ಯುವ ಸಬಲೀಕರಣ ರಾಜ್ಯ ಸರ್ಕಾರದ ಯೋಜನೆ ಲಾಭ ಪಡೆದು ಯುವಜನರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು

ತುಮಕೂರು- ಯುವ ಸಬಲೀಕರಣ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಗ್ರಾಮೀಣ ವಿದ್ಯಾವಂತ ಯುವಜನರು ಇದರ ಲಾಭ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂದು ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಾಲಪ್ಪ ಪ್ರತಿμÁ್ಠನದ ವತಿಯಿಂದ ಕೌಶಲ್ಯ ಕರ್ನಾಟಕ, ಕೆ.ಎಸ್.ಎಫ್ ಸಿ, ಸಿಡಾಕ್ ಮತ್ತಿತರರ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವಸಬಲೀಕರಣ ಉದ್ಯೋಗಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಾ ತಂದೆ ತಾಯಿಗಳಿಗೂ ನಮ್ಮ ಮಕ್ಕಳು ಅವರ ಕಾಲ ಮೇಲೆ ಅವರು ನಿಲ್ಲುವಂತಾಗಬೇಕು ಎಂಬ ಆಸೆಯಿದೆ. ಅದು ಈಡೇರಬೇಕೆಂದರೆ ನೀವು ಇಂತಹ ಉದ್ಯೋಗ ಮೇಳಗಳ ಲಾಭ ಪಡೆಯಬೇಕು ಎಂದರು.

ಖಾಸಗಿ ಕಾಲೇಜುಗಳಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸುವ ಮೂಲಕ ಅವರಿಗೆ ಉದ್ಯೋಗ ಪಡೆಯಲು ಅವಕಾಶ ಸೃಷ್ಟಿಸಲಾಗುತ್ತದೆ. ಅದೇ ರೀತಿ ಸರ್ಕಾರಿ ಕಾಲೇಜುಗಳ ಮಕ್ಕಳಿಗೂ ಈ ರೀತಿಯ ಅವಕಾಶಗಳು ದೊರೆಯಬೇಕೆಂಬ ಉದ್ದೇಶದಿಂದ ಯುವ ಸಬಲೀಕರಣ ಯೋಜನೆ ಅಡಿಯಲ್ಲಿ ಈ ರೀತಿಯ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇಲ್ಲಿಗೆ ಬರುವ ಎಲ್ಲರಿಗೂ ಉದ್ಯೋಗ ದೊರೆಯುತ್ತದೆ ಎಂದಲ್ಲ, ಕನಿಷ್ಠ ಪಕ್ಷ ಒಂದು ಸಂದರ್ಶನ ಹೇಗಿರುತ್ತದೆ. ಕೆಲಸಕ್ಕೆ ಬೇಕಾದ ಆರ್ಹತೆಗಳೇನು?. ಬೇಕಾದ ತಯಾರಿ ಹೇಗಿರಬೇಕು? ಹೀಗೆ ಹಲವಾರು ಅಂಶಗಳ ಪರಿಚಯವಾಗುವುದರಿಂದ ಮುಂದಿನ ಸಂದರ್ಶನವನ್ನು ಆತ್ಮಸ್ಥೈರ್ಯದಿಂದ ಎದುರಿಸಲು ಅಗತ್ಯ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಇಂದು ಸ್ಥಳೀಯ 37 ವಿವಿಧ ಕಂಪೆನಿಗಳು ಇಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಬಂದಿದ್ದು, ಓರ್ವ ಅಭ್ಯರ್ಥಿ ಮೂರು ಕಂಪೆನಿಗಳಲ್ಲಿ ಸಂದರ್ಶನ ಎದುರಿಸಬಹುದಾಗಿದೆ. ತಾವುಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ತರನಂ ನಿಖೆತ್ ಮಾತನಾಡಿ, ನಮ್ಮ ಕಾಲೇಜಿನ ನಾಲ್ಕು ಸಾವಿರ ವಿದ್ಯಾರ್ಥಿಗಳಲ್ಲಿ ಬಹುತೇಕರು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿದ್ದು, ಬೆಳಿಗ್ಗೆಯೇ ಕಾಲೇಜಿಗೆ ಬಂದು ಸಂಜೆಯವರೆಗೆ ಪಾಠ ಪ್ರವಚನ ಕೇಳುತ್ತಾರೆ. ಒಂದೊಮ್ಮೆ ಹೆಚ್ಚುವರಿ ತರಗತಿ ಮಾಡಲು ಮುಂದಾದರೆ ಹೊಟ್ಟೆ ಹಸಿವಿನಿಂದ ಪಾಠ ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಹಾಗಾಗಿ ಸಂಘ ಸಂಸ್ಥೆಗಳು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹಾಲಪ್ಪ ಪ್ರತಿμÁ್ಠನ ಮುಂದಾಗುವಂತೆ ಮನವಿ ಮಾಡಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಧ್ಯಾಪಕ ತಿಪ್ಪೇಸ್ವಾಮಿ, ಸರಕಾರಿ ಕಾಲೇಜುಗಳಲ್ಲಿ ಕಲಿಯುವ ಬಡವರ ಮಕ್ಕಳು ಸಹ ಅವಕಾಶದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಹಾಲಪ್ಪ ಪ್ರತಿμÁ್ಠನದ ವತಿಯಿಂದ ಈ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಒಳ್ಳೆಯ ಅವಕಾಶ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಉದ್ಯೋಗ ಮೇಳದಲ್ಲಿ 3906 ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಇವರಲ್ಲಿ ಸ್ವಯಂ ಉದ್ಯೋಗಕ್ಕಾಗಿ 51 ಜನ, ಕೆಎಸ್.ಎಫ್‍ಸಿಗೆ 18 ಜನರು, ಸಿಡಾಕ್ 24 ಜನ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗೆ 9 ಜನರು ಅರ್ಜಿ ಸಲ್ಲಿಸಿದರೆ, ತರಬೇತಿಗಾಗಿ 390 ಜನರು ಆಯ್ಕೆಯಾಗಿದ್ದಾರೆ. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ 34 ಕಂಪನಿಗಳು 203 ಜನರನ್ನು ಸ್ಥಳದಲ್ಲಿಯೇ ನೇಮಕ ಮಾಡಿಕೊಂಡಿದ್ದು, 207 ಜನರಿಗೆ ಎರಡನೇ ಸಂದರ್ಶನಕ್ಕೆ ಅವಕಾಶ ಕಲ್ಪಿಸಿವೆ.

ಈ ಸಂದರ್ಭದಲ್ಲಿ ಜಿಲ್ಲಾ ಉದ್ಯೋಗಾಧಿಕಾರಿ ಕಿಶೋರ್‍ಕುಮಾರ್, ಡಿಐಸಿ ಉಪನಿರ್ದೇಶಕ ನಾಗರಾಜು ಸಿ.ಕೆ., ಕೆಎಸ್‍ಎಫ್‍ಸಿ ಸಹಾಯಕ ವ್ಯವಸ್ಥಾಪಕ ವಿ. ಗೋಪಾಲಕೃಷ್ಣ, ಸಹಾಯಕ ಪ್ರಾಧ್ಯಾಪಕರಾದ ಡಾ. ಕೃಷ್ಣನಾಯ್ಕ, ಕೆ.ಹೆಚ್. ಅನಿತಲಕ್ಷ್ಮಿ, ಟಿ.ಎನ್. ವಸಂತಕುಮಾರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *