ತುಮಕೂರು:ಸರಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಬೇಕು ಎಂಬ ಮಹತ್ವದ ಉದ್ದೇಶದಿಂದ ಹಾಲಪ್ಪ ಪೌಂಢೇಷನ್ ಸರಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸರಕಾರದಿಂದ ಜನಸಾಮಾನ್ಯರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ತಲುಪಿಸುವ ಅರಿವು ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ ಎಂದು ಹಾಲಪ್ಪ ಫೌಂಡೇಷನ್‍ನ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ವಕ್ಫ್ ಬೋರ್ಡ್‍ನ ಹಜರತ್ ಮದರ್ ಷಾ ಮಕಾನ್ ಷಾದಿ ಮಹಲ್£ಉಲ್ಲಮಾ ಸಮಿತಿ, ಹಾಗೂ ಡಾ.ಅಬ್ದುಲ್ ಕಲಾಂ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಸರಕಾರ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯ ಮತ್ತು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದಿಂದ ಹಲವಾರು ಯೋಜನೆಗಳು ಜಾರಿಯಲ್ಲಿವೆ.ಅವುಗಳ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಜಾಗೃತಿ ಮೂಡಿಸಿ,ಇಲಾಖೆ ಮತ್ತು ಫಲಾನುಭವಿಗಳ ನಡುವೆ ಕೊಂಡಿಯಾಗಿ ಹಾಲಪ್ಪ ಪೌಂಢೇಷನ್ ಕೆಲಸ ಮಾಡುತ್ತಿದೆ ಎಂದರು.
ಬಹುತೇಕ ನಿಗಮ, ಮಂಡಳಿ ಮತ್ತು ಸರಕಾರದ ಇಲಾಖೆಗಳಲ್ಲಿ ಮದ್ಯವರ್ತಿಗಳ ಕಾಟ ಇದೆ.ಇದನ್ನು ತಪ್ಪಿಸಿ, ನೇರವಾಗಿ ಫಲಾನುಭವಿಗಳೇ ಇದರ ಲಾಭ ಪಡೆದುಕೊಳ್ಳುವಂತೆ ಮಾಡುವ ಉದ್ದೇಶದಿಂದ ಮೇಲ್ಮಟ್ಟದ ಅಧಿಕಾರಿಗಳೇ ಇಂದು ನಿಮ್ಮ ಬಳಿ ಬಂದು,ಸರಕಾರದ ಯೋಜನೆಗಳು,ಅವುಗಳನ್ನು ಪಡೆಯುವ ವಿಧಾನವನ್ನು ವಿವರಿಸುತ್ತಿದ್ದಾರೆ.ಸಿಡಾಕ್ ಸಂಸ್ಥೆಯ ಮುಖ್ಯಸ್ಥರು ಇಲ್ಲಿಗೆ ಆಗಮಿಸಿ,ಕೈಗಾರಿಕೆಗಳ ಸ್ಥಾಪನೆ ಹೇಗೆ,ಎಲ್ಲಿಂದ ನೆರವು ಎಂಬ ವಿಷಯ ತಿಳಿಸಲಿದ್ದಾರೆ.ಲೀಡ್ ಬ್ಯಾಂಕ್ ಮ್ಯಾನೇಜರ್ ಸಹ ಇದುವರೆಗೂ ಅಲ್ಪಸಂಖ್ಯಾತರರಿಂದ ಬಂದ ಅರ್ಜಿ,ವಿಲೇವಾರಿಯಾದ ಅರ್ಜಿಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.ಅಲ್ಲದೆ ಅಲ್ಪಸಂಖ್ಯಾತರ ಮಕ್ಕಳು ಸಹ ಐಎಎಸ್, ಐಪಿಎಸ್, ಕೆ.ಎ.ಎಸ್ ಅಧಿಕಾರಿಗಳಾಗಿ ಆಯ್ಕೆಯಾಗಲು ಇರುವ ಅವಕಾಶಗಳ ಕುರಿತು ಮಾತನಾಡಲಿದ್ದಾರೆ.ಮಾಹಿತಿಯನ್ನು ಪಡೆದು ಎಲ್ಲಾ ರೀತಿಯ ಸವಲತ್ತು ಪಡೆಯಬೇಕೆಂದು ಮುರುಳೀಧರ ಹಾಲಪ್ಪ ಮನವಿ ಮಾಡಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೈಲಾರಪ್ಪ ಮಾತನಾಡಿ,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ 121 ಮುರಾರ್ಜಿ ದೇಸಾಯಿ ವಸತಿ ಶಾಲೆಗಳು ನಡೆಯುತ್ತಿದ್ದು,ಇದರಲ್ಲಿ 13 ಹೆಣ್ಣು ಮಕ್ಕಳ ಶಾಲೆಗಳಾಗಿವೆ.ಅಲ್ಲದೆ 200ಕ್ಕೂ ಡೇ ಸ್ಕಾಲರ್ ಶಾಲೆಗಳಿವೆ.ಪ್ರಸ್ತುತ 6ನೇತರಗತಿಯಿಂದ 12ನೇ ತರಗತಿಯವರಗೆ ಮಾತ್ರ ಇದ್ದು,ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದಲೇ ಪ್ರವೇಶ ನೀಡುವ ಚಿಂತನೆ ಇದೆ.ರಾಜ್ಯದಲ್ಲಿ ಅಲ್ಪ ಸಂಖ್ಯಾತರ ಸಮುದಾಯಕ್ಕೆ ಸೇರಿದ 6 ಸಮುದಾಯಗಳಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಶೇ80ರಷ್ಟಿದೆ. ಹಾಗಾಗಿ ಸರಕಾರದ ಸವಲತ್ತುಗಳನ್ನು ಹೆಚ್ಚಿನ ಪಾಲನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಿವಿನ ಕಾರ್ಯಕ್ರಮ ಇದಾಗಿದೆ ಎಂದರು.
ಮುಸ್ಲಿಂ ಸಮುದಾಯದಲ್ಲಿ 1 ರಿಂದ 10ನೇ ತರಗತಿಯವರಗೆ ಶೈಕ್ಷಣಿಕ ಪಡೆದ ನಂತರ ಶೇ60ರಷ್ಟು ಹೆಣ್ಣು ಮಕ್ಕಳು ಶಿಕ್ಷಣದಿಂದ ಹೊರಗೆ ಉಳಿಯುತಿದ್ದಾರೆ.ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ತೊಂದರೆಯಾಗದ ರೀತಿ ಸರಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.1ರಿಂದ 10ನೇ ತರಗತಿಯವರೆಗೆ 1 ಸಾವಿರದಿಂದ 9 ಸಾವಿರದವರೆಗೆ ಸ್ಕಾಲರ್‍ಶೀಫ್ ಇದೆ.ಹಾಗೆಯೇ ಮೆಟ್ರಿಕ್ ನಂತರ 25 ಸಾವಿರದಿಂದ 3 ಲಕ್ಷದವರೆಗೆ ವಿದ್ಯಾರ್ಥಿವೇತನವಿದೆ.ಅಲ್ಲದೆ ವಿದೇಶಿ ವಿದ್ಯಾಭ್ಯಾಸಕ್ಕೂ 20 ಲಕ್ಷದವರೆಗೆ ಸೌಲಭ್ಯ ದೊರೆಯಲಿದ್ದು, ಇದರ ಸದುಪಯೋಗ ಪಡಿಸಿಕೊಂಡು ಮುಂದೆ ಬರುವಂತೆ ಮೈಲಾರಪ್ಪ ಕರೆ ನೀಡಿದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ ಮಾತನಾಡಿ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಪ್ಲಂಬರ್,ಕಾರ್ಪೇಂಟರ್, ಗಾರೆ ಕೆಲಸ ಸೇರಿದಂತೆ ಸುಮಾರು 18 ಕೆಲಸಗಳನ್ನು ಮಾಡುವ ಜನರಿಗೆ ಸಾಲ ಸೌಲಭ್ಯ ದೊರೆಯಲಿದೆ.ಈಗಾಗಲೇ ಸುಮಾರು 35 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದೆ.ಇವುಗಳನ್ನು ಉಪಯೋಗಿಸಿಕೊಂಡು ಅರ್ಥಿಕವಾಗಿ ಮುಂದೆ ಬರುವಂತೆ ಮನವಿ ಮಾಡಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಪ್ರಧಾನ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ,ಕೆ.ಎಂ.ಡಿ.ಸಿಯಿಂದ ಸುಮಾರು 8 ವಿವಿಧ ಯೋಜನೆಗಳಿದ್ದು,ಅರಿವು ಯೋಜನೆಯಲ್ಲಿ ಸಿಇಟಿ, ನೀಟ್‍ನಿಂದ ಆಯ್ಕೆಯಾದ ಮಕ್ಕಳಿಗೆ ಮೆಡಿಕಲ್‍ಗೆ 5 ಲಕ್ಷ, ಇಂಜಿನಿಯರಿಂಗ್‍ಗೆ 50 ಸಾವಿರ ಬಿವಿಎಸ್‍ಗೆ 3 ಲಕ್ಷದವರಗೆ ಸಾಲ ನೀಡಲಾಗುವುದು.ಗಂಗಾಕಲ್ಯಾಣದಲ್ಲಿ 1.20ಕ್ಕಿಂತ ಹೆಚ್ಚು ಭೂಮಿ ಹೊಂದಿರುವ ಭೂ ಮಾಲೀಕರಿಗೆ ಉಚಿತವಾಗಿ ಕೊಳವೆ ಬಾವಿ ಕೊರೆದು,ಮೋಟಾರು ಪಂಪ್‍ಸೇಟ್ ಅಳವಡಿಸಲಾಗುವುದು.ಶ್ರಮಶಕ್ತಿ ಸಾಲ ಯೋಜನೆಯಲ್ಲಿಯೂ 50 ಸಾವಿರದ ವರೆಗೆ ಶೇ50ರ ಸಬ್ಸಿಡಿಯಲ್ಲಿ ಸಾಲ ದೊರೆಯಲಿದೆ.ಇವುಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಎಂಡಿಸಿಯ ವ್ಯವಸ್ಥಾಪಕ ಶಬ್ಬೀರ್ ಅಹಮದ್,ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಅಲೀಮ್, ವಕ್ಫ್ ಬೋರ್ಡ್ ಅಧ್ಯಕ್ಷ ಅಪ್ರೋಜ್ ಅಹಮದ್, ಉಪಾಧ್ಯಕ್ಷ ಅರೀಫ್ ಮೊಲನಾ, ಸದಸ್ಯರಾದ ಅಮೀಮ್ ಅಹಮದ್, ಜಬೀವುಲ್ಲಾ, ಸಿಡಾಕ್ ಸಂಸ್ಥೆಯ ತರಬೇತುದಾರರಾದ ಚೈತ್ರ. ಮುಖಂಡರಾದ ರೇವಣ್ಣಸಿದ್ದಯ್ಯ, ಅಸ್ಲಾಂಪಾಷ,ಪಾಲಿಕೆ ಸದಸ್ಯ ನಯಾಜ್ ಅಹಮದ್,ಇನಾಯತ್,ಕುತುಬುದ್ದೀನ್, ಆದೀಲ್,ಅಬ್ಬಾಸ್, ನಿಸಾರ್, ಅತೀಕ್, ಬಷೀರ್, ಶಬ್ದುದ್ದೀನ್, ವಜಾಯಿದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.