಲಿಯೂ ತನ್ನ ಕಾರ್ಯಗಳನ್ನು ಹಮ್ಮಿಕೊಂಡಿದೆ. ಎನ್ ಸಿ ಸಿ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಕ್ರೀಡೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಮುಂದಿದ್ದಾರೆ. ಈ ಕಾಲೇಜಿನಲ್ಲಿ ಕೆಲವು ಕೊರತೆಗಳಿವೆ. ಸರಿಯಾದ ನೀರಿನ ಸೌಲಭ್ಯವಿಲ್ಲ ಹಾಗೂ ಸರಿಯಾದ ಶೌಚಾಲಯ ನಿರ್ವಹಣೆ ಇಲ್ಲ. ಸುಮಾರು ಹತ್ತು ಸಾವಿರ ಲೀಟರ್ ಆರ್ ಓ ನೀರನ್ನು ನೀಡಬೇಕು ಎಂದು ನಗರಸಭಾ ಸದಸ್ಯರು ಹಾಗೂ ಅಧ್ಯಕ್ಷರ ಮುಂದೆ ಬೇಡಿಕೆಗಳನ್ನು ಇಟ್ಟರು.

ತುಮಕೂರಿನ ಸಿದ್ದಗಂಗಾ ಮಠದ ಉಪನ್ಯಾಸಕರಾದ ಬಾಲಚಂದ್ರ. ಎಂ. ,ಪಲ್ಲಗಟ್ಟಿ ಅಡವಪ್ಪ ಕಲಾ ಹಾಗೂ ವಾಣಿಜ್ಯ ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀನಿವಾಸ್ , ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಯೋಗೀಶ್, ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ,ಗಾಯಕರಾದ ದಿಬ್ಬೂರು ಮಂಜುನಾಥ್, ಕಾಲೇಜಿನ ಪೆÇೀಷಕರ ಸಂಘದ ಅಧ್ಯಕ್ಷರಾದ ಬಿಲ್ಲೆಮನೆ ಚಂದ್ರಶೇಖರ್,ಸಿ.ಡಿ.ಸಿ. ಸದಸ್ಯರಾದ ಝರಾ ಜಬೀನ್,ಉಪನ್ಯಾಸಕರಾದ ಡಾ.ಸ್ಮಿತಾ,ಡಾ,ಚಿಕ್ಕಹೆಗಡ್ಡೆ,ಡಾ,ಸುಭದ್ರಮ್ಮ,ಪತ್ರಿಕೋದ್ಯಮ ವಿಭಾಗದ ಶಂಕರಪ್ಪ ಹಾರೋಗೆರೆ,ನಾಗರಾಜು,ಸುರೇಶ್ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *