ತುಮಕೂರು : ಇಂದು (ಏ.28ರ ಸೋಮವಾರ) ಮಳೆ-ಗಾಳಿಗೆ ಮಾರುತಿ 800 ಕಾರು ಮೇಲೆ ವಿದ್ಯುತ್ ಕಂಬ ಬಿದ್ದರೂ ಕಾರಿನಲ್ಲಿದ್ದ ಇಬ್ಬರು ಪವಾಡದ ರೀತಿಯಲ್ಲಿ ಪ್ರಾಣಾಪಾಯದಿಂದ ಬಚವಾಗಿದ್ದು, ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮರಗಳು ಬಿದ್ದು ಕಾರುಗಳು, ಅಂಬ್ಯುಲೆನ್ಸ್ ಜಕ್ಕಂಗೊಂಡ ಘಟನೆ ನಡೆದಿದೆ.
ಇದಲ್ಲದೆ ನಗರದ ಜಿಲ್ಲಾ ಆಸ್ಪತ್ರೆ ಅವರಣದ ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ಕಾರುಗಳ ಮತ್ತು ಅಂಬ್ಯುಲೆನ್ಸ್ ಮೇಲೆ ಬೃಹತ್ ಮರಗಳು ಬಿದ್ದ ಪರಿಣಾಮ ವೈದ್ಯರ ಕಾರುಗಳು ಅಂಬ್ಯುಲೆನ್ಸ್ ಗಳು ಹಾನಿಗೊಳಗಾಗಿವೆ.
ಪಕ್ಕದಲ್ಲಿದ್ದ ಟೀ ಅಂಗಡಿಗೂ ಹಾನಿಯಾಗಿದ್ದು, . ಆಸ್ಪತ್ರೆಯ ಪಕ್ಕದಲ್ಲಿರುವ ಆರ್ಯನ್ ಪ್ರೌಢಶಾಲೆಯ 6ಕ್ಕೂ ಹೆಚ್ಚು ಶಾಲಾ ಕೊಠಡಿಗಳ ಮೇಲ್ಚಾವಣೆ ಹಾರಿ ಪಕ್ಕದ ರಸ್ತೆಯ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.

ಆಸ್ಪತ್ರೆಯ ಬಳಿ ನಿಂತಿದ್ದ ಮಾರುತಿ 800 ಕಾರು ಮೇಲೆ ವಿದ್ಯುತ್ ಕಂಬ ಬಿದ್ದರೂ ಅದರಲ್ಲಿದ್ದ ಇಬ್ಬರು ಪವಾಡದ ರೀತಿಯಲ್ಲಿ ಯಾವುದೇ ಅನಾವುತ ಸಂಭವಿಸದೆ ಬಚವಾಗಿದ್ದಾರೆ. ಅವರ ಅದೃಷ್ಟ ಚೆನ್ನಾಗಿತ್ತು, ಆಯಸ್ಸು ಇತ್ತು ಅನ್ನಿಸುತ್ತದೆ, ಇದರಿಂದ ಕಾರಿನಲ್ಲಿದ್ದ ಆ ಇಬ್ಬರೂ ಯಾವುದೇ ತೊಂದರೆಯಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿದ್ದಗಂಗಾ ಮಹಿಳಾ ಕಾಲೇಜಿನ ಮರ ಬಿದ್ದು ಕಾಲೇಜು ಕಾಂಪೌಂಡ್ ಗೆ ಹಾನಿಯಾಗಿದೆ. ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದರು.