ತುಮಕೂರು: ‘ವೈದ್ಯಕೀಯ ಚಿಕಿತ್ಸಾ ಯಶಸ್ಸಿನಲ್ಲಿ ಶುಶ್ರೂಷಕರ ಪಾತ್ರವೇ ಪ್ರದಾನವಾಗಿದೆ’ ಎಂದು ಕೇಂದ್ರ ರಾಜ್ಯ ಸಚಿವರು, ರೈಲ್ವೆ ಸಚಿವಾಲಯ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣರವರು ಹೇಳಿದರು.

ನಗರದ ಶಿರಾರಸ್ತೆಯ ಶ್ರೀದೇವಿ ನರ್ಸಿಂಗ್ ಕಾಲೇಜು ಹಾಗೂ ಶ್ರೀ ರಮಣಮಹರ್ಷಿ ನರ್ಸಿಂಗ್ ಕಾಲೇಜು, ಶ್ರೀದುಗಾಂಬಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ 2025 ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ನರ್ಸಿಂಗ್ ಮತ್ತು ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞಾವಿಧಿ ಬೋಧಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾತನಾಡುತ್ತಾ ಚಿಕಿತ್ಸಾ ಕಾರ್ಯದಲ್ಲಿ ವೈದ್ಯರು ಶೇಕಡ 40 ಭಾಗ ಕಾರ್ಯ ನಿರ್ವಹಿಸಿದರೆ ಉಳಿದ 60 ಭಾಗವನ್ನು ಶ್ರುಶೂಷಕರೇ ಮಾಡಬೇಕಾಗುತ್ತದೆ. ಹೀಗಾಗಿ ಮನುಕುಲದ ಸೇವೆಯಲ್ಲಿ ಅವರ ಪಾತ್ರ ಬಹಳ ದೊಡ್ಡದು. ವಿಕ್ಟೋರಿಯಾ, ಬೌರಿಂಗ್ ಮತ್ತು ಕಿದ್ವಾಯಿ ಆಸ್ಪತ್ರೆಯ ವೈದ್ಯಕೀಯ ಮಂಡಳಿ ಸದಸ್ಯರಾಗಿ ಸ್ವಂತ ಅನುಭವದ ಮಾತು ಹೇಳಿದರು. ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಆರ್.ಹುಲಿನಾಯ್ಕರ್ ನೀಡಿರುವ ಕೊಡುಗೆ ಮಹತ್ತರವಾದದ್ದು ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಡಾ.ರಜನಿ.ಎಂ ಮಾತನಾಡಿ ನಸಿರ್ಂಗ್ ವೃತ್ತಿಗೆ ಪುರುಷರು ಪ್ರವೇಶ ಪಡೆಯುತ್ತಿದ್ದಾರೆ ಶ್ರೀಲಂಕಾ, ಕೇರಳದಿಂದ ಹೆಚ್ಚಿನ ವಿದ್ಯಾರ್ಥಿಗಳು ನಸಿರ್ಂಗ್ ಕೋರ್ಸ್‍ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶದ ಮಕ್ಕಳು ನಸಿರ್ಂಗ್ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಉತ್ತಮ ಬೆಳವಣಿಗೆ ಎಂದು ಹೇಳಿದರು.
ತುಮಕೂರಿನ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್‍ರವರು ಮಾತನಾಡುತ್ತಾ ಜಗತ್ತಿನಲ್ಲಿ ಆರೋಗ್ಯ ವಲಯ ವಿಸ್ತಾರಗೊಳ್ಳುತ್ತಿದ್ದು ಅದರಂತೆ ನರ್ಸಿಂಗ್ ಸೇವೆಗೂ ಬೇಡಿಕೆ ಹೆಚ್ಚಾಗುತ್ತಿದೆ. ವೈದ್ಯರಿಗಿಂತಲೂ ಹೆಚ್ಚು ಆದಾಯ ಗಳಿಸುವ ಅವಕಾಶ ಹೇರಳವಾಗಿದೆ ಎಂದರು
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ಮಾತನಾಡುತ್ತಾ ವೈದ್ಯಕೀಯ ವೃತ್ತಿಯಲ್ಲಿ ಹೆಚ್ಚು-ಹೆಚ್ಚು ಕೌಶಲ್ಯ ಗಳಿಸಿಕೊಂಡರೆ ವೃತ್ತಿಯಲ್ಲಿ ಹೆಸರುಗಳಿಸುವುದಲ್ಲದೇ ಮಾನವೀಯ ಸೇವೆಯನ್ನು ಸಮಾಜ ಗುರುತಿಸುತ್ತದೆ. ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮ ಶುಶ್ರೂಷಕರಾಗಲು ಅಗತ್ಯವಾದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿ ಅಂಬಿಕಾ ಎಂ ಹುಲಿನಾಯ್ಕರ್‍ರವರು ಮಾತನಾಡುತ್ತಾ ಜಗತ್ತಿನಲ್ಲೇ ಪವಿತ್ರ ವೃತ್ತಿಯಾದ ನಸಿರ್ಂಗ್ ವೃತ್ತಿಯನ್ನು ಮತ್ತು ಶ್ರೀದೇವಿ ಕಾಲೇಜನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಆಯ್ಕೆ ಮಾಡಿಕೊಂಡಿರುವುದಕ್ಕೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಆಸ್ಪತ್ರೆಯ ನೇತ್ರತಜ್ಞೆ ಡಾ.ಲಾವಣ್ಯ, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿಯಾದ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಆರ್.ಕೆ.ಮುನಿಸ್ವಾಮಿ, ಶ್ರೀರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಉಷಾ.ಎಸ್, ಶ್ರೀದುರ್ಗಾಂಬಾ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲೆ ಪ್ರೊ.ಅಂಬಾ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.