ಅದ್ದೂರಿಯಾಗಿ ನಡೆದ ತುಮಕೂರು ದಸರಾ: ಅಂಬಾರಿ ಹೊತ್ತು ಗಂಭೀರವಾಗಿ ನಡೆದ ಆನೆ ಲಕ್ಷ್ಮೀ

ಅಕ್ಟೋಬರ್ 12ರಂದು ಮಧ್ಯಾಹ್ನ ಒಂದು ಗಂಟೆ ಐವತ್ತು ನಿಮಿಷಕ್ಕೆ ಸರಿಯಾಗಿ ಡಾ. ಜಿ.ಪರಮೇಶ್ವರ್ ಅವರು ಲಕ್ಷ್ಮಿ ಆನೆ ಮೇಲೆ ಕೂರಿಸಲಾಗಿದ್ದ ನಾಡ ದೇವತೆಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ದಸರಾ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.

ದಸರಾ ಉತ್ಸವದ ಅಂಗವಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ವಿಂಟೇಜ್ ಕಾರ್ ಮೇಳ ಮತ್ತು ಹೆಲಿಕ್ಯಾಪ್ಟರ್ ಪ್ರದರ್ಶನವನ್ನು ಸಾವಿರಾರು ಸಂಖ್ಯೆಯಲ್ಲಿ ಜನರ ಬಂದು ವೀಕ್ಷಿಸಿದರು.


ಅಂಬಾರಿಯ ಮೆರವಣಿಗೆಯಲ್ಲಿ 70ಕ್ಕೂ ಹೆಚ್ಚು ತುಮಕೂರು ನಗರದ ದೇವತೆಗಳು, ಜಾನಪದ ಮಳಗಳು, ಕಲಾತಂಡಗಳು, ಹಳ್ಳಿಕಾರ್ ಎತ್ತುಗಳು ಭಾಗವಹಿಸಿದ್ದವು.

ಅಂಬಾರಿ ಸಾಗಿದ ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಅಂಬಾರಿ ಹೊತ್ತಿದ್ದ ಆನೆಯ ಲಕ್ಷ್ಮೀಯನ್ನು ಕೊಂಡಾಡಿದರು.

ಅಂಬಾರಿಯ ಮೆರವಣಿಗೆಯು ನಗರದ ಬಿ ಜಿ ಎಸ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಕೋತಿ ತೋಪು ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಸರ್ಕಲ್ ಮುಖಾಂತರ ಜೂನಿಯರ್ ಕಾಲೇಜ್ ತಲುಪಿತು.

ಜೂನಿಯರ್ ಕಾಲೇಜ್ ಮೈದಾನದಲ್ಲಿ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಅಂಬನ್ನು ಕಡಿಯುವುದರ ಮೂಲಕ ಹತ್ತು ದಿನಗಳ ದಸರಾಕ್ಕೆ ಇತಿಶ್ರೀ ಆಡಿದರು.

ದಸರಾ ಉತ್ಸವದ ಯಶಸ್ವಿಗೆ ಜಿಲ್ಲಾಧಿಕಾರಿಗಳಾದ ಶುಭಕಲ್ಯಾಣ ಜಿಲ್ಲಾ ಪಂಚಾಯತಿ ಸಿ.ಇ.ಓ. ಪ್ರಭು.ಜಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಕೆ ವಿ ಅವರು ಕಳೆದ 9 ದಿನಗಳಿಂದ ಅವಿರತವಾಗಿ ಶ್ರಮವಹಿಸಿದ್ದರು.

ಜೂನಿಯರ್ ಕಾಲೇಜ್ ಮೈದಾನದಲ್ಲಿ ಕೊಂಬು ಕಡಿದ ನಂತರ ಹಾಡುಗಾರ ವಿಜಯ ಪ್ರಕಾಶ್ ಅವರಿಂದ ರಸ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಅಂಬಾರಿ ಮೆರವಣಿಗೆಯು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ಆನೆ ಲಕ್ಷ್ಮೀಯು ಅಂಬಾರಿ ಹೊತ್ತು ಗಜಗಂಭೀರದಿಂದ ನಡೆಯಿತು.

Leave a Reply

Your email address will not be published. Required fields are marked *