ಸಾಮಾಜಿಕ ನ್ಯಾಯಕ್ಕಾಗಿ ತಿಗಳ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ-ಪಿ.ಆರ್. ರಮೇಶ್

ತುಮಕೂರು; ಶೋಷಿತ ವರ್ಗಗಳಲ್ಲಿ ಬಹಳಷ್ಟು ಹಿಂದುಳಿದ ಜಾತಿಗಳಲ್ಲಿ ತಿಗಳ ಸಮುದಾಯ ಒಂದಾಗಿದ್ದು ಹಿಂದುಳಿದ ವರ್ಗಗಳಲ್ಲಿ ಒಂದಾಗಿರುವ ಈ ಸಮುದಾಯವರು ಬೇರೆಯ ಸುಖಕ್ಕಾಗಿ ದುಡಿಯುವ ವರ್ಗವಾಗಿದ್ದು ಸ್ವಾಭಿಮಾನ ನಿಷ್ಠೆ ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವಿತವಾಗಿ ಬದುಕುತ್ತಿದ್ದು ಇಂತಹ ಸಮಾಜವನ್ನು ಅಂದಿನಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾ ಬಂದಿದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಕಾಂಗ್ರೆಸ್ ಪಕ್ಷದ ಘೋಷವಾಕ್ಯವನ್ನ ತಿಗಳ ಸಮುದಾಯ ಮೆಚ್ಚಿದ್ದು ಹೀಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್ ರಮೇಶ್ ಅವರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾಭಿಮಾನ ಪ್ರಾಮಾಣಿಕತೆಯಿಂದ ಬದುಕುವ ತಿಗಳ ಸಮುದಾಯದವರು ಬೇರೆಯವರ ಹಿತಕ್ಕಾಗಿ ಯಶಸ್ವಿಯಾಗಿದ್ದು ತುಮಕೂರಿನ ತ್ರಿವಿಧ ದಾಸೋಹ ಕೇಂದ್ರ ಸಿದ್ದಗಂಗಾ ಮಠಕ್ಕೂ ಭೂದಾನ ಮಾಡಿರುವಂತಹ ಉದಾಹರಣೆಗಳು ಇವೆ ಜನಾಂಗವು ಯಾವುದೇ ಅಪೇಕ್ಷೆ ಪಡದೇ ದುಡಿಯುವ ವರ್ಗವಾಗಿದ್ದು ಜಿಲ್ಲೆಯಲ್ಲಿ ಸುಮಾರು 50ರಿಂದ 1 ಲಕ್ಷಕ್ಕೂ ಹೆಚ್ಚು ಸಂಖ್ಯೆಯನ್ನು ಹೊಂದಿದ್ದು ಯಾವುದೇ ಪ್ರಾತಿನಿಧ್ಯ ಪಡೆದಿರಲಿಲ್ಲ ಹೀಗಾಗಿ ಕಾಂಗ್ರೆಸ್ ಸರ್ಕಾರ ಇಂಥ ಸಮುದಾಯವನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಇತರೆ ಅವಕಾಶಗಳನ್ನು ಕಲ್ಪಿಸಿದ್ದು ಮಾನ್ಯ ಮುಖ್ಯಮಂತ್ರಿಗಳು ವಿಧಾನಪರಿಷತ್ ಸದಸ್ಯರಾದ ನನ್ನ ಅನುದಾನವು ಸೇರಿದಂತೆ ಸುಮಾರು ನಾಲ್ಕು ಕೋಟಿ ರೂ ಹೆಚ್ಚು ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಮ್ಮ ತಿಂಗಳ ಸಮಾಜದ ಮೇಲೆ ಅಪಾರ ಪ್ರೀತಿ ವಿಶ್ವಾಸವನ್ನು ಹೊಂದಿದ್ದ ದೇವರಾಜು ಅರಸು ಅವರಿಂದ ಹಿಡಿದು ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಡಾಕ್ಟರ್ ಜಿ ಪರಮೇಶ್ವರ್ ಸಹಕಾರ ಸಚಿವ ರಾಜಣ್ಣ ಸೇರಿದಂತೆ ಅನೇಕ ಗಣ್ಯಮಾನ್ಯರು ನಮ್ಮ ತಿಗಳ ಜನಾಂಗವನ್ನು ಗೌರವಹಿತವಾಗಿ ನಡೆಸಿಕೊಂಡು ಬಂದಿದ್ದಾರೆ ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆಯುಳ್ಳ ನಾವುಗಳು ತುಮಕೂರು ಬೆಂಗಳೂರು ರಾಮನಗರ ಕೋಲಾರ ಮೈಸೂರು ಚಿಕ್ಕಬಳ್ಳಾಪುರ ಹಾಸನ ಸೇರಿದಂತೆ ಮಂಡ್ಯ ಚಿತ್ರದುರ್ಗ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದ್ದು ನಮ್ಮ ಸಮುದಾಯವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಿರ್ಣಾಯಕ ಮತದಾರರು ಸಹ ಆಗಿರುತ್ತಾರೆ ಹೀಗಾಗಿ ನಮ್ಮ ಸಮಾಜದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ಶೈಕ್ಷಣಿಕ ಆರ್ಥಿಕ ರಾಜಕೀಯ ಸೇರಿದಂತೆ ಅನೇಕ ಸ್ಥಾನಮಾನಗಳನ್ನು ನೀಡುತ್ತಾ ಬಂದಿದೆ ಎಂದರು.

ತುಮಕೂರಿನ ತಿಗಳ ಸಮುದಾಯದ ಮುಖಂಡ ರೇವಣಸಿದ್ದಯ್ಯ ಅವರು ಮಾತನಾಡುತ್ತಾ ಅನೇಕ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ತಿಗಳ ಜನಾಂಗಕ್ಕೆ ನೀಡಿದ್ದು ರಾಜಕೀಯ ದಲ್ಲಿ ಯಾವ ಪಕ್ಷ ಮನ್ಮಣೆ ನೀಡಲಿಲ್ಲ ಸಣ್ಣ ಪ್ರಮಾಣದ ಜನಾಂಗ ಹತ್ತು ಜಿಲ್ಲೆಗಳಲ್ಲಿ ರಾಜಕೀಯ ಅಧಿಕಾರ ಹಿಡಿದಿದ್ದು ಈ ಹಿಂದೆ ಯಾವುದೇ ಪ್ರತಿನಿಧ್ಯ ಪಡೆಯುವಲ್ಲಿ ಹಿಂದುಳಿದಿತ್ತು ಇದೀಗ ಕಾಂಗ್ರೆಸ್ ಪಕ್ಷ ಇಂತಹ ಅವಕಾಶವನ್ನು ನೀಡಿದೆ ಕಳೆದ ಎರಡು ವರ್ಷಗಳ ಹಿಂದೆ ಬೊಮ್ಮಯಿ ಯವರು ಅವರ ಸರ್ಕಾರದ ಮುಂದೆ ಇಟ್ಟ ಕೆಲ ಪ್ರಸ್ತಾವನೆಗಳನ್ನು ಕಸದ ಬುಟ್ಟಿಗೆ ಹಾಕಿ ನಮ್ಮ ಸಮುದಾಯವನ್ನು ಕೀಳಾಗಿ ನೆಡಿಸಿಕೊಂಡಿದ್ದು ಬೆಂಗಳೂರಿನಲ್ಲಿ ತಿಂಗಳರ ನಡೆ ಕಾಂಗ್ರೆಸ್ ಸಮಾವೇಶ ನಡೆದಾಗ ನಪ ಮಾತ್ರಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿದರೂ ಯಾವುದೇ ಪ್ರಯೋಜನ ವಾಗಲಿಲ್ಲ ಎಂದು ಕಿಡಿ ಕಾರಿದರು.

ಮುದ್ದಹನುಮೇಗೌಡ ಅವರು ಸರಳ ಸಜ್ಜನಿಕೆ ಸುಸಂಸ್ಕೃತ ರಾಜಕಾರಣಿಯಾಗಿದ್ದು ಪ್ರಜಾಪ್ರಭುತ್ವದ ಆಶಯದ ಪರವಾಗಿದ್ದು ಸಂಸತ್ತಿನಲ್ಲಿ ಗಟ್ಟಿ ಧ್ವನಿಯಾಗಿ ನಿಲ್ಲುವಂತಹ ಸದೃಢ ವ್ಯಕ್ತಿ ಇಡೀ ವಿಶ್ವದ ರಾಜಕೀಯ ಇತಿಹಾಸದಲ್ಲಿ ಸಂಸತ್ತಿನಲ್ಲಿ ಸುಮಾರು 500ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದಾರೆ ತುಮಕೂರು ಜಿಲ್ಲೆಗೆ ಎಚ್ ಎ ಎಲ್ ಘಟಕ ಇಸ್ರೋಗೆ ಜಾಗ ನೀಡುವುದು ಸೇರಿದಂತೆ ಅನೇಕ ನೀರಾವರಿ ಯೋಜನೆಗಳನ್ನ ಜಿಲ್ಲೆಗೆ ತರುವಲ್ಲಿ ಯಶಸ್ವಿಯಾಗಿದ್ದು ಇಂತಹ ಜಾತ್ಯತೀತ ನಾಯಕ ತುಮಕೂರಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದು ಹೀಗಾಗಿ ಎಸ್ಪಿ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಲು ತಿಗಳ ಸಮುದಾಯವು ಸನ್ನದ್ದವಾಗಿದೆ ಎಂದು ತಿಳಿಸಿದರು.

ಸಂದರ್ಭದಲ್ಲಿ ಅಗ್ನಿವಂಶ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾದ ಬಿ ನರಸಿಂಹಮೂರ್ತಿ, ಕಾರ್ಯದರ್ಶಿ ಕೆಂಪಯ್ಯ, ಗೌರವಾಧ್ಯಕ್ಷರಾದ ಸಿದ್ದಯ್ಯ, ಜಂಟಿ ಕಾರ್ಯದರ್ಶಿ ಕೃಷ್ಣಯ್ಯ, ತುಮಕೂರು ಜಿಲ್ಲಾ ತಿಗಳರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅನುಮದಾಸ್, ಕಾರ್ಯದರ್ಶಿ ಬಿ ಎಂ ಗಂಗರಾಜು, ಖಜಾಂಚಿ ಟಿವಿ ರಾಮಯ್ಯ ,ನಿರ್ದೇಶಕ ಚೆಲುವರಾಜು, ಸೇರಿದಂತೆ ಕೃಷ್ಣಪ್ಪ, ಹುಂಡೆ ರಾಮಣ್ಣ, ಜಿಬಿ ಮಲ್ಲಪ್ಪ, ಅರ್ಜುನ್, ಹೆಜಾಜಿ ಬಸವರಾಜು, ಹೆಜಾಜಿ ಶ್ರೀನಿವಾಸ್ ಹಾಗೂ ಸಮುದಾಯದ ಪದಾಧಿಕಾರಿಗಳು ವಿವಿಧ ಮುಖಂಡರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *