ಮಹಿಳಾ ದಿನಾಚರಣೆಯಲ್ಲಿ ಜಾನಪದ ಹಾಡುಗಾರ್ತಿ ಕರಿಯಮ್ಮನಿಗೆ ದತ್ತಿ ಪ್ರಶಸ್ತಿ ಪ್ರಧಾನ

ತುಮಕೂರು : ಕರ್ನಾಟಕ ಲೇಖಕಿಯರ ಸಂಘ .ತುಮಕೂರು ಜಿಲ್ಲಾ ಶಾಖೆ ಮತ್ತು ಸರ್ಕಾರಿ ಪಾಲಿಟೆಕ್ನಿಕ್ ತುಮಕೂರು ಸಹಯೋಗದಲ್ಲಿ , ಮಾರ್ಚ್ 20ರಂದು ಬೆಳಗ್ಗೆ 11-00 ಗಂಟೆಗೆ ಸಂಕಲ್ಪ ಭವನ ಸರ್ಕಾರಿ ಪಾಲಿಟೆಕ್ನಿಕ್ ಆವರಣ ಇಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಹಮ್ಮಿಕೊಂಡಿರುತ್ತದೆ .

ಲೇಖಕಿ ,ರಂಗಕರ್ಮಿ ಮತ್ತು ಹೋರಾಟಗಾರ್ತಿ ದು.ಸರಸ್ವತಿ ರವರು ಉಪನ್ಯಾಸಕರಾಗಿ, ಕಲಾವಿದೆ ರೇಣುಕಾ ಕೆಸರುಮಡು ರವರು ಅತಿಥಿಗಳಾಗಿ ಆಗಮಿಸಲಿದ್ದಾರೆ .

ಲೇಖಕಿಯರ ಸಂಘದಲ್ಲಿ ಶ್ರೀ ರಾಜನ್ ರವರು ತಮ್ಮ ಸಹೋದರಿಯರಾದ ದಿ||ಸೋಮಾವತಿ ಮತ್ತು ದಿ||ಇಂದಿರಮ್ಮ ರವರ ಹೆಸರಿನಲ್ಲಿ ದತ್ತಿ ಇಟ್ಟಿದ್ದು , ಈ ದತ್ತಿ ಪ್ರಶಸ್ತಿಯನ್ನು ಜಾನಪದ ಹಾಡುಗಾರ್ತಿ ಕರಿಯಮ್ಮ , ದೊಡ್ಡ ಬಾಲ ದೇವರಹಟ್ಟಿ .ಚಿ.ನಾ.ಹಳ್ಳಿ ತಾಲ್ಲೋಕು ಇವರಿಗೆ ಸದರಿ ಸಮಾರಂಭದಲ್ಲಿ ಪ್ರಧಾನ ಮಾಡಲಾಗುವುದು .
ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು ರವರು ಪ್ರಸ್ತಾವನೆ ಮಾಡಲಿದ್ದು , ಉಪಾಧ್ಯಕ್ಷ ರಾದ ಸಿ.ಎ.ಇಂದಿರಾ ರವರು ಅಭಿನಂದನಾ ನುಡಿಗಳನ್ನಾಡುವರು. ಸರ್ಕಾರಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಮೇಜರ್ ಅನಿಲ್ ಕುಮಾರ್ ರವರು ಅಧ್ಯಕ್ಷತೆ ವಹಿಸಲಿರುವರು. ರಿಜಿಸ್ಟ್ರಾರ್ ವೀಣಾ ರವರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *