ತುಮಕೂರು : ಗೊರೂರು ಹೇಮಾವತಿ ಜಲಾಶಯದಲ್ಲಿ 15 ಟಿಎಂಸಿಯಷ್ಟು ಮಾತ್ರ ನೀರು ಇದ್ದು, ತುಮಕೂರಿಗೆ ಬಾಕಿ ಇರುವ ನೀರನ್ನು ಈ ತಿಂಗಳ ಕೊನೆಗೆ ಅಥವಾ ಮುಂದಿನ ತಿಂಗಳ ಮಧ್ಯಭಾಗದಲ್ಲಿ ಹರಿಸುವಂತೆ ಕೋರಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಹೇಳಿದರು.
ಗಣರಾಜ್ಯೋತ್ಸವದ ಕಾರ್ಯಕ್ರಮದ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು,
ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹಾಸನ ಜಿಲ್ಲಾ ಉಸ್ತುವಾರಿಯಾಗಿರುವುದರಿಂದ ತುಮಕೂರಿಗೆ ನೀರು ಹರಿಸಲು ಹೆಚ್ಚು ಅನುಕೂಲವಾಗುತ್ತಿದೆ ಎಂದರು.
ತುಮಕೂರು ಗ್ರೇಟರ್ ದೆನ್ ಬೆಂಗಳೂರು ಮಾಡುವುದಕ್ಕಾಗಿ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಯೋಜನೆಯನ್ನು ತರಲು ಎಲ್ಲಾ ರೀತಿಯ ತಯಾರಿ ನಡೆದಿದೆ
ಬೆಂಗಳೂರು ಸುತ್ತಮುತ್ತಲಿನ ನಗರಗಳಿಗೆ ಸಂಪರ್ಕಕ್ಕೆ ಹೆಚ್ವು ಒತ್ತು ನೀಡಬೇಕು. ತುಮಕೂರಿಗೆ ಮೆಟ್ರೋ ರೈಲು ಯೋಜನೆಗೆ ಸಿಎಂ ಮತ್ತು ಡಿಸಿಎಂಗೆ ಮನವಿ ಮಾಡಲಾಗಿದೆ.ಡಿಪಿಅರ್ ಮಾಡಲು ಸೂಚಿಸಲಾಗಿದೆ. ಇದಕ್ಕೆರಾಜ್ಯ ಸರ್ಕಾರ ಒಪ್ಪಿಗೆ ನೀಡಬೇಕು. ಕೇಂದ್ರ ಸರ್ಕಾರದ ಅನುಮತಿ ಬೇಕು. ಪಿಪಿಪಿ ಬಂಡಾವಾಳ ಹೂಡಿಕೆಗೆ ಸಜ್ಜಾದಾಗ ಅನುಮತಿ ಬೇಕು ಎಂದು ತಿಳಿಸಿದರು.
ಜನವರಿ 29ಕ್ಕೆ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯಲಿದೆ. 697 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ನಡೆಯಲಿದೆ. ವಿಶ್ವವಿದ್ಯಾಲಯದ ಮೊದಲ ಹಂತದ ಕಟ್ಟಡವನ್ನು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಆದರೆ, ತುಮಕೂರು ಜಿಲ್ಲೆಯಲ್ಲಿ 55 ಲಕ್ಷ ಮಾನವ ದಿನಗಳನ್ನು ಖರ್ಚು ಮಾಡಲಾಗಿದೆ. ಸುಮಾರು 450 ಕೋಟಿ ರೂ.ಯಷ್ಟು ಕೆಲಸ ಮಾಡಲಾಗಿದೆ. ಇದು ಇಡೀ ರಾಜ್ಯದಲ್ಲಿ ನರೇಗಾ ಅನುμÁ್ಠನದಲ್ಲಿ ತುಮಕೂರು ಮೊದಲ ಸ್ಥಾನದಲ್ಲಿದೆ ಎಂದರು.
ಜಿಲ್ಲೆಯ ಒಂದು ಸಾವಿರ ಶಾಲೆಗಳಿಗೆ ಕಾಂಪೌಂಡ್, ಶೌಚಾಲಯ, ಆಟದ ಮೈದಾನ ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ನೀಡಲು 85 ಕೋಟಿ ರೂ. ಅನುದಾನ ಖರ್ಚು ಮಾಡಲಾಗುತ್ತಿದೆ. ಕೆಲ ಶಾಲೆಗಳ ಅಭಿವೃದ್ಧಿ ಕಾರ್ಯ ಮುಗಿಯುತ್ತ ಬಂದಿದೆ. ಸುಸಜ್ಜಿತ ಸೌಲಭ್ಯ ಕಲ್ಪಿಸಲಾಗಿದೆ. ವಿಜ್ಞಾನ, ತಾಂತ್ರಿಕ ಪದವಧರ ಕೋರ್ಸ್‍ಗಳಾದ, ಸೈಬರ್ ಕ್ರೈಂ, ಆರ್ಥಿಕ ಪದವಿಗಳನ್ನು ಪ್ರಾರಂಭಿಸಲು ಹೆಚ್ಚು ಅನುಧಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಆರು ವಾರ್ಡ್‍ಗಳು ಮಾತ್ರ ಸ್ಮಾರ್ಟ್ ಆಗಿವೆ. ಇನ್ನು 29 ಬಾಕಿ ಇವೆ. ಇವುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿಗೆ ಒತ್ತಾಯಿಸಲಾಗುವುದು. ತುಮಕೂರು ನಗರದ ವಾರ್ಡ್‍ಗಳ ಅಭಿವೃದ್ಧಿಗೆ ಮಾತ್ರ 500. ಕೋಟಿ ರೂ. ಕೇಳಲಾಗುವುದು.
ಮಹಾನಗರ ಪಾಲಿಕೆ ವಿಸ್ತರಣೆಗೆ ಪರ ವಿರೋಧ ಸಹಜ. ಒಳ್ಳೆ ದೃಷ್ಟಿಯಿಂದ ಎನು ಮಾಡಬೇಕು ಅದನ್ನು ಮಾಡುತ್ತೇವೆ.ಪದೇಪದೇ ಮುಖ್ಯಮಂತ್ರಿಗಳು ಬರುವುದಿಲ್ಲ. ಹೀಗಾಗಿ ಕೆಎಸ್ಆರ್‍ಟಿಸಿ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿಗಳ ಅಮೃತ ಹಸ್ತದಿಂದ ಉದ್ಘಾಟಿಸಲಾಗುವುದು ಎಂದರು.