ಕಾಂಗ್ರೆಸ್ ಕಟ್ಟಿದವರು ಮನೆ ಕಡೆಗೆ-ಪಕ್ಷ ಬಿಟ್ಟವರಿಗೆ ರೆಡ್ ಕಾರ್ಪೆಟ್ ಹಾಸಿ ಟಿಕೆಟ್ , ದಲಿತ ಮುಖ್ಯಮಂತ್ರಿ ಕೂಗಿನ ಮೊಸಳೆ ಕಣ್ಣೀರು…!…?

ತುಮಕೂರು ಕಾಂಗ್ರೆಸ್ ಪಕ್ಷಕ್ಕೆ ಅದೇನೂ ಬಂದಿದೆಯೋ ಗೊತ್ತಿಲ್ಲ ಕಳೆದ ಹತ್ತು ವರ್ಷಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳಸಿದವರನ್ನು ಮನೆಗೆ ಕಳಿಸಿ, ಹೊರಗಿನಿಂದ ಬಂದವರಿಗೆ ರೆಡ್ ಕಾರ್ಪೆಟ್ ಹಾಸಿ ಭರ ಮಾಡಿಕೊಂಡು ಟಿಕೆಟ್ ನೀಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ತನ್ನ ಘೋರಿಯನ್ನು ತಾನೇ ತೋಡಿಕೊಳ್ಳುವ ಹಂತ ತಲುಪುತಿದೆಯೇನೋ ಎಂದು ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ಯುವಕರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಸಲು ಮುಂದಾಗಿ ಗುಬ್ಬಿಯಿಂದ ಜಿ.ಎಸ್.ಪ್ರಸನ್ನಕುಮಾರ್, ತಿಪಟೂರಿನಿಂದ ಸಿ.ಬಿ.ಶಶಿಧರ್, ಚಿಕ್ಕನಾಯಕನಹಳ್ಳಿಯಿಂದ ಸಾಸಲು ಸತೀಶ್, ತುಮಕೂರು ಗ್ರಾಮಾಂತರದಿಂದ ರಾಯಸಂದ್ರ ರವಿಕುಮಾರ್, ತುಮಕೂರಿನಿಂದ ಇಕ್ಬಾಲ್ ಅಹಮ್ಮದ್, ಲೋಕಸಭೆಗೆ ಮುರಳೀಧರ ಹಾಲಪ್ಪ ಮುಂತಾದ ಯುವಕರು ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ದೊಡ್ಡ ಪಾತ್ರವೇ ಇದೆ.

ಈ ಯುವ ನಾಯಕರು ಪಕ್ಷವನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 10 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷ ನೆಲ ಕಚ್ಚಿತು ಎನ್ನುವಾಗ ಇವರು ಟೊಂಕ ಕಟ್ಟಿ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರು ನಮಗೆ ರಾಜಕೀಯ ದಡ ಮುಟ್ಟಿಸಬಲ್ಲರು ಎಂದು ಹಗಲು ರಾತ್ರಿ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಟೊಂಕ ಕಟ್ಟಿ ಪಕ್ಷವನ್ನು ಕಟ್ಟಿದರು.

ಇವರಿಗೆ 2018ರಲ್ಲೇ ಟಿಕೆಟ್ ನೀಡಲಾಗುವುದು ಎಂದು ಜಿಲ್ಲೆಯ ನಾಯಕರಾದ ಡಾ.ಜಿ.ಪರಮೇಶ್ವರ್ ಅವರು ಪಕ್ಷ ಕಟ್ಟಿ ನೋಡೋಣ ಎಂದು ಮೆಧು ಮತ್ತು ಮೆಲು ಮಾತಿನಲ್ಲಿ ಹೇಳಿದರೇ ಹೊರತು, ಘಟ್ಟಿ ಧ್ವನಿಯಲ್ಲಿ ಹೇಳಲೇ ಇಲ್ಲ, ಇದನ್ನು ನಂಬಿದ ಇವರು ಪಕ್ಷ ಕಟ್ಟುತ್ತಾ ಬಂದರು.

2018ರಲ್ಲಿ ಇವರಿಗೆ ಟಿಕೆಟ್ ಸಿಗಲಿಲ್ಲ, ಆದರೂ ನಮಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದೆಂದು ಇವರುಗಳು ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಕಟ್ಟಿದರು.

ತಿಪಟೂರಿನಲ್ಲಿ ಸಿ.ಬಿ.ಶಶಿಧರ್ ಅವರು ಕಾಂಗ್ರೆಸ್ ಕಟ್ಟಲು ರಥ ಕಟ್ಟಿಕೊಂಡು, ಶಿಕ್ಷಣ ಮಂತ್ರಿಯಾಗಿದ್ದ ಬಿ.ಸಿ.ನಾಗೇಶ್ ವಿರುದ್ಧ ಹಳ್ಳಿ ಹಳ್ಳಿಗಳಿಗೆ ತಿರುಗಿ ಜನರಿಗೆ ಅರಿವು ಮಾಡಿಸಿದರು.

ಗುಬ್ಬಿಯಲ್ಲಿ ಜಿ.ಎಸ್.ಪ್ರಸನ್ನಕುಮಾರ್ ಕಾಂಗ್ರೆಸ್ ಪಕ್ಷದ ಹೇಸರಿಲ್ಲದ್ದನ್ನು ಹೆಸರು ಹೇಳುವಂತೆ ಮಾಡಿದರು.
ಚಿಕ್ಕನಾಯಕನಹಳ್ಳಿಯಲ್ಲಿ ಸಾಸಲು ಸತೀಶ್ ಪಕ್ಷ ಕಟ್ಟಿದರೂ 2013ರಲ್ಲಿ ಟಿಕೆಟ್ ನೀಡಿದ್ದರೂ, ಆ ನಂತರ ಕಡೆಗಣಿಸಲಾಯಿತು.

ತಿಪಟೂರಿನಲ್ಲಿ ಪಕ್ಸ ಕಟ್ಟಿದ ಸಿ.ಬಿ.ಶಶಿಧರ್ ಅರನ್ನು ಬಿಟ್ಟು ಸೋತು ಮನೆ ಸೇರಿದ್ದ ಕೆ.ಷಡಕ್ಷರಿಯವರಿಗೆ ಟಿಕೆಟ್ ನೀಡಿದರೆ, ಗುಬ್ಬಿಯಲ್ಲಿ ಕಾಂಗ್ರೆಸ್ ವಿರೋಧಿ ಎಸ್.ಆರ್.ಶ್ರೀನಿವಾಸ್ ಅವರನ್ನು ಕರೆ ತಂದರೆ, ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯಲ್ಲಿದ್ದ ಕೆ.ಎಸ್.ಕಿರಣ್‍ಕುಮಾರ್ ಅವರನ್ನು ಕರೆ ತಂದು ಸಾಸಲು ಸತೀಶ್ ಅವರಿಗೆ ಗೇಟ್ ಪಾಸ್ ನೀಡಿದರು.

ಇವರೆಲ್ಲಾ ತುಮಕೂರು ಜಿಲ್ಲೆಗೆ ಭಾರತ್ ಜೋಡೋ ಯಾತ್ರೆ ಬಂದಾಗ ಅದರ ಯಶಸ್ಸಿಗೆ ಹಗಲು ರಾತ್ರಿ ದುಡಿದವರು.

ಇನ್ನ 2013ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿಪರಮೇಶ್ವರ್ ಅವರು ಸೋತಾಗ ಅವರ ಬೆನ್ನಿಗೆ ನಿಂತು, 2018 ಮತ್ತು 2023ರಲ್ಲಿ ಡಾ.ಜಿ.ಪರಮೇಶ್ವರ್ ಅವರ ಗೆಲುವಿಗೆ ಹಗಲು ರಾತ್ರಿ ದುಡಿದದ್ದಲ್ಲದೆ, ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಾಮಾನ್ಯ ಜನರ ಜೊತೆ ಬೆರತು ಪಕ್ಷವನ್ನು ಕಟ್ಟಿದ್ದಲ್ಲದೆ, ಪರಮೇಶ್ವರ್ ಅವರು 2 ಬಾರಿ ಗೆಲ್ಲಿಸಲು ಪ್ರಮುಖ ಪಾತ್ರವನ್ನು ವಹಿಸಿದವರಲ್ಲಿ ಮುರಳೀಧರ ಹಾಲಪ್ಪನವರೂ ಒಬ್ಬರು.
ಈಗ ಮರಳೀಧರ ಹಾಲಪ್ಪನವರಿಗೂ ಲೋಕಸಭಾ ಟಿಕೆಟ್ ನೀಡದೆ ಕಾಂಗ್ರೆಸ್ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.

ಡಾ.ಜಿ.ಪರಮೇಶ್ವರ್ ಅವರನ್ನು ನಂಬಿದ್ದ ಮಾದಿಗರ ನಾರಾಯಣಮೂರ್ತಿ, ವಾಲೆ ಚಂದ್ರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಡಿಸಿಸಿ ಅಧ್ಯಕ್ಷರಾಗಿದ್ದ ಕೆಂಚಮಾರಯ್ಯ, ನರಸೀಯಪ್ಪ, ಉದ್ಯಮಿ ಡಿ.ಟಿ.ವೇಂಕಟೇಶ್ ಅವರು, ಪರಮೇಶ್ವರ್ ಅವರ ರಾಜಕೀಯ ಏಳ್ಗೆಗೆ ಬೆನ್ನೆಲುಬಾಗಿ ನಿಂತಿದ್ದರೂ ಇವರಿಗೆ ಯಾವುದೇ ಸ್ಥಾನಮಾನಗಳು ಸಿಕ್ಕಿಲ್ಲ.

ಇನ್ನ ಕುಂಚಿಟಿಗ ಸಮುದಾಯಕ್ಕೆ ಸೇರಿದ್ದ ಮುರಳೀಧರ ಹಾಲಪ್ಪನವರು ಈ ಬಾರಿ ಲೋಕಸಭಾ ಟಿಕೆಟ್ ಅಕಾಂಕ್ಷಿಯಾಗಿ ಕಳೆದ 5ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಕಾಂಗ್ರೆಸ್‍ನಲ್ಲಿದ್ದ ಎಸ್.ಪಿ,ಮುದ್ದಹನುಮೇಗೌಡರು 2023ರ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಪ್ರಧಾನಿ ಮೋದಿ ಮಾತ್ರ ನಾಯಕರಾಗಿ ಕಾಣುತ್ತಿದ್ದಾರೆ, ಕಾಂಗ್ರೆಸ್‍ನಲ್ಲಿ ನಾಯಕರೇ ಇಲ್ಲ ಎಂದು ಜರಿದು ಹೋಗಿದ್ದಲ್ಲದೆ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮತ್ತು ಡಾ.ಜಿ.ಪರಮೇಶ್ವರ್ ಅವರನ್ನು ಪತ್ರಿಕಾಗೋಷ್ಠಿಗಳಲ್ಲಿ ಮತ್ತು ಬಹಿರಂಗಸಭೆಗಳಲ್ಲಿ ಮೋಸಗಾರರು ಎಂದು ಬೈಯ್ದದಲ್ಲದೆ, ಅವರುಗಳಿಗೆ ಬುದ್ದಿ ಕಲಿಸಲು ಬಿಜೆಪಿಗೆ ಬಂದಿರುವುದಾಗಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದರು.

ಅದೇನಾಯಿತೋ ಸಹಕಾರ ಸಚಿವರು ಮುದ್ದಹನುಮೇಗೌಡರ ಪರ ಬ್ಯಾಟ್ ಬೀಸಿದ ಕೂಡಲೇ ಪಕ್ಷ ಕಟ್ಟಿದ ಎಲ್ಲರನ್ನೂ ಬಿಟ್ಟು ಪಕ್ಷ ಬಿಟ್ಟು ಹೋಗಿದ್ದ ಎಸ್.ಪಿ.ಮುದ್ದಹನುಮೇಗೌಡರನ್ನು ಪಕ್ಷಕ್ಕೆ ಕರೆ ತಂದು ರೆಡ್ ಕಾರ್ಪಟ್ ಹಾಸಿ ಅಭ್ಯರ್ಥಿಯನ್ನಾಗಿ ಮಾಡಿಯೇ ಬಿಟ್ಟರು.

ಈ ಜಿಲ್ಲೆಯ ಕಾಂಗ್ರೆಸ್ ನಾಯಕರು ಎನಿಸಿಕೊಂಡಿರುವ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಆಗಲಿ, ಸಹಕಾರ ಸಚಿವರಾಗಲಿ ಪಕ್ಷ ಕಟ್ಟಿದವರನ್ನು ಮತ್ತು ಲೋಕಸಭಾ ಟಿಕೆಟ್ ಅಕಾಂಕ್ಷಿಗಳ ಜೊತೆ ಸೌಜನ್ಯಕ್ಕಾದರೂ ಒಂದು ಸಭೆಯನ್ನು ಮಾಡದೇ ಯಾರನ್ನು ಬೈದು ಪಕ್ಷ ಬಿಟ್ಟು ಹೋಗಿದ್ದರೋ ಅವರಿಗೆ ಟಿಕೆಟ್ ಕೊಡಿಸಿರುವುದರ ಹಿಂದೆ ಏನು ಅಡಗಿದೆ ಎಂಬುದು ಲೋಕಸಭೆ ಚುನಾವಣೆಯ ನಂತರ ತಿಳಿಯಲಿದೆ.

ಸಹಕಾರಿ ಸಚಿವರು ಇತ್ತೀಚೆಗಷ್ಟೇ ಲೋಕಸಭಾ ಅಭ್ಯರ್ಥಿ ಎಂದು ಓಡಾಡುತ್ತಿದ್ದ ಮುರಳೀಧರ ಹಾಲಪ್ಪನವರನ್ನು “ಯಾರೀ ಹಾಲಪ್ಪ” ಎಂದು ಜರಿದಾಗಲೂ ಯಾರೂ ತುಟಿ ಬಿಚ್ಚಲಿಲ್ಲ.

ಅಂದರೆ ಡಾ.ಜಿ.ಪರಮೇಶ್ವರ್ ಅವರ ಪ್ರಾಬಲ್ಯವನ್ನು ಈ ಮೂಲಕ ಕಡಿಮೆ ಮಾಡಿದರೋ ಅಥವಾ ಹೆಚ್ಚಾಯಿತೋ ಎಂಬುದು ಲೋಕಸಭೆಯ ಚುನಾವಣೆಯ ನಂತರ ತಿಳಿಯಲಿದೆ.

ಇಷ್ಟು ದಿನ ಇಲ್ಲದ ದಲಿತ ಮುಖ್ಯಮಂತ್ರಿಯ ಕೂಗು ಈಗ ಕೂಗುತ್ತಿರುವುದರ ಹಿಂದೆ ಬಹು ದೊಡ್ಡ ಮೋಸ ಇದೆ ಎಂಬುದನ್ನು ದಲಿತ ಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕಿದೆ. ದಲಿತರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂಬ ಮೊಸಳೆ ಕಣ್ಣೀರು ಯಾರನ್ನು ಬಾವಿಗೆ ತಳ್ಳಲು, ಯಾರನ್ನು ಮೆಚ್ಚಿಸಲು ಎಂಬುದನ್ನು ದಲಿತ ಮಂತ್ರಿಗಳು ಅರ್ಥ ಮಾಡಿಕೊಂಡರೆ ಒಳ್ಳೆಯದು.

ಒಟ್ಟಿನಲ್ಲಿ ತುಮಕೂರು ಜಿಲ್ಲೆಯ ಕಾಂಗ್ರೆಸ್‍ನಲ್ಲಿ ಪಕ್ಷ ಕಟ್ಟಿದವರನ್ನು ಮನೆ ಕಡೆಗೆ, ಬೈಯ್ದುಕೊಂಡು ಪಕ್ಷ ಬಿಟ್ಟವರಿಗೆ ರೆಡ್ ಕಾರ್ಪೆಟ್ ಹಾಸಿ ಟಿಕೆಟ್ ನೀಡಲಾಗುವುದು ಎಂಬುದು ಇತಿಹಾಸ ಪುಟಗಳಲ್ಲಿ ಉಳಿಯಲಿದ್ದು, ಮುಂದಿನ ದಿನಗಳಲ್ಲಿ ನಾವು ದೊಡ್ಡ ನಾಯಕರು ಎಂದು ಪೋಸ್ ಕೊಡುತ್ತಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಬಹು ದೊಡ್ಡಪಾಠ ಕಲಿಸುವ ಕಾಲ ಬಂದರೂ ಬರಬಹುದು.

ಈಗ ಪ್ರಶ್ನೆ ಇರುವುದು ಮುದ್ದಹನುಮೇಗೌಡರು ಗೆದ್ದು ಬರುವರೇ ……? ಇವರ ಬೆನ್ನಿಗೆ ಕಾಂಗ್ರೆಸ್
ನಾಯಕರು ನಿಲ್ಲುವರೇ?

-ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್
ತುಮಕೂರು.

One thought on “ಕಾಂಗ್ರೆಸ್ ಕಟ್ಟಿದವರು ಮನೆ ಕಡೆಗೆ-ಪಕ್ಷ ಬಿಟ್ಟವರಿಗೆ ರೆಡ್ ಕಾರ್ಪೆಟ್ ಹಾಸಿ ಟಿಕೆಟ್ , ದಲಿತ ಮುಖ್ಯಮಂತ್ರಿ ಕೂಗಿನ ಮೊಸಳೆ ಕಣ್ಣೀರು…!…?

  1. 2019 ರಲ್ಲಿ ಶ್ರೀಯುತ ಮುದ್ದಹನುಮೇಗೌಡರು ಇವರಿಗೆ ತುಂಬಾ ಅನುಕೂಲಕರವಾಗಿತ್ತು…! ಆದರೆ ದೇವೆಗೌಡರು ನಿಂತು ಇರುವ ಎಂಪಿ ಸೀಟು ಕಳೆದರು…? ಈಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಗೆ ಗೆಲ್ಲುವ ಪೂರಕ ವಾತಾವರಣ ಇದೆ. ಎಲ್ಲಾ ಭಿನ್ನಮತ ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡಿದರೆ ಎಸ್.ಪಿ.ಎಂ. ಎಂಪಿಯಾಗಿ ಹೊರಹುಮ್ಮುತ್ತಾರೆ… ಜೈ ಕಾಂಗ್ರೆಸ್

Leave a Reply

Your email address will not be published. Required fields are marked *