ಅದು 2075ನೇ ಇಸವಿ, ರಣ ಹದ್ದು ತಾನು ತಿಂದ ಮಾಂಸದ ತುಣುಕು ಕೊಕ್ಕಿನಲ್ಲಿ ಸಿಲುಕಿಕೊಂಡಿದ್ದನ್ನು ಬಂಡೆಗಲ್ಲಿಗೆ ಉಜ್ಜಿ ಉಜ್ಜಿ ತೆಗೆಯುತ್ತಾ, ತನ್ನ ಸಂಗಾತಿಗಳು ಮನುಷ್ಯರ ಮಾಂಸವನ್ನು ಕುಕ್ಕಿ ತಿನ್ನುತ್ತಿರುವುದುನ್ನು ಕಂಡು ತನ್ನ ಎರಡು ರೆಕ್ಕೆಗಳನ್ನು ಬಡಿಯುತ್ತಾ ಕೊರ್ ರ್ ಎಂದು ತೇಗಿತು.
ಅಲ್ಲಿ ಒದ್ದಾಡುತ್ತಿದವನ ಕಣ್ಣುಗುಡ್ಡೆಯನ್ನೇ ಕುಕ್ಕುತ್ತಿರುವ ರಣ ಹದ್ದು, ಆ ನೋವನ್ನು ತಾಳಲಾರದೆ ನಿತ್ರಾಣಗೊಂಡಿದ್ದ ಮನುಷ್ಯ ಕೈಯನ್ನೇ ಬೀಸಿದಾಗ ಅಂಗೈ ಮಾಂಸವನ್ನು ಕಿತ್ತು ಕತ್ತನ್ನು ಮೇಲಕ್ಕೆತ್ತಿ ಆ ಮಾಂಸವನ್ನು ನುಂಗಿ ಸುತ್ತಲೂ ಬಿದ್ದಿರುವ ಹೆಣದ ರಾಶಿಗಳನ್ನು ಕಂಡ ಆ ರಣ ಹದ್ದು ತಾನೇ ಹೆದರಿಕೊಂಡು ಬಿಟ್ಟಿತು.
ಯಾಕೆಂದರೆ ತನ್ನ ಸಂಗಾತಿ ರಣ ಹದ್ದುಗಳು ಮನುಷ್ಯರ ದೇಹಗಳನ್ನು ಸೀಳಿ ಸೀಳಿ ತಿನ್ನುತ್ತಿರುವುದನ್ನು ಕಂಡು ಆ ಘೋರ ದೃಶ್ಯ ಕಣ್ಣಿಂದ ನೋಡಲಾಗದೆ ಒಮ್ಮೆ ಕಣ್ಣು ಮುಚ್ಚಿಕೊಂಡು ಮನುಷ್ಯನಿಗೆ ಈ ಗತಿ ಬರಬಾರದಿತ್ತು ಎಂದುಕೊಂಡರೂ ಅಲ್ಲಿ ಬಿದ್ದಿರುವ ಮನುಷ್ಯರ ಮಾಂಸ ಪರ್ವವತ್ನವನು ತಿನ್ನದೆ ಇರಲು ಈ ಹದ್ದಿಗೂ ಆಗುತ್ತಿಲ್ಲ, ಯಾಕೆಂದರೆ ಆ ಮನುಷ್ಯರ ರಕ್ತ, ಮಾಂಸ ಒಬ್ಬರಿಗಿಂತ ಒಬ್ಬರದು ರುಚಿ ರುಚಿಯಾಗಿದೆ.
ಒಬ್ಬನನ್ನು ಕುಕ್ಕಿ ತಿಂದರೆ ಮತ್ತೊಬ್ಬನನ್ನು ಕ್ರೂರವಾಗಿ ತಿನ್ನಬೇಕು ಅನ್ನಿಸುತ್ತಾ ಇದೆ, ತನ್ನ ಕಣ್ಣುಗಳನ್ನು ಮತ್ತಷ್ಟು ಕೆಂಪಗೆ ಮಾಡಿಕೊಂಡು ಹೊರಳಾಡುತ್ತಿದ್ದ ಮನುಷ್ಯನ ಮತ್ತೊಂದು ಕಣ್ಣು ಗುಡ್ಡೆಯನ್ನು ಕಿತ್ತು ಮೂತಿಯಲ್ಲಿ ಹಿಡಿದುಕೊಂಡಾಗ ರಕ್ತ ತೊಟ್ಟಿಕ್ಕುತ್ತಾ ಇದೆ, ಜೀವಂತ ಕಣ್ಣು ಗುಡ್ಡೆ ತನ್ನ ಮಸೂರವನ್ನು ತಿರುಗಿಸುತ್ತಾ ಸಾವನ್ನಪ್ಪುತ್ತಾ ಇದೆ, ಎರಡೂ ಕಣ್ಣುಗಳನ್ನು ಕಳೆದುಕೊಂಡ ಮನುಷ್ಯ ಕಣ್ಣುಗುಡ್ಡೆಗಳಿಂದ ಸೋರುತ್ತಿರುವ ಹಸಿ, ಬಿಸಿ ರಕ್ತವನ್ನು ಅಂಗೈಯಲ್ಲಿ ಮುಟ್ಟಿದಾಗ ಬಿಸಿ ರಕ್ತ ಬರು ಬರುತಾ ತಣ್ಣಗಾಗುತ್ತಾ, ಅಂಗೈಯಲ್ಲಿ ಹೆಪ್ಪುಗಟ್ಟುತ್ತದೆ, ಆಗ ಆತನ ನೆನಪು ಹಿಂದೆ ಹಿಂದಕ್ಕೆ ಓಡುತ್ತದೆ.
ಮನುಷ್ಯ ತಾನು ಭೂಮಿಗೆ ಬಂದ ಮೇಲೆ ಭೂಮಿಯಿಂದ ಸಕಲವನ್ನು ಪಡೆದುಕೊಂಡು ಸ್ವಾರ್ಥಿಯಾಗಿ ಬಿಡುತ್ತಾನೆ, ಈ ಭೂಮಿ ನನ್ನದು, ಈ ಆಕಾಶ ನನ್ನದು ಎಂಬ ಹಮ್ಮು ಬಿಮ್ಮುಗಳನ್ನು ಬೆಳಸಿಕೊಳ್ಳುತ್ತಾನೆ, ನಾನು ಯಾರಿಗೂ ಕಡಿಮೆಯಿಲ್ಲ ಆ ದೇಶ ನನ್ನ ಮೀರಿಸ ಬಾರದು, ನನ್ನ ದೇಶದ ಎಲ್ಲಾ ವಸ್ತುಗಳು ನನ್ನ ದೇಶದವೆ ಆಗಿರಬೇಕು, ಬುಲೆಟ್ ವಿಮಾನ, ಬುಲೆಟ್ ರಾಕೆಟ್ ಎಲ್ಲಾ ನನ್ನದೇ ಅಂದುಕೊಂಡು ಕಾಲು ಕೆರದು ಮತ್ತೊಂದು ಪ್ರಬಲ ರಾಷ್ಟ್ರದೊಂದಿಗೆ ಜಗಳ ತೆಗೆಯುತ್ತದೆ, ಎರಡು ಹುಂಬ ರಾಷ್ಟ್ರಗಳು ಯುದ್ದಕ್ಕೆ ನಿಲ್ಲುತ್ತವೆ, ನೀರು ಸ್ವಲ್ಪವೇ ಇದೆ ಅದನ್ನು ಸಿಂಹಪಾಲು ನಾನೇ ಪಡೆದು ನಾನು ಕೊಟ್ಟಷ್ಟು ನೀರನ್ನು ಇತರೆ ದೇಶಗಳು ಪಡೆಯಬೇಕೆಂದು ಹಠಕ್ಕೆ ಬಿದ್ದು ಯುದ್ಧವನ್ನು ಸಾರಿ ಬಿಡುತ್ತದೆ.
ಗಾಳಿ, ನೀರು ಎಲ್ಲಾ ಪ್ರಕೃತಿದತ್ತವಾದವು ಅವು ಎಲ್ಲವನ್ನು ಎಲ್ಲಾರೂ ಯಾರನ್ನೂ ಕೇಳದೆ ಬಳಸಬಹುದು ಎಂಬುದನ್ನು ಕೇಳಿಸಿಕೊಳ್ಳದ ದೇಶಗಳು ಯುದ್ಧಕ್ಕೆ ನಿಲ್ಲುತ್ತವೆ.
ನಾನೇನು ಕಡಿಮೆ, ನಾನೇನು ಕಡಿಮೆ ಎಂದು ರಾಕೆಟ್ ಯುದ್ದದಿಂದ ಪ್ರಾರಂಭವಾದ ಯುದ್ಧವು ಕೆಲವೇ ದಿನಗಳಲ್ಲಿ ಪರಮಾಣು ಯುದ್ಧವಾಗಿ ಮಾರ್ಪಟ್ಟು ಬಿಡುತ್ತದೆ, ಪರಮಾಣು, ರೋಗಾಣು ಯುದ್ಧಗಳು ನಡೆದು ಮಾನವ ಕುಲ ನಾಶದ ಅಂಚಿಗೆ ಬಂದು ನಿಂತಿದೆ, ಯುದ್ಧದಿಂದ ಆ ದೇಶ-ಈ ದೇಶ ಅನ್ನದೆ ಮನುಷ್ರ ಹೆಣಗಳು ತರಗಲೆಯಂತೆ ಬಿದ್ದಿವೆ, ಕೆಲವರು ಜೀವ ಬಿಡಲು ಹೊರಳಾಡುತ್ತಿದ್ದಾರೆ, ಇಡೀ ಮನುಕುಲ ಹುಡುಕಿದರೂ ಸಿಕ್ಕದಂತೆ ನಾಶವಾಗಿದೆ.
ಅಂತ ವೇಳೆಯಲ್ಲಿ ಹೆಣದ ರಾಶಿಗಳನ್ನು ಕಂಡ ರಣ ಹದ್ದುಗಳು ಮನುಷ್ಯನನ್ನು ಕುಕ್ಕಿ ತಿನ್ನಲು ತಾನು ಮುಂದು ತಾನು ಮುಂದು ಎಂದು ಬರುತ್ತಿವೆ, ಅನಾಚಾರ, ಭ್ರಷ್ಟಚಾರ, ಅತ್ಯಾಚಾರ, ಕೊಲೆ, ಸುಲಿಗೆ ಮಾಡಿದ ಮನುಷ್ಯನ ರಕ್ತ, ಮಾಂಸ ಒಬ್ಬರಿಗಿಂತ ಒಬ್ಬರದು ರುಚಿಯಾಗಿದೆ.
ರಣ ಹದ್ದುಗಳಿಗೆ ಈ ರುಚಿಯನ್ನು ತಮ್ಮ ಜೀವಮಾನದಲ್ಲಿ ಕಂಡಿರಲಿಲ್ಲ, ಅದಕ್ಕೆ ಒಬ್ಬ ಮನುಷ್ಯನನ್ನು ಕುಕ್ಕಿ ತಿಂದ ಮೇಲೆ, ಮತ್ತೊಬ್ಬನನ್ನು ತಿನ್ನಬೇಕು, ಬಹಳ ರುಚಿಯಿದೆ ಅನ್ನಿಸುತ್ತಾ ಇದೆ.
ಸೂರ್ಯ ಮಾತ್ರ ತನ್ನ ಪಾಡಿಗೆ ತಾನು ಪಶ್ಚಿಮ ದಿಕ್ಕಿನಲ್ಲಿ ಮುಳುಗುತ್ತಿದ್ದಾನೆ, ತನ್ನ ಕೈಗಳಿಗೆ ಅಂಟಿದ್ದ ಬಿಸಿ ರಕ್ತ ಆರುತ್ತಾ ಬರುತಾ ಇದೆ, ಆ ಮನುಷ್ಯ ತಾನು ಬದುಕಿದ್ದಾಗ ಇತರೆ ಮನಷ್ಯರ ಮೇಲೆ ಮಾಡಿದ ದಬ್ಬಾಳಿಕೆ, ಭ್ರಷ್ಟಚಾರ, ಸುಳ್ಳು ಮೋಸ, ಹಗೆತನ, ಹತ್ಯೆ, ಅತ್ಯಾಚಾರ, ಕೊಲೆ, ಸುಲಿಗೆ,ಜಾತಿ,ಧರ್ಮದಲ್ಲಿ ನಡೆದ ಮನುಷ್ಯ ಮನುಷ್ಯನನ್ನು ಕೊಂದದ್ದು, ನೆನಪಾಗುತ್ತಾ ಹೋಗುತ್ತದೆ, ಮೇಲೆತ್ತದ್ದ ರಕ್ತದ ಕಲೆಯ ಆ ಕೈ ಕೆಳಕ್ಕೆ ಬೀಳುತ್ತದೆ. ಕತ್ತು ವಾಲುತ್ತದೆ ಅಲ್ಲಿಗೆ ಭೂಮಿಯ ಮೇಲಿದ್ದ ಗುಟುಕು ಜೀವವೂ ಪ್ರಾಣ ಬಿಡುತ್ತದೆ.
ಅಲ್ಲಿಗೆ ಇಡೀ ಭೂಮಿಯ ಯಾವ ಭಾಗದಲ್ಲೂ ಮನುಷ್ಯನೆಂಬ ಪ್ರಾಣಿ ಇಲ್ಲದಂತೆಯಾಗುತ್ತದೆ, ರಣ ಹದ್ದುಗಳು ಮನುಷ್ಯನ ರಕ್ತ, ಮಾಂಸಕ್ಕಾಗಿ ನೂರಾರು ವರ್ಷ ಕಾದರೂ ಮತ್ತೆ ಮನುಷ್ಯ ಸೃಷ್ಠಿಯಾಗಲೇ ಇಲ್ಲ, ಯಾಕೆಂದರೆ ಭೂ ತಾಯಿ ಮೇಲೆ ಮನುಷ್ಯನು ನಡೆಸಿದ್ದ ಕ್ರೌರ್ಯವನ್ನು ತಡೆದುಕೊಳ್ಳಲಾಗಿರಲಿಲ್ಲ, ಆದ್ದರಿಂದ ಭೂಮಿ ತಾಯಿಗೂ ನರ ಮನುಷ್ಯ ಹುಟ್ಟುವುದು ಬೇಕಿರಲಿಲ್ಲ.
ಗಾಳಿ ಅದರ ಪಾಡಿಗೆ ಅದು ಬೀಸುತ್ತಾ ಇದೆ, ಮಳೆ ಬೀಳುತ್ತಾ ಇದೆ, ಕಾಡುಮೇಡು ತನ್ನ ಪಾಡಿಗೆ ಬೇಳೆಯುತ್ತಾ ಇದೆ. ಮನುಷ್ಯ ಮಾತ್ರ ಮತ್ತೆ ಸೃಷ್ಠಿಯಾಗಲಿಲ್ಲ.
ಕಾಲ್ಪನಿಕ.
ವೆಂಕಟಾಚಲ.ಹೆಚ್.ವಿ.
Ghora Satya