ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 4ರಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಸೇರಿ 11 ಅಭ್ಯರ್ಥಿಗಳಿಂದ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿವೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ಕುಣಿಗಲ್ ತಾಲ್ಲೂಕು ಸೊಬಗಾನಹಳ್ಳಿಯ ಎಸ್.ಪಿ.ಮುದ್ದಹನುಮೇಗೌಡ(69 ವರ್ಷ) ಅವರು 4 ನಾಮಪತ್ರ, ಕನ್ನಡ ಪಕ್ಷ ಅಭ್ಯರ್ಥಿ ತುಮಕೂರು ಗಾಂಧಿನಗರದ ಡಾ: ಹೆಚ್.ಬಿ.ಎಂ. ಹಿರೇಮಠ(62 ವರ್ಷ), ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಶಿರಾ ತಾಲ್ಲೂಕು ಗಂಜಲಗುಂಟೆ ಗ್ರಾಮದ ಪ್ರದೀಪ್ ಕುಮಾರ್ (34 ವರ್ಷ), ಲೋಕಶಕ್ತಿ ಮಧುಗಿರಿ ತಾಲ್ಲೂಕು ಡಿವಿ ಹಳ್ಳಿ ರಂಗನಾಯಕನರೊಪ್ಪ ಗ್ರಾಮದ ಅಭ್ಯರ್ಥಿ ರಂಗನಾಥ ಆರ್.ಎಸ್. (33 ವರ್ಷ), ಪಕ್ಷೇತರ ಅಭ್ಯರ್ಥಿಗಳಾಗಿ ತಿಪಟೂರು ತಾಲ್ಲೂಕು ಹಳೇಪಾಳ್ಯದ ಹೆಚ್.ಎನ್. ಮೋಹನ್ ಕುಮಾರ್(45 ವರ್ಷ) 2 ನಾಮಪತ್ರ ಹಾಗೂ ಗುಬ್ಬಿ ತಾಲ್ಲೂಕು ಹಿಂಡಿಸಿಗೆರೆ ಗ್ರಾಮದ ನೀಲಕಂಟೇಶ ಹೆಚ್.ಎಸ್.(38 ವರ್ಷ), ತುಮಕೂರು ಪಿ.ಹೆಚ್.ಕಾಲೋನಿಯ ಜೆ.ಕೆ.ಸಮಿ (58 ವರ್ಷ), ಮಧುಗಿರಿ ತಾಲ್ಲೂಕು ಹುಣಸವಾಡಿ ಗ್ರಾಮದ ಮಲ್ಲಿಕಾರ್ಜುನಯ್ಯ (44 ವರ್ಷ), ಕೊರಟಗೆರೆ ತಾಲ್ಲೂಕು ಬಸವನಹಳ್ಳಿಯ ವಿ. ಪ್ರಭಾಕರ್ (51 ವರ್ಷ), ತುಮಕೂರು ನಗರ ಶಿರಾಗೇಟ್ ಹೊಂಬಯ್ಯನಪಾಳ್ಯ ಆರ್. ಪುಷ್ಪ ಬಿನ್ ರಾಜಣ್ಣ (39 ವರ್ಷ), ತುರುವೇಕೆರೆ ತಾಲ್ಲೂಕು ಕಾಳಂಜಿಹಳ್ಳಿಯ ಕೆ.ಹುಚ್ಚೇಗೌಡ ಬಿನ್ ಕರಿಯಣ್ಣ ಗೌಡ (79 ವರ್ಷ) ಸೇರಿದಂತೆ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾದ ಮಾರ್ಚ್ 28 ರಿಂದ ಏಪ್ರಿಲ್ 4ರವರೆಗೂ ಒಟ್ಟು 22 ಅಭ್ಯರ್ಥಿಗಳಿಂದ 31 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.