ರೋಪ್ ವೇನಲ್ಲಿ ಜಾರಿ ಸಂಭ್ರಮಿಸಿದ ಸುರೇಶ್‍ಗೌಡ್ರು

ತುಮಕೂರು: ನಗರದ ಅಮಾನಿಕೆರೆ ಅಂಗಳದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ರೋಪ್ ವೇ (ಜಿಪ್ ಲೈನ್)ನಲ್ಲಿ ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡರು ಜಾರಿ, ಗಾಳಿಯಲ್ಲಿ ತೇಲಿ ಸಂಭ್ರಮಿಸಿದರು. ದಿನನಿತ್ಯ ಇಲ್ಲಿಗೆ ವಾಯುವಿಹಾರ ಮಾಡಲು ಬರುವ ಶಾಸಕರು ಶುಕ್ರವಾರ ಬೆಳಿಗ್ಗೆ ರೋಪ್ ವೇ ಬಳಸಿದರು.

ಅಮಾನಿಕೆರೆ ಅಂಗಳ ನಗರದ ಪ್ರಮುಖ ಮನರಂಜನಾ ತಾಣವಾಗಿದೆ. ಸುಮಾರು 500 ಎಕರೆ ವಿಸ್ತೀರ್ಣದ ಜಲಭರ್ತಿ ಕೆರೆ ಅಂಗಳದಲ್ಲಿ ಗಿಡಮರಗಳ ಹಸಿರುವನ, ಅಂಕಾರಿಕ ಹೂವಿನ ಗಿಡಗಳು ಗಮನ ಸೆಳೆಯುತ್ತದೆ. ವಾಯು ವಿಹಾರ ಮಾಡುವವರಿಗೆ ಈ ಸ್ಥಳ ಪ್ರಶಸ್ತವಾಗಿದೆ ಎಂದು ಸುರೇಶ್‍ಗೌಡರು ಹೇಳಿದರು.

ಅಮಾನಿಕೆರೆಯಲ್ಲಿ ಫುಡ್ ಪಾರ್ಕ್, ದೋಣಿ ವಿಹಾರ, ಮಕ್ಕಳ ಆಟದ ಪರಿಕರಗಳ ಜೊತೆಗೆ ಈಗ ನಗರಾಭಿವೃದ್ಧಿ ಪ್ರಾಧಿಕಾರ ರೋಪ್ ವೇ ಸಿದ್ಧಪಡಿಸಿದ್ದು, ಶೀಘ್ರವೇ ಸಾರ್ವಜನಿಕರ ಬಳಕೆಗೆ ಉದ್ಘಾಟನೆಯಾಗಲಿದೆ. ಅಮಾನಿಕೆರೆ ಆವರಣ ಆಕರ್ಷಣೀಯ ತಾಣವಾಗಿ ಎಲ್ಲರನ್ನೂ ಸೆಳೆಯುತ್ತದೆ. ಇಂದಿನ ಒತ್ತಡದ ಬದುಕಿನಲ್ಲಿ ಬಳಲುತ್ತಿರುವವರಿಗೆ ಅಮಾನಿಕೆರೆ ಅಂಗಳ ಮನೋಲ್ಲಾಸ ತಾಣವಾಗಲಿದೆ. ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಇಲ್ಲಿಗೆ ಬಂದು ಆನಂದಪಡಬಹುದು ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಅಮಾನಿಕೆರೆ ಅಂಗಳ ಆಕರ್ಷಣೀಯವಾಗಿ ಅಭಿವೃದ್ಧಿ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಟೂಡಾ ಆಯುಕ್ತ ಉಮೇಶ್ ಅವರು ಅಮಾನಿಕೆರೆ ಅಭಿವೃದ್ಧಿಕೆ ಕಾಳಜಿವಹಿಸಿದ್ದಾರೆ ಎಂದು ಶಾಸಕ ಸುರೇಶ್‍ಗೌಡರು ಶ್ಲಾಘಿಸಿದರು.

Leave a Reply

Your email address will not be published. Required fields are marked *