ಟೆಕ್ನಿಷಿಯಂ-2025 ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ, 2050ಕ್ಕೆ ವಿದ್ಯುತ್ ಬಳಕೆ ನಾಲ್ಕರಷ್ಟು ಹೆಚ್ಚಳ

ತುಮಕೂರು: ಜಗತ್ತು ದಿನದಿಂದ ದಿನಕ್ಕೆ

ಅಭಿವೃದ್ಧಿ ಹೊಂದುತ್ತಿದೆ. ಈ ಜಾಗತಿಕ ವಿದ್ಯುತ್‌ ವ್ಯವಸ್ಥೆಯಲ್ಲಿ 2050ಕ್ಕೆ ಅದರ ಬೇಡಿಕೆ ಹೆಚ್ಚಾಗುತ್ತದೆ. ನಮಗೆ ಇಂದಿನ ವಿದ್ಯುತ್ ಉತ್ಪಾ ದನಾ ಸಾಮರ್ಥ್ಯದ ನಾಲ್ಕರಷ್ಟು ವಿದ್ಯುತ್‌ ಅಂದು ಬೇಕಾಗಬಹುದು ಎಂದು ಹಿಟಾಚಿ ಎನರ್ಜಿ ಹಿರಿಯ ಪ್ರಧಾನ ವಿಜ್ಞಾನಿ ಡಾ. ಒ.ಡಿ. ನಾಯ್ಡು ಅವರು ತಿಳಿಸಿದರು.

ನಗರದ ಎಸ್‌ಐಟಿ ಕಾಲೇಜಿನಲ್ಲಿ ಹಮ್ಮಿ ಕೊಂಡಿದ್ದ ‘ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷಯನ್ ಇನ್ ಎಲೆಕ್ಟಿಕಲ್ ಸೈನ್ಸಸ್ (ఐసిఎనో) ಮತ್ತು ಟೆಕ್ನಿಷಿಯಂ-2025’ ಎಂಬ ಮೂರನೇ ಅಂತಾ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಶಕ್ತಿ ಪರಿವರ್ತನೆಯಲ್ಲಿ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಇಸ್ರೋ ಸಿಸ್ಟಮ್ ಎಂಜಿನಿಯರಿಂಗ್ ವಿಭಾಗದ ಗ್ರೂಪ್ ಡೈರೆಕ್ಟರ್ ಡಾ. ಮಧುಸೂದನ್ ಸಿ.ಎಸ್. ಬಾಹ್ಯಾಕಾಶದ ಸವಾಲುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಯಾವುದೇ ಒಂದು ಕೆಲಸವನ್ನು ಮಾಡುವಾಗ ನಾವು ಮಾಡುತ್ತಿದ್ದೇವೆ, ನಮಗೆ ಆ ಕೆಲಸದ ಬಗ್ಗೆ ಏನು ಗೊತ್ತು ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಆಗ ನಾವು ಮಾಡುವ ಕೆಲಸ ಯಶಸ್ವಿಯಾಗುತ್ತದೆ ಎಂದು ಹೇಳಿದರು. ಉಪಗ್ರಹಗಳಿಂದ ಇಂದು ನಾವು ಸಂವಹನ, ಭೂಮಿಯಲ್ಲಿಯಾಗುವ ಪರಿವರ್ತನೆಗಳು, ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಜಿಪಿಎಸ್ ಮೂಲಕ ಸ್ಥಳವನ್ನು ಹುಡುಕುವಂತಹ ಅನೇಕ ಅನೇಕ ಕಾರ್ಯಗಳನ್ನು ಏನು

ಕೈಗಾರಿಕೆಗಳಿಗೆ, ಕಟ್ಟಡಗಳಿಗೆ ಹಾಗೂ ಸಾರಿಗೆಗಳಿಗೆ ಬೇಕಾದ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ.

ಅ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಸಬೇಕು. ಅದಕ್ಕೆ ಪರಿಸರದಲ್ಲಿರುವ ವಾಯು, ಸೌರಶಕ್ತಿ ಹಾಗೂ ನೀರನ ಮೂಲಕ ಹೆಚ್ಚು ಹೆಚ್ಚು ವಿದ್ಯುತ್ ಉತ್ಪಾದನೆಯಲ್ಲಿ ತೊಡೆಗಬೇಕು. ಇತ್ತೀಚೆಗೆ ಎಲೆಕ್ಟಿಕ್ ವಾಹನಗಳ ಉತ್ಪತ್ತಿಯಾಗುತ್ತಿದ್ದು, ಅವುಗಳಿಗೆ ಫಾಸ್ಟ್ ಚಾರ್ಜರ್ ವ್ಯವಸ್ಥೆ ಕಂಡುಕೊಳ್ಳಬೇಕು. ಇದಕ್ಕೆ ಈಗಾಗಲೇ ಹಲವಾರು ದೇಶಗಳಲ್ಲಿ ಸಂಶೋಧನೆ ನಡೆಯುತ್ತಿದೆ ಎಂದರು.

ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಮಾತನಾಡಿ, ವಿದ್ಯುತ್ ವಿಜ್ಞಾನಕ್ಕೆ ಅನ್ವಹಿಸುವ ಸ್ಮಾರ್ಟ್ ಸಿಸ್ಟಮ್‌ ಗಳ ಕ್ಷೇತ್ರದಲ್ಲಿನ ಪ್ರಗತಿಗಗಳು, ಸವಾಲುಗಳು ಮತ್ತು ಅವಿಷ್ಕಾರಗಳನ್ನು ಚರ್ಚಿಸಲು ಭಾರತ ಮತ್ತು ವಿದೇಶಗಳ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ತಜ್ಞರನ್ನು ಒಟ್ಟುಗೂಡಿಸುವುದು ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನ ಸಂಘಟನಾಧ್ಯಕ್ಷೆ ಡಾ. ರಶ್ಮಿ ಗಣ್ಯರನ್ನು ಸ್ವಾಗತಿಸಿದರು. ಎಚ್.ಎಸ್. ಶ್ರೀಧರ್ ఐఎఇఎనో ವರದಿಯನ್ನು ಮಂಡಿಸಿದರು. ಈ ವೇಳೆ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಎಸ್.ಐ.ಟಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶಿವಕುಮಾರಯ್ಯ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ವಿ. ದಿನೇಶ್, ಸಂಯೋಜಕ ವಿನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *