ತುಮಕೂರು: ಭಾರತದ ಸಂವಿಧಾನವನ್ನು ಕೇವಲ ದಲಿತರಿಗಷ್ಟೇ ಸೀಮಿತಗೊಳಿಸಲು ಹೊರಟಿದ್ದ ಜಿಲ್ಲಾ ಪಂಚಾಯಿತಿ ಸಿಇಓ ಧೋರಣೆಯನ್ನು ಸಂವಿಧಾನ ಎಲ್ಲಾರಿಗೂ ಸೇರಿದ್ದು ಎಂದು ದಲಿತ ಮುಖಂಡರುಗಳು ಸಿಇಓ ನಡೆಗೆ ತೀವ್ರ ಪ್ರತಿರೋಧ ವ್ಯಕ್ತ ಪಡಿಸಿದ ಘಟನೆ ಇಂದು ನಡೆಯಿತು.
ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥ ನಡೆಸುವ ಮೂಲಕ ರಾಜ್ಯದ ಎಲ್ಲಾ ಜನರಿಗೆ ಸಂವಿಧಾನದ ಪರಿಚಯ ಮಾಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಜಾಗೃತಿ ಜಾಥವನ್ನು ಆಯೋಜಿಸಲು ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಿಇಓ ನೇತೃತ್ವದಲ್ಲಿ ವಿವಿಧ ಸಂಘಟನೆಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಿದ್ದರು.
ಸಂವಿಧಾನದ ಬಗ್ಗೆ ತಿಳುವಳಿಕೆಯೇ ಇಲ್ಲದ ಜಿ.ಪಂ.ಸಿಇಓ ಅವರು ಸಭೆ ಕೇವಲ ದಲಿತ ಮುಖಂಡರನ್ನಷ್ಟೇ ಕರೆಸಿ ದಲಿತರಿಗಷ್ಟೇ ಜಾಥ ಸೀಮಿತಗೊಳಿಸಲು ಹೊರಟಿರುವುದನ್ನು ದಲಿತ ಮುಖಂಡರು ಸಭೆಯಲ್ಲೇ ತೀವ್ರವಾಗಿ ವಿರೋಧಿಸಿದರು.
ದಲಿತ ಮುಖಂಡರು ಸಿಇಓರವರಿಗೆ ಸಂವಿಧಾನ ಕೇವಲ ದಲಿತರಿಗಷ್ಟೇ ಅಲ್ಲ, ಈ ದೇಶದ ಎಲ್ಲಾ ಪ್ರಜೆಗಳಿಗೆ ಸೇರಿದ್ದು, ಈ ಸಭೆಗೆ ಜಿಲ್ಲೆಯ ಎಲ್ಲಾ ಸಂಘಟನೆಗಳು, ಯುವಕ-ಯುವತಿ ಮಂಡಳಿಗಳು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಮಹಿಳಾ ಸಂಘಟನೆಗೆಳು, ವಕೀಲರ ಸಂಘ, ಪತ್ರಕರ್ತರ ಸಂಘ ಹೀಗೆ ಸಮಾಜವನ್ನು ಪ್ರತಿನಿಧಿಸುವ ಎಲ್ಲಾರನ್ನೂ ಕರೆದು ಸಭೆ ಮಾಡದೆ ಕೇವಲ ದಲಿತರಿಗಷ್ಟೇ ಸೀಮಿತಗೊಳಿಸಲು ಹೊರಟಿದ್ದು, ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂದು ದಲಿತ ಮುಖಂಡರು ತಿಳಿಸಿದಾಗ ಮುಂದಿನ ಸಭೆಗೆ ಎಲ್ಲಾ ಸಂಘಟನೆಗಳ ಸಭೆ ನಡೆಸುವುದಾಗಿ ತಿಳಿಸಿದರು.

ಎಲ್‍ಇಡಿ ವಾಲ್ ಹೊಂದಿರುವ ಸಂವಿಧಾನ ಜಾಗೃತಿ ಜಾಥವನ್ನು ಸಿದ್ಧಪಡಿಸಿ, ಕಲಾ ತಂಡಗಳೊಂದಿಗೆ ಭಾರತದ ಸಂವಿಧಾನದ ಪೀಠೀಕೆ ಹಂಚುವುದು, ನ್ಯಾಯ, ಸಮಾಜಿಕ, ಆರ್ಥಿಕ ಮತ್ತು ರಾಜಕೀಯ ಮತ್ತು ಡಾ||.ಬಿ.ಆರ್.ಅಂಬೇಡ್ಕರ್‍ರವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತದ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳೀಯ ಕಲೆ ಮತ್ತು ಸಂಸ್ಕøತಿ ಇತ್ಯಾದಿಗಳನ್ನು ಒಳಗೊಂಡಿರುವ ಸ್ತಬ್ಧ ಚಿತ್ರದೊಂದಿಗೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಂವಿಧಾನ ಜಾಗೃತಿ ಮೂಡಿಸುವುದಾಗಿರುತ್ತದೆ.
ಇದಕ್ಕಾಗಿ ಪ್ರತಿ ಜಿಲ್ಲೆಗೆ ಈ ಜಾಥಕ್ಕಾಗಿ 25ಲಕ್ಷರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿರುತ್ತದೆ.
ಇಂತಹ ಮಹತ್ತರವಾದ ಕಾರ್ಯವನ್ನು ಜಿಲ್ಲೆಯ ಎಲ್ಲಾ ಪ್ರಜೆಗಳ ಸಹಕಾರ ಮತ್ತು ನೇತೃತ್ವದೊಂದಿಗೆ ನಡೆಸಬೇಕಾದ ಸಿಇಓರವರು ಸಮಾಲೋಚನಾ ಸಭೆಗೆ ಕೇವಲ ದಲಿತ ಮುಖಂಡರನ್ನು ಸಭೆಗೆ ಎಲ್ಲರ ಸಂವಿಧಾನವನ್ನು ಕೇವಲ ದಲಿತರಿಗಷ್ಟೇ ಸೀಮಿತಗೊಳಿಸಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವುದು ಸಂವಿಧಾನದ ವಿರೋಧಿ ನಡೆಯಲ್ಲವೇ……..!!!!!…..????