ತುಮಕೂರು : ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕಡೆ ಹೆಚ್ಚು ಗಮನ ಕೊಟ್ಟರೆ ಅದು ಬದುಕನ್ನು ಬದಲಿಸುತ್ತದೆ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಿ ವಿದ್ಯಾಭ್ಯಾಸದ ಕಡೆ ಗಮನ ನೀಡುತ್ತಿಲ್ಲ. ಪುಸ್ತಕಗಳನ್ನು ಓದುತ್ತಿಲ್ಲ, ಪುಸ್ತಕಗಳನ್ನು ಓದುವುದರಿಂದ ಸಮಾಜದಲ್ಲಿ ತಲೆಯೆತ್ತಿ ನಡೆಯಬಹುದು. ವಿದ್ಯಾರ್ಥಿಗಳು ಓದಿನ ಜೊತೆಗೆ ಸೃಜನಾತ್ಮಕ ಕಲೆ, ಸಂಸ್ಕøತಿ ಹಾಗೂ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಮಹಿಳೆಯರು ಶಿಕ್ಷಣದಲ್ಲಿ ತೋರಿಸುತ್ತಿರುವ ಅಸಕ್ತಿ ಬಗ್ಗೆ ಮತ್ತು ಅನನ್ಯ ಕಾಲೇಜು ಶಿಕ್ಷಣದ ಜೊತೆಗೆ ಇತರೆ ಕೌಶಲ್ಯಗಳ ಬಗ್ಗೆ ನೀಡುತ್ತಿರುವ ತರಬೇತಿ ಬಗ್ಗೆ ಮೆಚ್ಚುಗೆಯನ್ನು ಬೇಲೂರಿನ ಜಿ.ಪಿ.ಟಿ. ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್.ಎನ್ ರವರು ಅನನ್ಯ ಅಭುದಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಗರದ ವರಾನ ಗ್ಲೋಬಲ್ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ಅನನ್ಯ ಸಮೂಹ ಸಂಸ್ಥೆಯ ಅನನ್ಯ ಇನ್ಟ್ಸಿಟ್ಯೂಟ್ ಅಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‍ನ ವತಿಯಿಂದ “ಅನನ್ಯ ಅಭ್ಯುದÀಯ ಸಂಭ್ರಮ” 2024 ಜುಲೈ 12 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರು ವಿಶ್ವವಿದ್ಯಾಲಯ ಕುಲಸಚಿವರಾದ ನಹಿದಾ ಜಮ್ ಜಮ್‍ರವರು ಮಾತನಾಡುತ್ತಾ ತಮ್ಮ ಭಾಷಣದಲ್ಲಿ ಇತ್ತೀಚಿಗೆ ವಿಶ್ವವಿದ್ಯಾನಿಲಯಗಳಲ್ಲಿ ಹೊಸ ಹೊಸ ಕೋರ್ಸ್‍ಗಳ ಆಯ್ಕೆ ಇದ್ದರೂ ಸಹ ನಿರುದ್ಯೋಗ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ವಿದ್ಯಾರ್ಥಿಗಳು ಹೊಸ ಹೊಸ ಕೌಶಲ್ಯಗಳನ್ನು ಬಳಸಿಕೊಳ್ಳದೆ ಇರುವುದು ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು. ಹಾಗೂ ತಂದೆ-ತಾಯಿಯ ನಿಸ್ವಾರ್ಥ ಪ್ರೀತಿಯನ್ನು ಗೌರವಿಸಿ ನಿಮ್ಮ ಏಳಿಗ್ಗೆಯನ್ನು ಕಂಡು ಸಂತೋಷ ಪಡುವವರಿಬ್ಬರೆ. ನಿಮ್ಮ ಸಾಧನೆಯ ಮೂಲಕ ಜಗತ್ತಿಗೆ ಅವರನ್ನು ಪರಿಚಯಿಸಿ ಎಂದು ಅರ್ಥಪೂರ್ಣವಾಗಿ ವಿವರಿಸಿದರು.
ಇದೇ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಅನನ್ಯ ಕಾಲೇಜಿನ ವಿದ್ಯಾರ್ಥಿಗಳಾದ ಎರಡನೇ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಕು.ಲೇಖನಾ, ನಾಲ್ಕನೇ ರ್ಯಾಂಕ್ ಪಡೆದ ಸಹಾನ.ಜಿ ಇವರನ್ನು ಕುಲಸಚಿವರು ಸನ್ಮಾನಿಸಿದರು. ಕಾಲೇಜಿನ ವಾರ್ಷಿಕ ಕ್ರೀಡಾ ಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿಯೇ ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರವೀಣ್ ಎಸ್ ಶಿರಗುಪ್ಪರವರನ್ನು ಸನ್ಮಾನಿಸ ಲಾಯಿತ್ತು. ಕಾರ್ಯಕ್ರಮದ ವಿಶೇಷ ಆಹ್ವಾನಿತರಾದ ಬೇಲೂರಿನ ಜಿ.ಪಿ.ಟಿ. ಉಪನ್ಯಾಸಕರಾದ ನಾಗಶ್ರೀ ತ್ಯಾಗರಾಜ್.ಎನ್, ತುಮಕೂರು ವಿಶ್ವವಿದ್ಯಾಲಯ ಕುಲಸಚಿವರಾದ ನಹಿದಾ ಜಮ್ ಜಮ್, ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ಎಸ್.ನಾಗಣ್ಣ ಮತ್ತು ಗ್ರಾಮ ಪಂಚಾಯತಿ ಒಕ್ಕೂಟದ ಅಧ್ಯಕ್ಷರಾದ ಸತೀಶ್ ಕಾಡಶೆಟ್ಟಿಹಳ್ಳಿ ರವರನ್ನು ಸನ್ಮಾನಿಸಲಾಯಿತ್ತು.
ಇದೇ ಸಂದರ್ಭದಲ್ಲಿ ಪ್ರತಿಯೊಂದು ವಿಷಯಗಳಲ್ಲಿಯೂ ನೂರಕ್ಕೆ ನೂರು ಅಂಕ ಪಡೆದ ಪದವಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅನನ್ಯ ಸಂಸ್ಥೆಯ ಅಧ್ಯಕ್ಷರಾದ ಚಾರ್ಟರ್ಡ್ ಅಕೌಂಟೆಂಟ್ ಎಸ್.ವಿಶ್ವನಾಥ್‍ರವರು ಮಾತನಾಡುತ್ತಾ 2012ರಲ್ಲಿ ಪ್ರಾರಂಭವಾದಾಗಿನಿಂದ ಇಂದಿನವರೆಗೆ ನಡೆದು ಬರಲು ಕಾರಣಕರ್ತರಾದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು, ಹಿತೈಶಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಮ್ಮ ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉನ್ನತ ಶಿಕ್ಷಣ ನೀಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ನಾಟಕ, ನೃತ್ಯ, ಕಾಲೇಜ್‍ಡೇ ಕಾರ್ಯಕ್ರಮಕ್ಕೆ ಮೆರಗು ತಂದಿತ್ತು.
ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್‍ರವರು ಪ್ರಾಸ್ತಾವಿಕ ನುಡಿಗಳನ್ನಾಡಿದ ಅವರು ಅನನ್ಯ ಸಂಸ್ಥೆ ಬೆಳೆದು ಬಂದ ರೀತಿ ಇದರ ಕಾರ್ಯ ವೈಖರಿ ಮತ್ತು ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ವಂದನಾರ್ಪಣೆಯನ್ನು ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್‍ರವರು ವಂದಿಸಿದರು.
ಕಾರ್ಯಕ್ರಮದಲ್ಲಿ ವರಾನ ಗ್ಲೋಬಲ್‍ನ ಟ್ರಸ್ಟ್‍ನ ಉಪಾಧ್ಯಕ್ಷರಾದ ಬಿ.ಆರ್.ಉಮೇಶ್, ಕಾರ್ಯದರ್ಶಿಗಳಾದ ಪ್ರೊ.ಟಿ.ಎನ್. ಚೆನ್ನಬಸವಪ್ರಸಾದ್, ಟ್ರಸ್ಟಿಗಳಾದ ಹೆಚ್.ಎನ್.ಚಂದ್ರಶೇಖರ್, ಟಿ.ಎನ್.ಶ್ರೀಕಂಠಸ್ವಾಮಿ, ಎನ್.ವಿ.ಬಾಲಾಜಿ, ವಿ.ರಜತ್, ಅನನ್ಯ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಆರ್.ರಘು, ಪಿ.ಯು. ಸೈನ್ಸ್ ವಿಭಾಗದ ಮುಖ್ಯಸ್ಥರಾದ ರಂಗನಾಥಪ್ಪ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸರ್ವಮಂಗಳ ಮತ್ತು ಅನಂತಲಕ್ಷ್ಮಿ.ಆರ್ ರವರು ನಡೆಸಿಕೊಟ್ಟರು.