ಬೆಂಗಳೂರು : ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಮುಕ್ತ ಅವಕಾಶವನ್ನು ಹಿಂಪಡೆಯುವ ನಿರ್ಧಾರವನ್ನು ಇಂದು ನಡೆದ ಸಚಿವ ಸಂಪುಟದ ಸಭೆಸಿಬಿಐ ತನಿಖೆಗೆ ನೀಡಿದ್ದ ಮುಕ್ತ ಅವಕಾಶವನ್ನು ಹಿಂಪಡೆಯುವ ನಿರ್ಧಾರವನ್ನು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯ ನಂತರ ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು,
ಈ ಸಭೆಯಲ್ಲಿ ರಾಜ್ಯದಲ್ಲಿ ಸಿಬಿಐ ತನಿಖೆಗೆ ನೀಡಿದ್ದಂತ ಮುಕ್ತ ಅವಕಾಶವನ್ನು ಹಿಂಪಡೆಯುವುದು ಸೇರಿದಂತೆ
25 ವಿಷಯಗಳ ಬಗ್ಗೆ ಇಂದು ಚರ್ಚೆಯಾಗಿ ಎರಡು ಬಿಟ್ಟು ಉಳಿದೆಲ್ಲದಕ್ಕೆ ಅನುಮತಿ ನೀಡಲಾಗಿದೆ ಎಂದರು.
ರಾಜ್ಯಪಾಲರು ಪದೇ ಪದೇ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಕಳಿಸಿ,ನಾಳೆ ಕಳಿಸಿ ಅಂತ ಸೂಚಿಸ್ತಿದ್ದಾರೆ. ಎಲ್ಲಾ ನಿಯಮಗಳನ್ನು ಪರಿಶೀಲಿಸಿ ಯಾವುದೇ ಮಾಹಿತಿ ನೀಡುವ ಮುನ್ನ ಪರಿಶೀಲನೆ ಅಗತ್ಯವಿದೆ. ಕ್ಯಾಬಿನೆಟ್ ಒಪ್ಪಿಗೆ ಪಡೆದು ಕಳಿಸಬೇಕು. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇವೆ. ಇದನ್ನ ಕ್ಯಾಬಿನೆಟ್ ನಲ್ಲಿ ಸಮ್ಮತಿ ನೀಡಿದ್ದೇವೆ. ಒಪ್ಪಿಗೆ ಇಲ್ಲದೆ ಯಾವುದೇ ಪತ್ರ ಕಳಿಸುವಂತಿಲ್ಲ ಎಂಬುದಾಗಿ ಹೇಳಿದರು.
ಎಲ್ಲವನ್ನ ಪರಿಗಣಿಸಿ ಸಂಪುಟ ಕಳಿಸಲಿದೆ. ಏನೇ ಇದ್ರೂ ಕ್ಯಾಬಿನೆಟ್ ಮುಂದೆ ತರಬೇಕು. ರಾಜಭವನ, ಸರ್ಕಾರದ ಮಧ್ಯೆ ಮಾಹಿತಿ ಹೇಗೆ ಲೀಕ್ ಆಯ್ತು? ಇದರ ಬಗ್ಗೆ ವಿಚಾರಣೆ ನಡೆಯಿತು. ಸೆಪ್ಟಂಬರ್ 6 ರಂದು ಪತ್ರ ಬರೆಯಲಾಗಿತ್ತು. ಎಡಿಜಿಪಿ ರಾಜಭವನಕ್ಕೆ ಪತ್ರ ಬರೆದಿದ್ದರು. ಕುಮಾರಸ್ವಾಮಿ, ನಿರಾಣಿ, ರೆಡ್ಡಿ ಕುರಿತ ಪತ್ರ ಬರೆಯಲಾಗಿತ್ತು.ಇದು ಖಾಸಗಿ ಮಾಧ್ಯಮವೊಂದರಲ್ಲಿ ವರದಿಯಾಗಿತ್ತು. ಇದು ಹೇಗೆ ಸೋರಿಕೆಯಾಯ್ತು ಅನ್ನೋದು ತಿಳಿದಿಲ್ಲ ಎಂದರು.
ರಾಜಭವನ ಕಾರ್ಯದರ್ಶಿಗೆ ಬರೆದಿದ್ದ ಪತ್ರ ತುಂಬಾ ಕಾನ್ಫಿಡೆಂಟಲ್ ಇರಬೇಕಾದ ಪತ್ರ ಲೀಕ್ ಆಗಿದ್ದೇಗೆ.? ಇದಕ್ಕೆ ಅವಕಾಶ ಕೊಟ್ಟವರು ಯಾರು? ರಾಜಭವನದಿಂದ ಇದು ಸೋರಿಕೆಯಾಗಿದ್ದೇಗೆ?
9 ತಿಂಗಳಿಂದ ಪ್ರಾಸಿಕ್ಯೂಶನ್ ಇಟ್ಟುಕೊಂಡಿದ್ದೇಕೆ? ಕಾನೂನುಬಾಹಿರವಾಗಿ ಇಟ್ಟುಕೊಂಡಿದ್ದೇಕೆ? ನೀವು ಇಟ್ಕೊಂಡು ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸಿದ್ದೇಕೆ? ಎಂದರು.
ಅಪರಾಧ ಪ್ರಕರಣ ತನಿಖೆಗಿದ್ದ ಮುಕ್ತ ಅವಕಾಶ ವಾಪಸ್ ಗೆ ನಿರ್ಧರಿಸಲಾಗಿದೆ. ದೆಹಲಿ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಆಯಕ್ಟ್ ವಾಪಸ್ ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಮೇಲೆ ಗಂಭೀರ ಆರೋಪವಿದೆ. ನಿಯಮಗಳ ಅನ್ವಯ ಮಾಡುವುದಿಲ್ಲ ಎಂಬ ಆರೋಪ ಎದುರಿಸುತ್ತಿದೆ. ಹಾಗಾಗಿ ಈ ಮುಕ್ತ ಅವಕಾಶ ವಾಪಸ್ ಪಡೆದಿದ್ದೇವೆ. ಸಿಎಂ ಮೇಲೆ ತನಿಖೆಗೆ ಅವಕಾಶ ಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ಅದರ ಅಗತ್ಯವಿಲ್ಲ. ನಾವು ತೆಗೆದುಕೊಂಡ ನಿರ್ಧಾರ ಸ್ಪಷ್ಟವಾಗಿದೆ. ಸಿಬಿಐ ಮಿಸ್ ಯೂಸ್ ಆಗ್ತಿದೆ ಎಂಬ ಆರೋಪವಿದೆ. ಹಾಗಾಗಿ ಇದನ್ನ ವಾಪಸ್ ಪಡೆದಿದ್ದೇವೆ ಎಂದು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ವಾಲ್ಮೀಕಿ ಪ್ರಕರಣ ಸಿಬಿಐಗೆ ಕೊಡುವ ವಿಚಾರವಾಗಿ ಮಾತನಾಡಿದಂತ ಅವರು, ಹಾಗಾಗಿ ವಾಪಸ್ ಪಡೆಯಲಾಗಿದ್ಯಾ ಎಂಬ ಪ್ರಶ್ನೆಗೆ ಉತ್ತರಿಸಿದಂತ ಅವರು, ಅಂತಹ ಸಂದರ್ಭ ಈಗಿಲ್ಲ. ಮುಂದಿನ ಅಪಾಯವನ್ನೇನು ನಾವು ಊಹಿಸಿಲ್ಲ. ಊಹಿಸಿ ಈ ನಿರ್ಧಾರ ತೆಗೆದುಕೊಂಡಿಲ್ಲ. ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಕೆಲಸ ಮಾಡ್ತಿದೆ. ಎಲೆಕ್ಷನ್ ನಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಒಂದು ಪಾರ್ಟಿಯ ಪರವಾದ ನಿಲುವು ಗೊತ್ತಾಗಿದೆ. ಕೇಂದ್ರ ಸರ್ಕಾರ ಯಾವುದನ್ನ ದುರ್ಬಳಕೆ ಮಾಡಿಕೊಳ್ತಿದೆ. ಆ ಎಲ್ಲವೂ ಪೂರ್ವಾಗ್ರಹ ಪೀಡಿತವೇ? ರಾಜಭವನದ ಮುಖ್ಯಸ್ಥ ಗೂಬೆ ಕೂರಿಸ್ತಾರೆ. ಸರ್ಕಾರದ ಮೇಲೆಯೇ ಗೂಬೆ ಕೂರಿಸ್ತಾರೆ. ಇದನ್ನ ನೋಡಿದ್ರೆ ನಿಮಗೇ ಗೊತ್ತಾಗುತ್ತದೆ ಎಂದು ತಿಳಿಸಿದರು.
ಮೊದಲು ಸಿಬಿಐಗೆ ಮುಕ್ತ ಅವಕಾಶ ನೀಡಿದ್ದನ್ನು ಈಗ ನಾವು ವಾಪಸ್ ಪಡೆದಿದ್ದೇವೆ. ಇದರಿಂದ ಭಯ ಯಾರಿಗೂ ಇಲ್ಲ. ಭಯ ಹುಟ್ಟಿಸಲು ಮಿಸ್ ಯೂಸ್ ಆಗಬಾರದೆಂದು ವಾಪಸ್ ಪಡೆದಿದ್ದೇವೆ ಎಂದರು.
ಸ್ನೇಹಮಯಿ ಕೃಷ್ಣ ಸಿಬಿಐಗೆ ಕೊಡುವಂತೆ ಡಿಮ್ಯಾಂಡ್ ವಿಚಾರವಾಗಿ ಪ್ರತಿಕ್ರಿಯಿಸಿದಂತ ಅವರು, ಕೊಡುವುದಕ್ಕೆ ಬರುವುದಿಲ್ಲ ಅಂತ ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವರದಿ ತಿರಸ್ಕರಿಸಿದೆ. ಕೇಂದ್ರಕ್ಕೆ ಇದನ್ನೇ ರೆಫರ್ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹಿಂದೆಯೂ ಇದೇ ನಿರ್ಣಯ ತೆಗೆದುಕೊಳ್ಳಲಾಗಿತ್ತು ಎಂದರು.
ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಚುನಾವಣೆ ನಿಗದಿಯಾಗಿದೆ. ಎಂಎಲ್ ಸಿ ಬೈ ಎಲೆಕ್ಷನ್ ಗೆ ಸಮ್ಮತಿ ನೀಡಲಾಗಿದೆ. ಮೇಲ್ಮನೆಯ ಎರಡು ಸ್ಥಾನಗಳಿಗೆ ನಾಮಕರಣ ಮಾಡಲಾಗುತ್ತಿದೆ. ಆಯ್ಕೆ ಮಾಡುವ ಅಧಿಕಾರ ಸಿಎಂಗೆ ನೀಡಿಕೆ ಮಾಡಲಾಗಿದೆ ಎಂದರು.
ಸಿಖ್ ಸಮುದಾಯ ವಿವಾಹ ನೊಂದಣಿಗೆ ತಿದ್ದುಪಡಿ ತರಲಾಗುತ್ತಿದೆ. ಹಿಂದೂ ವಿವಾಹ ಕಾಯ್ದೆಯಡಿ ನೊಂದಣಿಯಿತ್ತು. ಇದು ವಿದೇಶಿ ಪ್ರವಾಸದ ವೇಳೆ ಗೊಂದಲಕ್ಕೆ ಕಾರಣವಾಗಿತ್ತು. ಹಾಗಾಗಿ ನಿಯಮ ರೂಪಿಸಲು ಅನುಮತಿ ನೀಡಲಾಗಿದೆ ಎಂದರು.
ಪ್ರೌಢಶಾಲೆಗಳಲ್ಲಿ ಇಂಟರ್ ನೆಟ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. 74 ಆದರ್ಶ ವಿದ್ಯಾಲಯಗಳ ಮೇಲ್ದರ್ಜೆಗೇರಿಕೆಗೆ ಸಮ್ಮತಿ ನೀಡಲಾಗಿದೆ ಎಂದರು.
ಬಿಬಿಎಂಪಿ ವ್ಯಾಪ್ತಿ ರಸ್ತೆಗಳಿಗೆ ಡಾಂಬರೀಕರಣ ಮಾಡಲು 659.70 ಕೋಟಿ ಅನುದಾನಕ್ಕೆ ಅನುಮೋದನೆಯನ್ನು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನೀಡಿದೆ ಎಂದು ತಿಳಿಸಿದರು.
ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿವಿಲ್ ಸರ್ವೀಸ್ ಕೋಡ್ ಮಾಡಬೇಕು. ಹೈಕೋರ್ಟ್ ಇದನ್ನಹೇಳಿತ್ತು. ಸಿವಿಲ್ ಸರ್ವೀಸ್ ಕೋಡ್ ಬೇಕೇ ಬೇಡವೇ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲಾಗುತ್ತಿದೆ. ಯಾರನ್ನ ನೇಮಿಸಬೇಕೆಂದು ಸಿಎಂಗೆ ಅಧಿಕಾರ ನೀಡಲಾಗಿದೆ ಎಂದು ತಿಳಿ