ಶರಣ ಸಂಸ್ಕøತಿಯ ಮೂಲ ರೈತಾಪಿ ಸಂಸ್ಕøತಿ: ರಂಜಾನ್ ದರ್ಗಾ

ತುಮಕೂರು: ಜಗತ್ತಿನ ಯಾವ ಧರ್ಮಕ್ಕೂ ಇರದಷ್ಟು ಇತಿಹಾಸ ರೈತ ಸಮುದಾಯಕ್ಕಿದೆ. ಜಗತ್ತಿನ ಪ್ರತಿಯೊಂದು ಸಂಸ್ಕøತಿಯ ರಚನೆಗೂ ರೈತಾಪಿ ಸಂಸ್ಕøತಿಯೇ ಮೂಲವಾಗಿದೆ. ಶರಣ ಸಂಸ್ಕøತಿಯ ಮೂಲವೂ ಕೂಡ ರೈತಾಪಿ ಸಂಸ್ಕøತಿಯೇ ಎಂದು ಕವಿ ರಂಜಾನ್ ದರ್ಗಾ ಹೇಳಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕಲಾ ವಿಭಾಗಗಳು ಶನಿವಾರ ಆಯೋಜಿಸಿದ್ದ ‘ಕಲಾಸಂಸ್ಕøತಿ – 2024′ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳು ಮತ್ತು ಮಠಗಳು ರೈತರಿಲ್ಲದೆ ಎತ್ತರ ಬೆಳೆಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ರೈತ ಸಂಸ್ಕøತಿಯಲ್ಲಿ ಯಾರನ್ನೂ ಬೇಡಿ ಅಭ್ಯಾಸವಿಲ್ಲ, ನೀಡಿಯೇ ಅಭ್ಯಾಸ. ಇದು ದುಡಿಯುವ ಜನರ ನಿμÉ್ಠ ಎಂಬ ಸೂಕ್ಷ್ಮತೆಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಇಂದು ನಮ್ಮ ನಡುವೆ ಜೀವರಾಶಿಯನ್ನು ಜಾಲಾಡುವ ಸಂಸ್ಕøತಿ ಬೇರೂರಿದೆ. ಪಂಚ ಮಹಾಮೂಲಗಳನ್ನು ಮಲಿನಗೊಳಿಸಿದ್ದೇವೆ. ಬಸವಣ್ಣನವರು ಹೇಳಿರುವ ಮನುಷ್ಯ ಸಂಸ್ಕøತಿಯ ವಿರುದ್ಧವಾಗಿ ಮಾನವ ಇಂದು ನಡೆದುಕೊಳ್ಳುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಗುರುವೆಂದರೆ ಗುಲಾಮಗಿರಿಯ ವಿರುದ್ಧ ಆಂದೋಲನ ನಡೆಸುವವನು. ಗುಲಾಮಗಿರಿಯನ್ನು ವಿರೋಧಿಸಿ ಹೋರಾಡುವವನು. ಗುರುವಿನ ಗುಲಾಮನಾಗುವುದು ನಮ್ಮ ಶರಣ ಸಂಸ್ಕøತಿಯಲ್ಲ ಎಂದು ತಿಳಿಸಿದರು.

ನಿಜವಾದ ಗುಲಾಮಗಿರಿಯಿಂದ ಬೆಳಕಿನೆಡೆಗೆ ಬರಬೇಕಾದರೆ ಅಜ್ಞಾನವೆಂಬ ಕತ್ತಲೆಯಿಂದ ದೂರ ಸರಿಯಬೇಕು. ವಿದ್ಯೆ, ವಿನಯ, ಸಮಯ ಪ್ರಜ್ಞೆಯು ಜೀವನದ ಹಾದಿಯನ್ನು ಉನ್ನತ ಮಟ್ಟಕ್ಕೇರಿಸುತ್ತದೆ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಬಿ. ಕರಿಯಣ್ಣ, ವಿದ್ಯಾರ್ಥಿಗಳಿಗೆ ವಿದ್ವಾಂಸರನ್ನು ಪರಿಚಯಿಸುವ ದೃಷ್ಟಿಯಿಂದ ಉತ್ತಮ ವೇದಿಕೆಗಳನ್ನು ಸೃಷ್ಟಿಸುವ ಕಾರ್ಯ ಮಾಡುತ್ತಿದ್ದೇವೆ. ಬದುಕುವ ಕಲೆಯನ್ನು ಶಿಕ್ಷಣ ಜ್ಞಾನ ಮತ್ತು ಸಂಸ್ಕøತಿಯ ಮೂಲಕ ಕಲಿಯಬೇಕಾಗಿದೆ ಎಂದು ಹೇಳಿದರು.

ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು ಮತ್ತು ಸಂಗಡಿಗರಿಂದ ರಾಷ್ಟ್ರಕವಿ ಕುವೆಂಪು ವಿರಚಿತ ‘ಶೂದ್ರ ತಪಸ್ವಿ’ ನಾಟಕ ಪ್ರದರ್ಶಿಸಲಾಯಿತು.

ತುಮಕೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ನರಸಿಂಹಮೂರ್ತಿ., ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಜಿ. ಆರ್., ರಂಗಕರ್ಮಿ ದೇವರಾಜು ವಿವಿ ಕಲಾ ಕಾಲೇಜಿನ ಸಾಂಸ್ಕøತಿಕ ಸಮಿತಿಯ ಸಂಯೋಜಕ ಡಾ. ರವಿ ಸಿ. ಎಂ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *