ಅತಿಥಿ ಉಪನ್ಯಾಸಕರ ಇರುವೆ ಸಾಲು ಕಂಡು ಬೆಚ್ಚಬಿದ್ದ ಬೆಂಗಳೂರು ಪೊಲೀಸರು,ಪರಪ್ಪನ ಅಗ್ರಹಾರವೋ-ಸ್ವತಂತ್ರ ಚೌಕವೋ ಪೀಕಲಾಟಕ್ಕೆ ಬಿದ್ದ ಅತಿಥಿಗಳು

ತುಮಕೂರು : ಖಾಯಂಮಾತಿ ಮಾಡುವಂತೆ ತುಮಕೂರು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಇರುವೆ ಸಾಲಿನಂತೆ ಮೈಲುಗಳಗಟ್ಟಲೆ ಇರುವುದನ್ನು ಕಂಡ ಬೆಂಗಳೂರು ಪೊಲೀಸರು ಬೆಚ್ಚಬಿದ್ದ ಘಟನೆ ನಡೆಯಿತು.

ಜನವರಿ 1ರಿಂದ ಕಾಲ್ನಡಿಗೆ ಜಾಥ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಬೆಂಗಳೂರು ಸ್ವತಂತ್ರ ಚೌಕದವರಿಗೆ ಕಾಲ್ನಡಿಗೆಯಲ್ಲಿ ಜಾಥ ಹೊರಟಿದ್ದರು, ಜನವರಿ 3ರಂದು ನೆಲಮಂಗಲದಿಂದ ಹೊರಟ ಜಾಥದ ಸರತಿ ಸಾಲು ಹನುಮಂತನ ಬಾಲದಂತೆ ಮೈಲುಗಟ್ಟಲೆ ಇರುವೆ ಸಾಲಿನಂತಿರುವುದನ್ನು ನೆಲಮಂಗಲ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ಒದಗಿಸಿದರು.

ಬೆಂಗಳೂರು ಪೊಲೀಸರು ಈ ಇರುವೆ ಸಾಲಿನಂತಹ ಅತಿಥಿ ಉಪನ್ಯಾಸಕರ ಜಾಥ ಕಂಡು ಬೆಂಗಳೂರಿಗೆ ಪ್ರವೇಶ ಪಡೆದರೆ ಟ್ರಾಫಿಕ್ ಜಾಮ್ ಆಗಿ ಹಿರಿಯ ಅಧಿಕಾರಿಗಳು ಮತ್ತು ಸರ್ಕಾರ ನಮ್ಮನ್ನು ಜಾಮ್ ಎತ್ತಲಿದೆ ಎಂಬುದನ್ನು ಅರಿತ ಪೊಲೀಸರು, ಜಾಥ ಎಂಟನೇ ಮೈಲಿಗೆ ತಲುಪುವ ವೇಳೆಗೆ ಹತ್ತಾರು ಬಸ್‍ಗಳನ್ನು ತಂದು ನಿಲ್ಲಿಸಿಕೊಂಡಿದ್ದರು.

ಇರುವೆ ಸಾಲಿನಂತೆ ಬಂದ ಅತಿಥಿ ಉಪನ್ಯಾಸಕರನ್ನು ಯಾವುದೇ ತೊಂದರೆ ಮಾಡದೆ ಬಸ್‍ಗಳನ್ನು ಹತ್ತುವಂತೆ ಪೊಲೀಸರು ತಿಳಿಸಿದಾಗ ಒಮ್ಮೆಲೇ ಅತಿಥಿ ಉಪನ್ಯಾಸಕರು ಗಾಬರಿಗೊಂಡು ಬಿಟ್ಟರು, ಅಯ್ಯೋ ಪರಪ್ಪನ ಅಗ್ರಹಾರದ ಜೈಲಿಗೆ ಕಳಿಸಿದರೆ ನಮ್ಮನ್ನು ಬಿಡುಸುವವರು ಯಾರು ಎಂದು ಉಸಿರನ್ನು ಬಿಗಿ ಹಿಡಿದು ಬಸ್ ಹತ್ತಿದ ಅತಿಥಿ ಉಪನ್ಯಾಸಕರನ್ನು ಸುರಕ್ಷಿತವಾಗಿ ಸ್ವತಂತ್ರ ಚೌಕಕ್ಕೆ ತಂದು ಬಿಟ್ಟಾಗ ಅತಿಥಿ ಉಪನ್ಯಾಸಕರು ಪೊಲೀಸರಿಗೆ ಒಂದು ಸಲ್ಯೂಟ್ ಹೊಡೆದರು.

ಏಕೆಂದರೆ ಅವರಿಗೂ ನಡೆದು ನಡೆದು ಕಾಲು ನೋವು, ಕಾಲು ಊತ ಆಗಿದ್ದವು, ಒಂದು ಹತ್ತು ಕಿ.ಮೀ.ರಿಗಾದರೂ ಪೊಲೀಸರು ಬಸ್ ಸೌಕರ್ಯ ಕಲ್ಪಿಸಿದ್ದಕ್ಕೆ ಖುಷಿಪಟ್ಟರೂ ಅದನ್ನು ಎಲ್ಲಿಯೂ ತೋರ್ಪಡಿಸಲಿಲ್ಲ, ಯಾಕೆಂದರೆ ಇವರು ಮಾಡುತ್ತಿರುವುದು ಪ್ರತಿಭಟನೆ, ಅದೂ ಯಾತಕ್ಕಾಗಿ ತಮ್ಮ ಜೀವನದ ಭದ್ರತೆಯ ಉಳಿವಿನ ಪ್ರಶ್ನೆಗಾಗಿ.

ಹೇಗೋ ಸ್ವತಂತ್ರ ಚೌಕ ಮುಟ್ಟಿರುವ ಅತಿಥಿ ಉಪನ್ಯಾಸಕರಿಗೆ ಒಳ್ಳೆಯದಾಗಲಿ ಎಂಬುದೂ ಪೊಲೀಸರ ಆಶಯ, ಏಕೆಂದರೆ ಬೆಂಗಳೂರಿನ ಮಧ್ಯಭಾಗದಲ್ಲಿ ಜಾಥ ಹೋಗುವಾಗ ಯಾರಾದರೂ ಕಿಡಿಗೇಡಿಗಳು ಧಿಕ್ಕಾರ ಕೂಗುವುದು, ಬಸ್ಸಿಗೋ, ಜನರಿಗೋ ಕಲ್ಲು ತೂರಿದರೆ ಇವರು ಇಷ್ಟು ದಿನ ನಡೆಸಿದ ಪ್ರತಿಭಟನೆ ನೀರಿನಲ್ಲಿ ಹೋಮ ಮಾಡಿದಂತಾಗುತಿತ್ತು.

ಅಯ್ಯೋ ಪರಪ್ಪ ಅಗ್ರಹಾರ ಜೈಲಿಗೆ ತಳ್ಳಿದರೆ ಏನಪ್ಪ ಮಾಡೋದು ಎಂದು ಚಿಂತಕ್ರಾಂತರಾಗಿ ಪೊಲೀಸ್‍ರು ತುಂಬಿದ ಬಸ್‍ನಲ್ಲಿ ಕುಳಿತಿರುವ ಅತಿಥಿ ಉಪನ್ಯಾಸಕರು.

ಈಗ ಸ್ವತಂತ್ರ ಚೌಕದಲ್ಲಿ ಸ್ವತಂತ್ರರಾಗಿರುವುದರಿಂದ ಅವರ ಪ್ರತಿಭಟನೆ ಸುಗಮವಾಗಿರುತ್ತದೆ, ವಿಧಾನಸೌಧ ಹತ್ತಿರದಲ್ಲೇ ಇರುವುದರಿಂದ ಸರ್ಕಾರವೂ ಸ್ಪಂದಿಸುವ ಎಲ್ಲಾ ಲಕ್ಷಣಗಳೂ ಇವೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *