ಸಮೂಹ ಮಾಧ್ಯಮ ವ್ಯವಸ್ಥೆಯನ್ನು ಮಾಹಿತಿ ಯುಗ ಎಂದು ಕರೆಲಾಗುತ್ತದೆ : ಡಾ.ಅಮ್ಮಸಂದ್ರ ಸುರೇಶ್

ತುಮಕೂರು; ರೇಡಿಯೋ, ಪತ್ರಿಕೆಗಳು , ಕೇಬಲ್, ದೂರದರ್ಶನ ಮತ್ತು ರಂಗಭೂಮಿ ಸೇರಿದಂತೆ ಎಲ್ಲವೂ ಸಮೂಹ ಮಾಧ್ಯಮದ ಅಂಗಗಳಾಗಿವೆ. ಈ ಸಾಧನಗಳು ಸಮಾಜದ ಅಭಿಪ್ರಾಯಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೊಳ್ಳಲು ಮತ್ತು ಸಾರ್ವಜನಿಕರ ಸದಾಶಯ ನೀತಿಗಳು ಜನಸಾಮಾನ್ಯರಿಗೆ ತಲುಪಿಸುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಇಂದಿನ ಸಮೂಹ ಮಾಧ್ಯಮಗಳ ವ್ಯವಸ್ಥೆ ಮೂಲಕ, ನಾವು ಅದರ ಭಾಗವಾಗಿ ಹೋಗಿದ್ದೇವೆ. ಹೀಗಾಗಿ ಪ್ರಸ್ತುತ ಯುಗವನ್ನು ಮಾಹಿತಿಯ ಯುಗ ಎಂದು ಕರೆಯಲಾಗುತ್ತದೆ ಎಂದು ಲೇಖಕರು, ಅಂಣಕಾರರು,ಸಂವಹನ ತಜ್ಞರಾದ ಡಾ.ಅಮ್ಮಸಂದ್ರ ಸುರೇಶ್ ಅವರು ಅಭಿಪ್ರಾಯಪಟ್ಟರು.

ನಗರದ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ವಾರದ ಸರಣಿ ಉಪನ್ಯಾಸ ಮಾಲಿಕೆ ಕಾರ್ಯಾಗಾರದಲ್ಲಿ ಶನಿವಾರದಂದು ಅಭಿವೃದ್ಧಿ ಸಂವಹನದಲ್ಲಿ ವಿವಿಧ ಮಾಧ್ಯಮಗಳ ಪಾತ್ರ ವಿಷಯ ಕುರಿತು ವೆಬಿನಾರ್ ಮೂಲಕ ಮಾತನಾಡಿದ ಅವರು ಮಾಹಿತಿಯನ್ನು ಹರಡಲು ಮತ್ತು ಹಂಚಿಕೊಳ್ಳಲು ಸಮೂಹ ಮಾಧ್ಯಮವು ಬೇಕೇ ಬೇಕು, ಇದನ್ನು ನಾವು ಆಧುನಿಕ ಯುಗದಲ್ಲಿ ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದೇವೆ ಮತ್ತು ಬಳಸಲಾಗುತ್ತದೆ. ಡಿಜಿಟಲ್ ತಂತ್ರಜ್ಞಾನದ ಪ್ರಗತಿಯ ನಂತರ ಸಮೂಹ ಮಾಧ್ಯಮವು ಹೆಚ್ಚು ಪ್ರಬಲವಾಗಿದೆ. ಇದು ವಿವಿಧ ಪ್ರಮುಖ ವಿಚಾರಗಳು, ಸುದ್ದಿಗಳು ಮತ್ತು ಅಭಿಪ್ರಾಯಗಳು ಅತ್ಯಂತ ಪ್ರಭಾವಶಾಲಿ ಮೂಲದ ನೆಲೆಯಾಗಿದೆ. ಇದು ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ತ್ವರಿತವಾಗಿ ಒದಗಿಸುತ್ತಿದೆ ಎಂದು ತಿಳಿಸಿದರು.

ಇಂದಿನ ಜಗತ್ತಿನಲ್ಲಿ, ಸಮೂಹ ಮಾಧ್ಯಮವು ಇಂಟರ್ನೆಟ್ , ಸೆಲ್ ಫೆÇೀನ್‍ಗಳು, ಎಲೆಕ್ಟ್ರಾನಿಕ್ ಮೇಲ್, ಕಂಪ್ಯೂಟರ್‍ಗಳು, ಪೇಜರ್‍ಗಳು ಮತ್ತು ಉಪಗ್ರಹಗಳನ್ನು ಅಳವಡಿಸಿಕೊಂಡಿದೆ. ಈ ಎಲ್ಲಾ ಹೊಸ ಸೇರ್ಪಡೆಗಳು ಒಂದೇ ಮೂಲದಿಂದ ಬಹಳಷ್ಟು ಜನರಿಗೆ ಮಾಹಿತಿಯನ್ನು ರವಾನಿಸುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಹಾಗಾಗಿ ಸಮೂಹ ಮಾಧ್ಯಮಗಳ ಬಗ್ಗೆ ಮಾತನಾಡುವಾಗ ರೇಡಿಯೋ, ದೂರದರ್ಶನ, ಪತ್ರಿಕಾ ಮತ್ತು ಸಿನಿಮಾ ಜನರ ಗಮನ ಸೆಳೆಯುವಂತಹದು ನಿಜ. ಇದು ಜನಸಾಮಾನ್ಯರ ಅಚ್ಚುಮೆಚ್ಚಿನ ತಾಣವಾಗಿದೆ.ಇದರ ಸುತ್ತ ಜನರು ಹೆಚ್ಚಾಗಿ ಗಿರಕಿ ಹೊಡೆದು ಸುತ್ತುತ್ತಿರುವುದು ಕಾಣುತ್ತೇವೆ ಎಂದರು.

ಇನ್ನು ಇತರ ಸಮೂಹ ಮಾಧ್ಯಮ ಸಾಧನಗಳಿಗೆ ಹೋಲಿಸಿದರೆ, ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯು ವಿಭಿನ್ನವಾಗಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಇತ್ತೀಚಿನ ಘಟನೆಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಕೆಲವು ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳು ಸುದ್ದಿ, ಘಟನೆಗಳು, ಕ್ರೀಡೆ, ಸಾಂಸ್ಕøತಿಕ ಜೀವನ, ಧಾರ್ಮಿಕ,ಸಾಹಿತಿಕ, ಕೃಷಿ, ಶಿಕ್ಷಣ, ಫ್ಯಾಷನ್ ಮತ್ತು ಯುವಜನರಿಗೆ ಮನರಂಜನೆಯ ವರದಿಗಳನ್ನು ಬಿತ್ತರಿಸುತ್ತದೆ.

ಈ ಮಾಧ್ಯಮಗಳ ಜೊತೆ ಜೊತೆಯಲ್ಲಿ ಕರಪತ್ರಗಳು, ಪುಸ್ತಕಗಳು, ನಿಯತಕಾಲಿಕೆಗಳು, ಪೆÇೀಸ್ಟರ್‍ಗಳು, ಜಾಹೀರಾತು ಫಲಕಗಳು ಸಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇವುಗಳ ಬಳಕೆ ಗ್ರಾಹಕರು ಅವರ ಅವಶ್ಯಕತೆಯ ಅನುಗುಣವಾಗಿ ಬಳಸಿಕೊಳ್ಳುತ್ತಾರೆ.ಇದಲ್ಲದೆ, ಈ ಉಪಕರಣಗಳ ವ್ಯಾಪ್ತಿಯು ದೇಶದಾದ್ಯಂತ ವಾಸಿಸುವ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತದೆ ಎಂದು ನುಡಿದರು.

ಟಿವಿ ನೋಡುವ ಅಥವಾ ರೇಡಿಯೊವನ್ನು ಕೇಳುವ ಮೂಲಕ, ನಮ್ಮ ಇತಿಹಾಸ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜ್ಞಾನವನ್ನು ತಿಳಿದುಕೊಳ್ಳಬಹುದಾಗಿದೆ.ಅದೇ ರೀತಿ ಸಮೂಹ ಮಾಧ್ಯಮವು ಇಂದಿನ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆದು ಪ್ರಸಿದ್ಧಿ ಪಡೆಯಲು ಸೆಲ್ ಫೆÇೀನ್ ಪ್ರಮುಖ ಸಾಧನ ಅಂದರೆ ತಪ್ಪಾಗಲಾರದು. ಈ ಸೆಲ್ ಫೆÇೀನ್‍ಗಳು, ಇಂಟರ್ನೆಟ್, ಕಂಪ್ಯೂಟರ್‍ಗಳು, ಪೇಜರ್‍ಗಳು, ಇಮೇಲ್‍ಗಳು ಮತ್ತು ಉಪಗ್ರಹಗಳನ್ನು ಒಳಗೊಂಡಿದೆ. ಈ ಮಾಧ್ಯಮಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಬಹು ಬೇಗ ಮಾಹಿತಿಯನ್ನು ರವಾನೆ ಮಾಡಲು ಸಹಕರಿಸುತ್ತದೆ.ಇದು ಜನಸಾಮಾನ್ಯರ ಅಚ್ಚುಮೆಚ್ಚಿನ ಗೆಳೆಯ ಎನ್ನುವಂತೆ ಭಾಸವಾಗುತ್ತಿದೆ, ಎನ್ನುವ ಮಟ್ಟಿಗೆ ಈ ಸಾಧನ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಶ್ವೇತಾ ಎಂ. ಪಿ, ಕಿರಣ್ ಸಿ.ಎನ್. ರವಿಕುಮಾರ್ ಸಿ.ಹೆಚ್ ರೇಡಿಯೋ ಸಿದ್ಧಾರ್ಥದ ಗೌತಮ್.ವಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳಾದ ಕೀರ್ತನಾ, ಮತ್ತು ಶೋಭಾ ಅವರು ವೆಬಿನಾರ್‍ನ ನಿರ್ವಹಣೆ ಮಾಡಿದರು.

Leave a Reply

Your email address will not be published. Required fields are marked *