ಕುಮಾರಸ್ವಾಮಿ ಮು.ಮಂ. ಆಗಲು ಕೊರಟಗೆರೆಯಲ್ಲಿ ಸುಧಾಕರಲಾಲ್ ಗೆಲ್ಲಬೇಕು

ಕೊರಟಗೆರೆ- ಕರ್ನಾಟಕದಲ್ಲಿ ಬಡವರಿಗಾಗಿ, ರೈತರಿಗಾಗಿ ಮತ್ತೊಂಮ್ಮೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಹಾಗೂ ಕೊರಟಗೆರೆ ಕ್ಷೇತ್ರದಲ್ಲಿ ಸುಧಾಕರಲಾಲ್ ಗೆಲ್ಲಬೇಕು ಎಂದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ತಿಳಿಸಿದರು.

ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿ ದೇಶದಲ್ಲಿ ಎಲ್ಲಾ ವರ್ಗದ ಜನರಿಗೆ ಮೀಸಲಾತಿ ನೀಡಿದ್ದು ನಾನು, ಮಹಿಳೆಯರಿಗೆ ಮುಸ್ಲಿಂಮರಿಗೆ ಮೀಸಲಾತಿ ನೀಡಿದ್ದೇನೆ, ರಾಜ್ಯದ ಬಡವರಿಗೆ, ರೈತರಿಗಾಗಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕು, ಅದಕ್ಕಾಗಿ ಸುದಾಕರಲಾಲ್ ರವರನ್ನು ಗೆಲ್ಲಿಸಬೇಕು ಕುಮಾರಸ್ವಾಮಿಗೆ ಬಲ ತುಂಬಬೇಕು, ಕೊರಟಗೆರೆ ಕ್ಷೇತ್ರದಲ್ಲಿ ಸುದಾಕರಲಾಲ್ ಒಳ್ಳೆಯ ಹುಡುಗ ಅವನನ್ನು ಗೆಲ್ಲಿಸಿ, 1994 ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ತುಮಕೂರು ಜಿಲ್ಲೆಯಲ್ಲಿ 9 ಜನ ನಮ್ಮ ಪಕ್ಷದ ಶಾಸಕರು ಗೆದ್ದಿದರು, ಮತ್ತೆ ತುಮಕೂರಿನಲ್ಲಿ ಆ ರೀತಿಯಾಗಬೇಕು ಎಂದರು.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಹಿಬ್ರಾಹಿಂ ಮಾತನಾಡಿ ದೇವೇಗೌಡರುÀ ತಮ್ಮ ಇಳಿ ವಯಸ್ಸಿನಲ್ಲಿ ರೈತರಿಗಾಗಿ ದುಡಿಯುತ್ತಿದ್ದಾರೆ, ರಾಜ್ಯದಲ್ಲಿ ಕುಮಾರಸ್ವಾಮಿಯವರಿಂದ ಮಾತ್ರ ಬಡವರಿಗೆ ಪಂಚರತ್ನ ಯೋಜನೆಯಲ್ಲಿ ಎಲ್ಲವು ಕೊಡಲು ಸಾದ್ಯ, ಕೊರಟಗೆರೆ ಶಾಸಕ ಪರಮೇಶ್ವರ ಜಿರೋ ಟ್ರಾóಷಿಕ್ ಮಂತ್ರಿ ಸುಧಾಕರಲಾಲ್ ಸಾಧಾರಣ ವ್ಯಕ್ತಿ ಅವರನ್ನು ಗೆಲ್ಲಿಸಿ ಪರಮೇಶ್ವರರನ್ನು ಮನೆಗೆ ಕಳುಹಿಸಿ, ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ದುರ್ಬಲ ಅಭ್ಯರ್ಥಿ ಇಕ್ಬಲ್ ಅಹಮದ್ ರವರನ್ನು ಹಾಕಿಸಿ ಬಿಜೆಪಿಗೆ ಸಹಾಯವಾಗುವಂತೆ ಮಾಡಿ ಇಲ್ಲಿ ಗೆಲ್ಲಲು ಬಿಜೆಪಿಯವರಿಂದ ಒಳ ಒಪ್ಪಂದ ಮಾಡಿಕೊಂಡಿದ್ದಾರೆ, ಮೋದಿ ಅಚ್ಚೆ ದಿನ್ ಎನ್ನುತ ಜನರ ಜೀವನ ಹಾಳು ಮಾಡುತ್ತಿದ್ದಾರೆ, ನಮ್ಮ ಹಿಜಾಬ್ ಮತ್ತು ಆಹಾರ ಮೇಲೆ ಕಣ್ಣು ಹಾಕಿರುವ ಬಿಜೆಪಿಯವರಿಗೆ ನಮ್ಮವರು ತಕ್ಕ ಪಾಠ ಕಲಿಸುತ್ತಾರೆ, ಆದರಿಂದ ಕೊರಟಗೆರೆಯಲ್ಲಿ ಸುದಾಕರಲಾಲ್ ಗೆಲ್ಲಿಸಿ ಎಂದರು.

ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ನಾನು ಶಾಸಕನಾದಾಗ 25 ಕ್ಕೂ ಹೆಚ್ಚು ಚೆಕ್ ಡ್ಯಾಂ ಮಾಡಿಸಿ ನೂರಾರು ಬೋರ್‍ವೆಲ್ ಕೊರೆಸಿ ರೈತರಿಗೆ ಅನುಕೂಲ ಮಾಡಿದ್ದೇನೆ, 35000 ಜನರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದೇನೆ, ಕೊವಿಡ್ ಸಂದರ್ಬದಲ್ಲಿ ನಿಮ್ಮ ಜೊತೆ ಇದ್ದೇನೆ, ನನ್ನ ಜೊತೆ 15 ದಿನ ದುಡಿಯಿರಿ 5 ವರ್ಷ ನಿಮ್ಮೊಂದಿಗೆ ಇರುತ್ತೇನೆ ಎಂದರು.

ಸಮಾರಂಭದಲ್ಲಿ ಪಕ್ಷದ ಜಿಲ್ಲಾದ್ಯಕ್ಷ ಅಂಜಿನಪ್ಪ, ರಾಜ್ಯ ಹಿಂದುಳಿದ ವರ್ಗಗಳ ಕಾರ್ಯಾದ್ಯಕ್ಷ ಮಹಾಲಿಂಗಪ್ಪ, ಅಂದಾನಪ್ಪ, ಕುಸುಮಾ, ನರಸಿಂಹರಾಜು, ಲಕ್ಷ್ಮಣ್, ಲಕ್ಷೀಶ್, ಕಿಶೋರ್, ಪ್ರಕಾಶ್, ವೆಂಕಟೇಶ್, ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

ಚಿತ್ರ- ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೊಬಳಿ ಕೇಂದ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸುತ್ತಿರುವ ಮಾಜಿ ಪ್ರದಾನಿ ದೇವೇಗೌಡ, ರಾಜ್ಯಾದ್ಯಕ್ಷ ಸಿ.ಎಂ, ಇಬ್ರಾಹಿಂ, ಮಾಜಿ ಶಾಸಕ ಸುಧಾಕರಲಾಲ್, ಮಹಾಲಿಂಗಪ್ಪ ಸೇರಿದಂತೆ ಇತರರು.

Leave a Reply

Your email address will not be published. Required fields are marked *