ಏಳನೇ ರ‍್ಯಾಂಕ್ ಪಡೆದ ಗಗನಶ್ರೀಗೆ ಸನ್ಮಾನ

ತುಮಕೂರು: ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಸಿಬ್ಬಂದಿ ಚೌಡಯ್ಯನ ಪಾಳ್ಯದ ನಿವಾಸಿ ಹೆಚ್.ಬಿ.ಮೋಹನ್‌ಕುಮಾರ್ ಹಾಗೂ ನಳಿನಾ ದಂಪತಿಯ ಮಗಳು ವಿದ್ಯಾನಿಧಿ ಕಿರಿಯ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಗಗನಶ್ರೀ ಹೆಚ್.ಎಂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 600 ಅಂಕಗಳಿಗೆ 591 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 7ನೇ ರ‍್ಯಾಂಕ್ ಗಳಿಸಿ ಕೀರ್ತಿ ತಂದಿದ್ದಾರೆ.  ಈ ಪ್ರತಿಭಾವಂತ ವಿದ್ಯಾರ್ಥಿನಿ  ಕುಮಾರಿ ಗಗನಶ್ರೀ ಹೆಚ್.ಎಂ ಹಾಗೂ ಆಕೆಯ ತಂದೆ ಮೋಹನ್ ಕುಮಾರ್ ಹೆಚ್.ಬಿ.ಅವರನ್ನು ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸಹಕಾರ ಸಂಘ, ಹಾಗೂ ತುಮಕೂರು ತಾಲೂಕು ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಮಂಗಳವಾರ ಅಭಿನಂದಿಸಿ ಸನ್ಮಾನಿಸಲಾಯಿತು. ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷರಾದ ಪಿ.ಮೂರ್ತಿ , ಉಪಾಧ್ಯಕ್ಷರಾದ ಬಿ.ಹೆಚ್,ನಂಜುಂಡಯ್ಯ, ನಿರ್ದೇಶಕರಾದ ಬಿ.ಎಲ್. ರಮೇಶ್, ಶ್ರೀಹರ್ಷ, ರಾಮಚಂದ್ರಪ್ಪ, ತಿಮ್ಮಾರೆಡ್ಡಿ, ನಾಗರಾಜಪ್ಪ, ಬಿ.ಎನ್.ನಾಗರಾಜು, ಹಾಗೂ ಸಿಬ್ಬಂದಿ, ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಡಿ.ಶಿವಕುಮಾರ್ ,…