ತುಮಕೂರು: ತುಮಕೂರು ನಗರದಲ್ಲಿನ ಜಿಲ್ಲಾಧಿಕಾರಿಗಳ ಕಛೇರಿ ಎದುರು 19ನೇ ದಿನವೂ ಪ್ರತಿಭಟನೆಯು ಮುಂದುವರೆದಿದ್ದು. ಇಂದು ನೂರಾರು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ದ ಘೋಷಣೆ ಕೊಗಿದರು.
ಇಂದು ಬೆಂಗಳೂರು ನಗರ ಮತ್ತು ಗ್ರಾಮಾಂತರ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳು ತುಮಕೂರು ಧರಣಿಯಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಿದ್ದಾರೆ. ಪ್ರತಿಭಟನಯನ್ನು ಉದ್ದೇಶಿಸಿ ಮಾತನಾಡುತ್ತ ಡಾ.ಪ್ರಸನ್ ಕುಮಾರ್ ಮಾತನಾಡಿ ನಮ್ಮ ಧರಣಿ ದಿನೇ-ದಿನೇ ಗಟ್ಟಿಗೊಳುತ್ತಿದ್ದು ಕಾಯಾಮಾತಿ ಪಡೆಯುವವರೆಗೂ ನಮ್ಮ ಹೊರಾಟ ನಿಲ್ಲುವುದಿಲ್ಲ ಮತ್ತು ಬೆಂಗಳೂರಿನಲ್ಲಿ ನಾಳೆಯಿಂದ ನಮ್ಮ ಪ್ರತಿಭಟನೆ ಪ್ರೀಡಂ ಪಾರ್ಕ್ನಲ್ಲಿ ನಮ್ಮ ಹೊರಟ ಪ್ರಾರಂಭವಾಗುತ್ತದೆ. ರಾಜ್ಯ ಸರ್ಕಾರ ಹಲವು ವರ್ಷಗಳಿಂದ ನಮ್ಮ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸದೆ ಮೀನಾ ಮೇಷ ನಡೆಸುತ್ತಿದ್ದು. ನ್ಯಾಯಯುತ ಬೇಡಿಕೆ ಇಡೆರುವವರೆಗೂ ನಮ್ಮ ಹೊರಟನಿಲ್ಲದು ಎಂದುರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ.ಕೆ.ಎಚ್, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತ ನಮ್ಮ ಪ್ರತಿಭಟನೆಯಿಂದ ಸರ್ಕಾರ ಈಗಾಗಲೇ ವಿಚಲಿತಗೊಂಡಿದ್ದು, ರಾಜ್ಯದ ಬೇರೆ-ಬೇರೆ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರ ಕೊರತರಯಿಂದ ತರಗತಿಗಳನ್ನು ಬಹಿಷ್ಕಕರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ, ದಶಕಗಳಿಂದ ಅತಿಥಿ ಉಪನ್ಯಾಸಕರನ್ನು ವಂಚಿಸಿದ ಸರ್ಕಾರ ಈಗ ವಿದ್ಯಾರ್ಥಿಗಳನ್ನು ವಂಚಿಸುವ ದಾರಿ ಹಿಡಿದಿದೆ, ಕಾಲೇಜು ವಿದ್ಯಾರ್ಥಿಗಳು ರಾಜ್ಯಾದ್ಯಂತ ಪ್ರತಿಭನೆ ಮಾಡುವ ಮುನ್ನ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯುತ ಬೇಡಿಕೆಯನ್ನು ಈಡೆರಿಸ ಬೇಕೆಂದು ಒತ್ತಾಯಿಸಿದರು.
ಬೆಂಗಳೂರು ನಗರದ ಅತಿಥಿ ಉಪನ್ಯಾಸಕಿ ಡಾ.ಸುಮಾಲತ ಮಾತನಾಡಿ ಸರ್ಕಾರ ನಮಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡದೆ.ಮಹಿಳೆಯರಿಗೆ ಕನಿಷ್ಟ ಒಂದು ರಜೆಯನ್ನು ನೀಡದೆ ಶೋಷಣೆ ಮಾಡುತ್ತಿದ್ದು. ನಮ್ಮ ದಶಕಗಳ ಬೇಡಿಕೆಯನ್ನು ಇಡೆರಿಸುವ ವರೆಗೂ ನಮ್ಮ ಪ್ರತಿಭಟನೆ ನಿಲ್ಲವುದಿಲ್ಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ%80ರಷ್ಟು ಅತಿಥಿ ಉಪನ್ಯಾಸಕರೆ ಸೇವೆ ಸಲ್ಲಿಸುತ್ತಿದ್ದು. ರಾಜ್ಯಾದ್ಯಂತ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರಿದ್ದು ನಾವು ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಈ ಬಾರಿ ಮಾಡು ಇಲ್ಲವೇ ಮಡಿ ಎಂಬ ಧ್ಯೇಯ ವಾಕ್ಯದೊಂದಿಗೆ ಹೋರಾಟ ಪ್ರಾರಂಭಿಸಿದ್ದು ಸರ್ಕಾರ ನಮಗೆ ಲಿಖಿತ ರೂಪದ ಆದೇಶ ಬರುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಶಿವಣ್ಣ ತಿಮ್ಲಾಪುರ, ಡಾ.ಮಲ್ಲಿಕಾರ್ಜುನ್.ಎಂ.ಟಿ.,ಶAಕರಪ್ಪ ಹಾರೋಗೆರೆ,ರಘು, ಡಾ.ಶೇಖರ್, ಗಿರೀಶ್, ಡಾ.ಹನುಮಂತರಾಜು, ವಿದ್ಯಾಜೋತಿ, ರಾಮಲಕ್ಷ್ಮಿ
,ರೇಣುಕ.ಡಿ.ಆರ್,ಮಹಾಲಕ್ಷ್ಮಿ, ಕಿರಣ ಕುಮಾರ್, ಜಯರಾಮು, ನಟರಾಜು, ಡಾ.ಜಾಲಜಾಕ್ಷಿ,ಶಂಕರ,ಶಶಿಧರ್, ಡಾ.ಶಿವಯ್ಯ, ಶಿವಲಿಂಗಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.