ತುಮಕೂರು : ರಾಜ್ಯ ಮಟ್ಟದ ಪತ್ರಿಕೆಗಳ ಪತ್ರಕರ್ತ ಎದುರಲ್ಲೇ ಶಾಸಕ ಎಸ್.ಆರ್.ಶ್ರೀನಿವಾಸ್ (ವಾಸಣ್ಣ) ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರೂ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರೂ ಆದ ರಾಯಸಂದ್ರ ರವಿಕುಮಾರ್ ಹೇಳಿದರು.
ಅವರಿಂದು ಹಲ್ಲೆಯಿಂದ ತುಮಕೂರು ಜಿಲ್ಲಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಥಳದಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿ, ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ವತಿಯಿಂದ ಗುಬ್ಬಿ ಮತ್ತು ತಿಪಟೂರು ತಾಲ್ಲೂಕಿನ ಗಣಿಬಾಧಿತ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಬಿಡ್‍ನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾದ ನನಗೆ ಬಿಡ್ ಆಗಿತ್ತು.
ಈ ಹಿನ್ನಲೆಯಲ್ಲಿ ಕಾಮಗಾರಿಗೆ ಕರಾರನ್ನು ಮಾಡಿಸಿಕೊಳ್ಳಬೇಕೆಂದು ಸಂಬಂಧ ಪಟ್ಟ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ತಿಮ್ಮರಾಯಪ್ಪನವರ ಬಳಿಗೆ ಗುರುವಾರ ಮಧ್ಯಾಹ್ನ 1.45ರಲ್ಲಿ ಹೋದಾಗ, ನಿಮ್ಮ ಬಿಡ್‍ನ್ನು ರದ್ದು ಮಾಡಲಾಗಿದೆ ಎಂದು ಇಂಜಿನಿಯರ್ ತಿಮ್ಮರಾಯಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಛೇರಿಯಿಂದ ತೆರಳಿದರು ಎಂದು ರಾಯಸಂದ್ರ ರವಿಕುಮಾರ್ ಹೇಳಿದರು.
ನಾನು ಸಂಜೆ 6ಗಂಟೆಯತನಕ ಅವರ ಕಛೇರಿ ಬಾಗಿಲಲ್ಲೇ ಕಾದು ಕುಳಿತೆ, ಅವರು ಬರದೇ ಇದ್ದುದರಿಂದ ನನಗೆ ನ್ಯಾಯಯುತವಾಗಿ ಟೆಂಡರ್ ಸಿಕ್ಕಿದ್ದು ಅದನ್ನು ಕರಾರು ಮಾಡಿ ಕೊಡಬೇಕೆಂದು ನಾನು ನ್ಯಾಯಕ್ಕಾಗಿ ಪಿಡಬ್ಲುಡಿ ಕಚೇರಿ ಮುಂಭಾಗ ಅಹೋ ರಾತ್ರಿ ಧರಣಿಗೆ ಶಾಮಿಯಾನ ಹಾಕಿ ಬೆಂಬಲಿಗರೊಂದಿಗೆ ಧರಣಿ ಸತ್ಯಗ್ರಹವನ್ನು ಮಾಡುತ್ತಿದ್ದೆ ಎಂದು ತಿಳಿಸಿದರು.
ಸುಮಾರು ರಾತ್ರಿ 11.15ರ ಸುಮಾರಿನಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಆರ್.ಶ್ರೀನಿವಾಸ್ ಅವರು, ತಮ್ಮ ಬೆಂಬಲಿಗರೊಂದಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂಧಿಸಿ ನನ್ನನ್ನು ಅನಾಮತ್ತು ಹಿಡಿದೆಳೆದು ಶಾಸಕರು ಮತ್ತು ಅವರ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ, ದೊಣ್ಣೆ, ಮಚ್ಚು ಲಾಂಗ್‍ಗಳಿಂದದ ಹೊಡೆದು ಕಿಡ್ನಪ್ ಮಾಡಲು ಕಾರೊಂದಕ್ಕೆ ನನ್ನನ್ನು ಎಳೆದು ಹತ್ತಿಸಿಕೊಳ್ಳಲು ಹೋದಾಗ ತಪ್ಪಿಸಿಕೊಂಡು ಹೋಗಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಪಡೆದು ಪ್ರಾಣ ಉಳಿಸಿಕೊಂಡೆ ಎಂದು ತಿಳಿಸಿದರು.
ಸ್ಥಳದಲ್ಲಿ ಪತ್ರಕರ್ತರು, ನನ್ನ ಬೆಂಬಲಿಗರು ಸಹ ಇದ್ದರು, ಪತ್ರಕರ್ತರ ಮೊಬೈಲ್‍ಗಳನ್ನು ಕಿತ್ತುಕೊಂಡರು ಹಾಗೂ ಸ್ಥಳದಲ್ಲಿದ್ದ ಪೊಲೀಸ್ ಒಬ್ಬರು ಮೇಲಾಧಿಕಾರಿಗಳಿಗೆ ಘಟನೆ ಬಗ್ಗೆ ತಿಳಿಸಲು ಪೋನ್ ಮಾಡಿದಾಗ ಪೊಲೀಸರ ಕೈಯನ್ನೇ ತಿರುಚಿ ಮೊಬೈಲ್ ಕಸಿದುಕೊಂಡು ಗೂಂಡಾಗಿರಿ ಮಾಡಿದರು ಎಂದು ತಿಳಿಸಿದರು.
ನೀನು ಅದೇಗೆ ನನ್ನ ಕ್ಷೇತ್ರದಲ್ಲಿ ಕಾಮಗಾರಿ ನಡೆಸುತ್ತೀಯ ನಿನ್ನ ಜೀವಂತ ಸುಟ್ಟಾಕುತ್ತೇವೆ, ತುಮಕೂರಿನಲ್ಲಿ ಎಂಥೆಂತಹವರನ್ನೂ ಬಿಟ್ಟಿಲ್ಲ ನಿನ್ನ ಬಿಡುತ್ತೀನ ಎಂದು ಜೀವ ಬೆದರಿಕೆ ಹಾಕಿದ್ದಾರೆ.ಹಾಗಾಗಿ ನಾನು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ, ಉಪಮುಖಯಮಂತ್ರಿಗಳೂ ಆದ ಡಿ.ಕೆ.ಶಿವಕುಮಾರ್, ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಗುತ್ತಿಗೆದಾರರ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಅವರಲ್ಲಿ ಮನವಿ ಮಾಡುತ್ತೇನೆ ಶಾಸಕರೇ ಗೂಂಡಾ ರೀತಿ ವರ್ತಿಸಿ ಪ್ರಾಣ ಬೆದರಿಕೆ ಹಾಕುವ ಹಂತಕ್ಕೆ ಬಂದಾಗ ಗುತ್ತಿಗೆದಾರನಾದ ನನಗೆ ರಕ್ಷಣೆ ಎಲ್ಲಿ, ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ, ನನಗೆ ರಕ್ಷಣೆ ಕೊಟ್ಟು, ಕಾನೂನು ಪ್ರಕಾರ ನನಗಾಗಿರುವ ಟೆಂಡರನ್ನು ಕರಾರು ಮಾಡಿಕೊಟ್ಟು ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು, ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿರುವ ಕಾರ್ಯಪಾಲಕ ಇಂಜಿನಿಯರ್ ತಿಮ್ಮರಾಯಪ್ಪನವರನ್ನು ಅಮಾತ್ತುಗೊಳಿಸಿ, ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಈ ಘಟನೆಗೆ ಕಾರಣವಾದ ಇ.ಇ.ಯನ್ನು ಅಮಾನತ್ತುಗೊಳಿಸಬೇಕು, ನನ್ನ ಮೇಲೆ ಹಲ್ಲೆ ನಡೆಸಿದ ಶಾಸಕರ ಮೇಲೆ ಪ್ರಜಾಪ್ರತಿನಿಧಿ ಕಾಯ್ದೆ ಅಡಿ ಎಫ್‍ಐಆರ್ ದಾಖಲಿಸಬೇಕು, ನನಗೆ ಆಗಿರುವ ಟೆಂಡರನ್ನು ನ್ಯಾಯಬದ್ಧವಾಗಿ ಕರಾರು ಮಾಡಿ ಕೊಡಬೇಕು. ಶಾಸಕರ ಬೆಂಬಲಿಗರನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ನಾನು ಇಂಜಿಯರ್ ವಿರುದ್ಧ ನನಗೆ ಕಾನೂನು ರೀತಿ ಆಗಿರುವ ಟೆಂಡರನ್ನು ಕರಾರು ಮಾಡಿ ಕೊಡಿ ಎಂದು ಧರಣಿ ಕುಳಿತಿದ್ದೆ, ಆದರೆ ಏಕಾಏಕಿ ಶಾಸಕರು ನನ್ನ ಕ್ಷೇತ್ರದಲ್ಲಿ ನೀನೇನು ಟೆಂಡರ್ ತೆಗೆದುಕೊಳ್ಳುವುದು ಅದೇಗೆ ಕೆಲಸ ಮಾಡುತ್ತೀಯ, ಪ್ರಾಣ ತೆಗೆಯುತ್ತೇನೆ, ಸುಟ್ಟಾಕಿ ಬಿಡುತ್ತೇನೆ ಎಂದು ಮಾರಣಾಂತಿಕ ಹಲ್ಲೆ ಮಾಡಿದರು. ನಾನು ಧರಣಿ ಮಾಡುತ್ತಿರುವುದು ಇಂಜಿನಿಯರ್ ವಿರುಧ್ಧ, ಕುಂಬಳಕಾಯಿ ಕಳ್ಳ ಎಂದರೆ ಹೆಗಲು ತಡಕಿಕೊಂಡಿದ್ದಾರೆ, ನಾನು ಯಾವುದೇ ಎಂಎಲ್‍ಎ, ಸರ್ಕಾರದ ವಿರುದ್ಧ ಧರಣಿ ಕೂತಿರಲಿಲ್ಲ ಎಂದು ಹೇಳಿದರು.
ಸ್ಥಳದಲ್ಲಿದ್ದ ಪತ್ರಕರ್ತರ ಹೇಳಿಕೆ.
ನಿಜ ಈ ಘಟನೆ ನಮ್ಮ ಕಣ್ಣೆದುರೇ ನಡೆಯಿತು. ಶಶಿಧರ್ ದೋಣಿಹಕ್ಲು(ಪೇಸ್‍ಬುಕ್‍ನಿಂದ)
ಟೆಂಡರ್ ಕರಾರು ಮಾಡಿಕೊಡದ ಇಂಜಿನಿಯರ್ ವಿರುದ್ಧ ರಾಯಸಂದ್ರ ರವಿಕುಮಾರ್ ಪ್ರತಿಭಟನೆ ನಡೆಸುತ್ತಿದ್ದಾಗ ಏಕಾಏಕಿ ತನ್ನ ಬೆಂಬಲಿಗರೊಂದಿಗೆ PWD ಕಾರ್ಯಾಲಯ ಆವರಣಕ್ಕೆ ನುಗ್ಗಿದ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ , ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ಬೆಂಬಲಿಗರು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದರು.
ಆರಂಭದಲ್ಲಿ ಶಾಸಕರು ಬಂದಾಗ ತಮ್ಮದೇ ಪಕ್ಷದ ಮುಖಂಡನಾದ ರವಿಯವರ ಮನವೊಲಿಸಿ ಕರೆದುಕೊಂಡು ಹೋಗುತ್ತಾರೆಂದೇ ಭಾವಿಸಿದ್ದೆವು. ಸ್ವತಃ ಶಾಸಕರೇ ಈ ಮಟ್ಟಕ್ಕೆ ಇಳಿದಿದ್ದು ಅಚ್ಚರಿ ಆಯಿತು. ನಾನು, ಹಿರಿಯ ಪತ್ರಕರ್ತರಾದ Kuchchangi Prasanna, ಶ್ರೀಹರ್ಷ ಸೋರಲಮಾವು , ಹವೀಬ್ , ಯೂಸಫ್ ರವರು ಸ್ಥಳದಲ್ಲಿದ್ದೆವು. ವಾಸು ಜತೆಗಿದ್ದವು ಘಟನೆಯ ವಿಡಿಯೋ ಚಿತ್ರೀಕರಸಲು ಹೋದವರ ಮೊಬೈಲ್ ಕಸಿದರು. ಪೆÇಲೀಸ್ ಸಿಬ್ಬಂದಿ ಠಾಣೆಗೆ/ ಮೇಲಾಧಿಕಾರಿಗಳಿಗೆ ಕರೆ ಮಾಡಲು ಹೋದಾಗ ಅವರ ಮೊಬೈಲ್ ಕೂಡ ಕಸಿದರು. ಅಹೋರಾತ್ರಿ ಧರಣಿಗಾಗಿ ಹಾಸಿದ್ದ ಹಾಸಿಗೆ ಅಡ್ಡಾದಿಡ್ಡಿ ಎಸೆದು, ಕುರ್ಚಿಗಳನ್ನು ಮುರಿದರು….
ವಿಡಿಯೋ ಸೆರೆಹಿಡಿಯಲು ಬಿಡದೆ ಮಾಧ್ಯಮದವರ ಕರ್ತವ್ಯಕ್ಕೆ ಎಸ್.ಆರ್.ಶ್ರೀನಿವಾಸ್ & ಟೀಮ್ ಅಡ್ಡಿಪಡಿಸಿತು.
ನಾವು ಸ್ವತಃ ಶ್ರೀನಿವಾಸ್ ಗೆ ‘ಸರ್ ಕೈ ಮಾಡ್ಬೇಡಿ..ಹೊಡಿಬೇಡಿ..ನೀವು ಶಾಸಕರು…ತಪ್ಪಾಗುತ್ತೆ’ ಎಂದು ಹೇಳಿದರೂ ಪ್ರಯೋಜನವಾಗಲಿಲ್ಲ. ರವಿ ಅವರನ್ನು ಕಾರಿಗೆ ಹತ್ತಿಸಿಕೊಂಡು ಹೋಗುವ ಪ್ರಯತ್ನ ಮಾಡಿದಾಗ, ಅವರು ರಕ್ಷಣೆಗೆ ಆಟೋ ಏರಿ ತಿಲಕ್ ಪಾರ್ಕ್ ಪೆÇಲೀಸ್ ಠಾಣೆಗೆ ಹೋದರು. ಅಲ್ಲಿಂದ ಸ್ನೇಹಿತರು ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರು.
ಶ್ರೀನಿವಾಸ್ ವರ್ತನೆ ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಾಂಗ್ರೆಸ್ ನಾಯಕರು ಸೇರಿದಂತೆ ಪಕ್ಷಾತೀತವಾಗಿ ಶ್ರೀನಿವಾಸ್ ನಡೆಗೆ ಖಂಡನೆ ವ್ಯಕ್ತವಾಗಿದೆ.
ಗುತ್ತಿಗೆ ವಿಚಾರಕ್ಕೆ ಇಂಜಿನಿಯರ್ ವಿರುದ್ಧ ಧರಣಿ ನಡೆಸಿದರೆ ಶ್ರೀನಿವಾಸ್ ಏಕೆ ಬರಬೇಕು?
ಅಕಸ್ಮಾತ್ ಸಾರಿಗೆ ನೌಕರರು ತಮ್ಮ ಹಕ್ಕಿಗಾಗಿ ಹೋರಾಡಿದರೆ ನಿಗಮದ ಅಧ್ಯಕ್ಷರಾಗಿರುವ ಶ್ರೀನಿವಾಸ್ ಏನು ಮಾಡಬಹುದು?
ಮುಂದೊಂದು ದಿನ ಶ್ರೀನಿವಾಸ್ ಕೃಷಿ-ತೋಟಗಾರಿಕೆ-ಸಹಕಾರಿ ಸಚಿವರಾದರೆ ಬಹುಶಃ ರೈತರು ಪ್ರತಿಭಟನೆಯನ್ನೇ ಮಾಡುವಂತಿಲ್ಲ!! ಎಂದು ಶ್ರೀನಿವಾಸ್ ವಿರುದ್ಧ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಲಿಂಗಾಯಿತ-ವೀರಶೈವ ಸಮಾಜದ ಜಿಲ್ಲಾಧ್ಯಕ್ಷರ ಭೇಟಿ.
ನೆನ್ನೆ ರಾತ್ರಿ ನಡೆದ ಘಟನೆ ಗುಬ್ಬಿ ಶಾಸಕ S ಖ ಶ್ರೀನಿವಾಸ್ ಹಾಗೂ ಸಹಚರರಿಂದ ಹಲ್ಲೆಯಾದ ಹಿನ್ನೆಲೆಯಲ್ಲಿ ಘಟನೆ ತಿಳಿದು ಸ್ಥಳಕ್ಕೆ ದಾವಿಸಿದ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರು ಟಿ ಬಿ ಶೇಖರ್, ಬಿಜೆಪಿ ಮುಖಂಡರು