ತುಮಕೂರು : ತುಮಕೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅವರಿಗೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಅಭಿಮಾನಿಗಳು ಎನ್.ಗೋವಿಂದರಾಜು, ಶಾಸಕರು, ತುಮಕೂರು ಎಂಬ ನಾಮ ಫಲಕ ನೀಡಿರುವುದು ಅಚ್ಚರಿಯನ್ನುಂಟು ಮಾಡಿದ್ದಾರೆ.
ಫಲಿತಾಂಶ ಪ್ರಕಟವಾಗಲು ಮೇ 13ರ ಮಧ್ಯಾಹ್ನವಾದರೂ ಕಾಯಬೇಕು, ಫಲಿತಾಂಶಕ್ಕೂ ಒಂದು ದಿನ ಮುಂಚೆಯೇ ಗೋವಿಂದರಾಜು ಬೆಂಬಲಿಗರು ಅತಿಯಾದ ಆತ್ಮ ವಿಶ್ವಾಸದಿಂದ ಈ ನಾಮ ಫಲಕ ನೀಡಿರುವುದು ನಗೆ ಪಾಟಿಲಿಗೆ ಗುರಿಯಾಗಲಿದೆಯೋ ಅಥವಾ ಇವರಿಗೆ ಸಿಹಿ ನೀಡಲಿದೆಯೋ ನಾಳೆ ಮಧ್ಯಾಹ್ನದ ತನಕ ಕಾಯ ಬೇಕಾಗಿದೆ.
ತುಮಕೂರು ರಾಜಕೀಯ ಇತಿಹಾಸದಲ್ಲಿ ಯಾರೂ ಫಲಿತಾಂಶಕ್ಕೂ ಮುನ್ನ ಬೆಂಬಲಿಗರು ಮೊದಲೇ ಶಾಸಕರ ಫಲಕ ನೀಡಿದ ಉದಾಹರಣೆಗಳಿಲ್ಲ, ವೈ.ಕೆ.ರಾಮಯ್ಯನವರಿಗೆ ಕೆಲ ಅಭಿಮಾನಿಗಳು ಮನೆಗೆ ಹೋಗಿ ನೀವು ಗೆದ್ದಿದ್ದೀರಿ ಎಂದು ಫಲಿತಾಂಶಕ್ಕೂ ಮೊದಲೇ ಹಾರ ಹಾಕಲು ಹೋಗಿ ಹಿಗ್ಗಾ-ಮುಗ್ಗಾ ಬೈಯಿಸಿಕೊಂಡಿದ್ದರು, ಆ ಚುನಾವಣೆಯಲ್ಲಿ ವೈ.ಕೆ.ರಾಮಯ್ಯ ಪರಾಭವಗೊಂಡಿದ್ದರು.
ಒಟ್ಟಿನಲ್ಲಿ ತುಮಕೂರು ಜೆಡಿಎಸ್ ಕಾರ್ಯಕರ್ತರು ಫಲಿತಾಂಶಕ್ಕಿಂತ ಮೊದಲೇ ಎನ್.ಗೋವಿಂದರಾಜು ಅವರನ್ನು ಶಾಸಕರನ್ನಾಗಿ ಮಾಡಿರುವುದು ಎದುರಾಳಿಗಳಿಗೆ ಫಲಿತಾಂಶಕ್ಕಿಂತ ಮೊದಲೇ ಸೋಲಿಸಿದ್ದೇವೆ ಎಂಬ ಸಂದೇಶವೆ ಎಂಬುದು ನಾಳೆ ಮಧ್ಯಾಹ್ನ ತಿಳಿಯಲಿದೆ.
ಒಟ್ಟಿನಲ್ಲಿ ಜೆಡಿಎಸ್ ಅಭಿಮಾನಿಗಳು ಫಲಿತಾಂಶ ಬರುವ ಮುನ್ನವೇ ಗೋವಿಂದರಾಜುರವರನ್ನು ಶಾಸಕರನ್ನಾಗಿ ಮಾಡಿ ಖುಷಿ ಪಟ್ಟಿದ್ದಾರೆ.