ತುಮಕೂರು:ಮತಗಳ್ಳತನದ ವಿರುದ್ಧ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ ಚುನಾವಣಾ ಆಯೋಗದ ಬಗ್ಗೆ ಹೋರಾಟ ಮಾಡುತ್ತಿದ್ದು, ಮತಗಳ್ಳತನ ವಿರೋಧಿಸುವ ಕಾಂಗ್ರೆಸ್ ಪಕ್ಷದಲ್ಲಿರುವ ಆರ್.ಎಸ್.ಎಸ್ ಮತ್ತು ಬಿಜೆಪಿ ಮನಸ್ಸುಳ್ಳವರನ್ನು ಹೊರ ಹಾಕಬೇಕಿದೆ ಎಂದು ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ. ಮಾಜಿ ಸದಸ್ಯರಾದ ಕೆಂಚಮಾರಯ್ಯ ಹೇಳಿದರು.
ಅವರು ತುಮಕೂರಿನ ಮರಳೂರಿನ ಎಸ್.ಎಸ್.ಐ.ಟಿ ಹಿಂಭಾಗದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಪ್ರಧಾನಿ ಇಂದಿರಾಗಾಂದಿ üಅವರ 108ನೇ ಜನ್ಮ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಭಕ್ತರಿಂದ ವಿಶ್ವ ಗುರು ಎಂದು ಕರೆಯಿಸಿಕೊಳ್ಳುವ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೂ,ವಿರೋಧ ಪಕ್ಷದ ನಾಯಕರಿಂದಲೇ ದುರ್ಗಿಯ ಅವತಾರ ಎಂದು ಕರೆಯಿಸಿಕೊಂಡ ಇಂದಿರಾಗಾಂಧಿ ಅವರ ಆಡಳಿತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಮೇರಿಕಾದ ಬ್ಲಾಕ್ ಮೇಲ್ ತಂತ್ರಕ್ಕೆ ಎಂದಿಗೂ ಬಗ್ಗದ ಇಂದಿರಾ, ಬಾಂಗ್ಲಾ ವಿಭಜನೆ ವೇಳೆ ಅಮೇರಿಕದ ಬೆದರಿಕೆಗೆ ಹೆದರದೆ ಪಾಕಿಸ್ಥಾನದ ವಿರುದ್ದ ಯುದ್ದ ಮಾಡಿ, ಭಾಂಗ್ಲಾ ಉದಯಕ್ಕೆ ಕಾರಣರಾದರು. ಜೀತ ಪದ್ದತಿ ನಿರ್ಮೂಲನೆ, ಭೂ ಸುಧಾರಣಾಕಾಯ್ದೆ, ಬ್ಯಾಂಕುಗಳ ರಾಷ್ಟ್ರೀಕರಣ, ಸಾರಿಗೆ ರಾಷ್ಟ್ರೀಕರಣದಂತಹ ದಿಟ್ಟ ನಿಲುವುಗಳಿಂದ ಎಲ್ಲಾ ವರ್ಗದ ಬಡವರಿಗೆ ಅನುಕೂಲವಾಗಿತ್ತು. ಅವರ ಮೊಮ್ಮಗ ರಾಹುಲ್ ಗಾಂಧಿ ಓಟ್ ಚೋರಿ ಮೂಲಕ ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಸಾಭೀತು ಮಾಡಿದ್ದಾರೆ.ಆದರೆ ನಮ್ಮವರೇ ಕೆಲವರು ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್ ಮಾತನಾಡಿ, ತಮ್ಮ ಹುಟ್ಟಿನಿಂದ ಜೀವಿತದಅವಧಿಯವರೆಗೂ ಭಾರತಕ್ಕಾಗಿ ದುಡಿದು, ಮಡಿದವರು ಇಂದಿರಾಗಾಂಧಿ. ಅವರು ಜಾರಿಗೆ ತಂದ ಗರೀಬೋ ಹಠಾವೋ, 20 ಅಂಶಗಳ ಕಾರ್ಯಕ್ರಮಗಳು ಭಾರತದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಿ, ದೇಶ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಕೈಗಾರಿಕೆಯಲ್ಲಿ ಅಭಿವೃದ್ದಿ ಹೊಂದಲು ಭದ್ರ ಬುನಾದಿಯನ್ನು ಹಾಕಿದರು ಎಂದು ಹೇಳಿದರು.
ಮುಖಂಡರಾದ ಅಸ್ಲಾಂ ಪಾಷ, ವಾಲೆ ಚಂದ್ರಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಚಂದ್ರಶೇಖರಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಹಿರಿಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸುವ ಮೂಲಕ ಇಂದಿರಾಗಾಂಧಿಯವರ ಆಡಳಿತದ ಕಾಲಾವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳು, ಅದರಿಂದ ಜನರಿಗೆ ಆದ ಅನುಕೂಲಗಳ ಕುರಿತು ಗುಣಗಾನ ಮಾಡಿದರು.
ಮುಖಂಡರಾದರೇವಣ್ಣ ಸಿದ್ದಯ್ಯ ಇಂದಿರಾಗಾಂಧಿಅವರ ಆಡಳಿತ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್.ಸಿ.ಹನುಮಂತಯ್ಯ,ಕೆಂಪಣ್ಣ, ಬ್ಲಾಕ್‍ಕಾಂಗ್ರೆಸ್‍ಅಧ್ಯಕ್ಷ ಮಹೇಶ್,ಬಿ.ಎಸ್.ದಿನೇಶ್, ಸೇವಾದಳದ ಶಿವಪ್ರಸಾದ್, ಅಮ್ಜಾದ್ ವುಲ್ಲಾ,ಮಹಮದ್ ಮುಜಾಹಿದ್,ದೀಪಕ್, ಮಂಜುನಾಥ್,ಶಿವಾಜಿ, ಮೆಹಬೂಬ್ ಪಾಷ, ಆಟೋರಾಜು, ಮೊಹಮ್ಮದ್ ಜೈದ್‍ಮುಬೀನಾಭಾನು, ಸೌಭಾಗ್ಯ, ಸುಜಾತ, ಯಶೋಧ, ಭಾಗ್ಯ, ನಟರಾಜಶೆಟ್ಟರು, ಮುರುಳಿ, ಸುಲ್ತಾನ್, ಆದಿಲ್, ಲಕ್ಷ್ಮಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.