ತುಮಕೂರು : ಲೋಕಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಏಪ್ರಿಲ್ 3, 2024ರಂದು 5 ಅಭ್ಯರ್ಥಿಗಳಿಂದ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿರುತ್ತವೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನ್ಯಾಷನಲ್ ಮಹಾ ಸಭಾ ಪಕ್ಷದ ಅಭ್ಯರ್ಥಿಯಾಗಿ ಬಸವರಾಜು ಹೆಚ್.ಆರ್.(53 ವರ್ಷ, #371/ಎ, ಹಿಂಡಿಸಗೆರೆ ಗ್ರಾಮ, ಸಿ.ಎಸ್.ಪುರ ಹೋಬಳಿ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ-572213) ಅವರು 1 ನಾಮಪತ್ರ, ಅಖಿಲ ಭಾರತ ಹಿಂದೂ ಮಹಾಸಭಾ ಪಕ್ಷದ ಅಭ್ಯರ್ಥಿಯಾಗಿ ಡಿ.ಎಂ. ಅನಂತರಾಜು(45ವರ್ಷ, ನಂ.2, ಶ್ರೀ ಬಾಲಾಜಿ ನಿಲಯ, 3ನೇ ಮುಖ್ಯರಸ್ತೆ, ಲಕ್ಷ್ಮಣ ನಗರ, ಕೃಷ್ಣ ಇಂಟರ್ ನ್ಯಾಷನಲ್ ಶಾಲೆ ಎದುರು, ಹೆಗ್ಗನಹಳ್ಳಿ ಕ್ರಾಸ್, ಬೆಂಗಳೂರು-560091) ಅವರು 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಹನುಮಯ್ಯ ಎನ್. (36ವರ್ಷ, ಗಂಟೆಗಾನಹಳ್ಳಿ, ಹೂಲೀಕುಂಟೆ ಅಂಚೆ, ಕಸಬಾ ಹೋಬಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ) ಅವರು 1 ನಾಮಪತ್ರ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ವಿ.ಸೋಮಣ್ಣ (72 ವರ್ಷ, ನಂ.621, ಮುನಿಸಿಪಲ್ ನಂ.18, 13ನೇ ಅಡ್ಡರಸ್ತೆ, ಎಂ.ಆರ್.ಸಿ.ಆರ್. ಬಡಾವಣೆ, ವಿಜಯನಗರ, ಬೆಂಗಳೂರು-560040) ಅವರು 3 ನಾಮಪತ್ರ ಹಾಗೂ ಬಹುಜನ ಸಮಾಜಪಾರ್ಟಿ ಅಭ್ಯರ್ಥಿಯಾಗಿ ಜೆ.ಎನ್.ರಾಜಸಿಂಹ (61ವರ್ಷ, ದೊಡ್ಡ ಅಗ್ರಹಾರ, ದೊಡ್ಡ ಅಗ್ರಹಾರ ಅಂಚೆ, ಸಿರಾ ತಾಲ್ಲೂಕು, ತುಮಕೂರು ಜಿಲ್ಲೆ-572125) ಅವರು 1 ನಾಮಪತ್ರ ಸೇರಿದಂತೆ ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.