ಇಂದು : ಟಿಕೆಟ್ ವಂಚಿತ ಅಸಮದಾನ ವ್ಯಕ್ತಿಯಿಂದ ಲಕ್ಷಾಂತರ ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಕೆ

ತುಮಕೂರು : ಟಿಕೆಟ್ ವಂಚಿತರಾಗಿ ಅಸಮದಾನಗೊಂಡಿರುವ ವ್ಯಕ್ತಿಯೊಬ್ಬರು ಬಾರಿ ಮೆರವಣಿಗೆಯೊಂದಿಗೆ ಏಪ್ರಿಲ್ 1ರಂದು ನಾಮ ಪತ್ರ ಸಲ್ಲಿಸಲಿದ್ದಾರೆ.

ಜಿಲ್ಲೆಯಲ್ಲಿ ಟಿಕೆಟ್ ಸಿಗಲಿಲ್ಲವೆಂದು ಅಸಮದಾನಗೊಂಡಿರುವ ನಾಯಕರೊಬ್ಬರು ರಾಷ್ಟ್ರೀಯ ಪಕ್ಷಗಳಿಂದ ಸ್ಪರ್ಧಿಸುತ್ತಿರುವ ಇಬ್ಬರು ಅಭ್ಯರ್ಥಿಗಳನ್ನು ಸೊಲಿಸುವ ಪಣ ತೊಟ್ಟಿದ್ದು, ಈ ನನ್ನ ಗೆಲುವು ದೇಶದ ಗಮನ ಸೆಳೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುಡಿಗಿರುವ ಅನಾಮದೇಯ ಅಭ್ಯರ್ಥಿ, ನನ್ನ ಬೆಂಬಲಿಗರೇ ಜಾನಪದ ಕಲಾ ಮೇಳಗಳೊಂದಿಗೆ ಟೌನ್‍ಹಾಲ್ ಸರ್ಕಲ್‍ನೊಂದಿಗೆ ಮೆರವಣಿಗೆಯಲ್ಲಿ ಕರೆ ತರಲಿದ್ದು, ಮಧ್ಯಾಹ್ನ 12ಗಂಟೆಯ ರಾಹು ಕಾಲದಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಈ ಬಾರಿ ತುಮಕೂರು ಲೋಕಸಭಾ ಚಿತ್ರಣವೇ ಬದಲಾಗಲಿದ್ದು, ಸುಳ್ಳುಗಳನ್ನೇ ಸರಮಾಲೆ ಮಾಡಿಕೊಂಡು ರಾಜಕೀಯ ಮಾಡುವವರಿಗೆ ನನ್ನ ಸ್ಪರ್ದೆಯಿಂದ ನಡುಕ ಉಂಟಾಗಲಿದೆ, ನನ್ನ ಮುಂದೆ ಪ್ರಧಾನಿ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಬಂದು ನಿಂತರೂ ಗೆಲ್ಲಲಾಗುವುದಿಲ್ಲ, ಅಷ್ಟು ಈ ಕ್ಷೇತ್ರದ ಜನರು ನನ್ನನ್ನು ಬಹುಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸುಳ್ಳು ಭರವಸೆಗಳನ್ನೇ ತಿಳಿಸುವ ತುಮಕೂರು ಲೋಕಸಭೆಗೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು, ಅವರಿಗೆ ನನ್ನ ಸ್ಪರ್ಧೆ ಭಯ ತರಿಸಿದ್ದು, ಹಲವಾರು ಆಮಿಷಗಳನ್ನು ಒಡ್ಡಿದರೂ ನಾನು ಕಣದಿಂದ ಹಿಂದೆ ಸರಿಯದೆ ಎದೆ ಸೆಟೆದು ಸೆಳೆಸಲು ಮುಂದಾಗಿದ್ದೇನೆ ಎಂದು ತಿಳಿಸಿದ್ದಾರೆ.

ನಾಮ ಪತ್ರ ಸಲ್ಲಿಸುವ ಏಪ್ರಿಲ್ 1ರಂದು ನನ್ನ ಮೆರವಣಿಗೆ ನಡೆಯುವ ದಾರಿಯುದ್ದಕ್ಕೂ ತಳಿರು-ತೋರಣ ಕಟ್ಟಲಿದ್ದು ರಸ್ತೆಯ ಇಕ್ಕಲೆಗಳಲ್ಲಿ ನನ್ನ ಮೇಲೆ ನನ್ನ ಬೆಂಬಲಿಗರು ಹೂವಿನ ಮಳೆಯನ್ನೇ ಸುರಿಸಲಿದ್ದಾರೆ, ಇದಕ್ಕೆಲ್ಲಾ ಚುನಾವಣಾ ಅಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಳ್ಳಲಾಗಿದೆ.

ನನ್ನ ಮೆರವಣಿಗೆಯ ಸಂದರ್ಭದಲ್ಲಿ ಮಳೆಯನ್ನು ಸುರುಸಬೇಕೆಂದು ದೇವಾನುದೇವತೆಗಳಿಗೆ ಅಷ್ಟಾರ್ಜನೆ ಮಾಡಿಸಿದ್ದು, ವರುಣ ದೇವನು ಸಂತೃಷ್ಟನಾಗಿದ್ದು ಮಳೆಯನ್ನು ಬೋರ್ಗೆರೆಯುತ್ತಾ ಸುರಿಸುವುದಾಗಿ ವಾಟ್ಸ್ ಆಫ್ ಸಂದೇಶವನ್ನು ಕಳಿಸಿದ್ದಾರೆ.

ನನ್ನ ನಾಮ ಪತ್ರ ಸಲ್ಲಿಕೆಗೆ ಜಿಲ್ಲೆಯ ಮೂಲೆ ಮೂಲೆಯಿಂದ ನನ್ನ ಬೆಂಬಲಿಗರು, ಅಭಿಮಾನಿಗಳು ಬರುತ್ತಿರುವುದರಿಂದ ಪೊಲೀಸ್ ಇಲಾಖೆಯು ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬಾರಿ ಬಂದೋ ಬಸ್ತ್ ಮಾಡಿದ್ದಾರೆ.

ಈ ನಾಮಪತ್ರ ಸಲ್ಲಿಕೆ ಮತ್ತು ನನ್ನ ಸ್ಪರ್ಧೆ ಇತಿಹಾಸ ಪುಟಗಳಲ್ಲಿ ಸೇರಲಿದ್ದು, ನನ್ನ ಗೆಲುವು ಸಹ ಇತಿಹಾಸ ನಿರ್ಮಾಣವಾಗಲಿದೆ, ಈ ಹಿನ್ನಲೆಯಲ್ಲಿಯೇ ನನ್ನ ಸ್ಪರ್ಧೆಯನ್ನು ಸ್ವತಃ ಪ್ರಧಾನಿಯವರೇ ತಡೆಯಲು ಮುಂದಾಗಿದ್ದರೂ ನಾನು ಹಿಂದೆ ಸರಿಯದೆ ಮುಂದಡಿಯಿಟ್ಟಿದ್ದೇನೆ, ಇದನ್ನು ಕೇಳಿದ ಜಿಲ್ಲೆಯ ಜನತೆ ನನಗೆ ಉಘೇ ಉಘೇ ಎನ್ನುತ್ತಿದ್ದಾರೆ.

ನನ್ನ ಸ್ಪಧೇಯು ಒಂದು ಆರೋಗ್ಯಕರ ಸ್ಪರ್ಧೆಯಾಗಿದ್ದು, ಯಾರಿಗೂ ಆಮಿಷವಾಗಲಿ, ಹಣ, ಹೆಂಡ ಹಂಚುವುದಾಗಲಿ ಮಾಡುವುದಿಲ್ಲ ಎಂದು ಘೋಷಿಸಿರುವುದರಿಂದಲೇ ನನಗೆ ಊಹಿಸಲೂ ಸಾಧ್ಯವಾಗದಷ್ಟು ಮತದಾರರ ಬೆಂಬಲ ಸಿಕ್ಕಿದ್ದು, ಎಲ್ಲಾ ಪಕ್ಷದವರು ನನ್ನ ಸ್ಪರ್ಧೆಗೆ ಬೆಂಬಲ ನೀಡಿದ್ದು, ಏಪ್ರಿಲ್ 1ರಂದು ನಾನು ನಾಮ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲೆಯ ಬಿಜೆಪಿ ಮತ್ತು ಕಾಂಗ್ರೆಸ್‍ನ ಪ್ರಮುಖ ನಾಯಕರೆಲ್ಲಾ ನನ್ನ ಜೊತೆ ಇರಲಿದ್ದಾರೆ, ಬೇಕಾದರೆ ನೀವು ಬಂದು ನೋಡಿ, ಅವರೇ ನನಗೆ ಅಪಾರ ಗೆಲುವು ತಂದು ಕೊಡುವ ನಾಯಕರು.

ನನ್ನ ಮೆರವಣಿಗೆಯ ಸಂದರ್ಭದಲ್ಲಿ ನನಗೆ ಕೈ ಬೀಸಿ ಶುಭ ಕೋರಲು ಸಿನಿಮಾ ತಾರೆಯರಾದ ಪ್ರೇಮ, ರಚಿತಾ ರಾಮ್, ಸಾಧುಕೋಕೊಲ, ಮುಂತಾದವರು ಬರಲಿದ್ದು, ಈ ಮೆರವಣಿಗೆಯನ್ನು ಸೆಟಲೈಟ್ ಚಾನಲ್ ಮೂಲಕ ದೇಶ-ವಿದೇಶಗಳಲ್ಲಿ ಪ್ರಸಾರವಾಗುವಂತೆ ನೋಡಿಕೊಳ್ಳಲಾಗುವುದು.

ನನ್ನ ನಾಮ ಪತ್ರ ಸಲ್ಲಿಕೆಯ ಮೆರವಣಿಗೆಗೆ ಮೈಸೂರು ಮಹಾರಾಜರೂ ಬರುವವರಿದ್ದರು, ಅವರೂ ಚುನಾವಣೆಗೆ ನಿಂತಿರುವುದರಿಂದ, ನಾನು ಮೆರವಣಿಗೆ ಪ್ರಾರಂಭಿಸುವ ವೇಳೆಗೆ ಅರಮನೆ ಮೇಲಿನಿಂದ ಕೈ ಬೀಸುವುದಾಗಿ ತಿಳಿಸಿದ್ದಾರೆ.

ನಾನು ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪುವವರೆಗೂ ಜೀರೋ ಟ್ರಾಫಿಕ್ ಮಾಡುವುದಾಗಿ ಟ್ರಾಫಿಕ್ ಪೊಲೀಸರು ಈಗಾಗಲೇ ತಿಳಿಸಿದ್ದು, ತುರ್ತು ಸೇವೆಯ ಅಂಬುಲೆನ್ಸ್ ಮಾತ್ರ ಯಾವುದೇ ಅಡೆತಡೆ ಇಲ್ಲದೆ 200 ಕಿ.ಮೀ.ವೇಗದಲ್ಲಿ ಚಲಿಸಲು ಅವಕಾಶ ಕಲ್ಪಿಸಲಾಗಿದೆ.

ವಿಶೇಷ ಸೂಚನೆ : ತೀವ್ರ ರೀತಿಯ ಹೃದಯ ಕಾಯಿಲೆಯಿಂದ ಬಳಲುತ್ತಿರುವವರಿಗೆ ಈ ಮೆರವಣಿಗೆ ನೋಡುವ ಅವಕಾಶವನ್ನು ನಿಷೇಧಿಸಲಾಗಿದೆ. ಏಕೆಂದರೆ ಜಗಮಗಿಸುವ ಲೈಟ್‍ಗಳೊಂದಿಗೆ, ಬ್ಯಾಂಡ್ ಸೆಟ್, ಹಾಡು ಕುಳಿತಗಳೊಂದಿಗೆ ಸಾಗುವ ಮೆರವಣಿಗೆ, ದೇವಾನು ದೇವತೆಗಳು ಸುರಿಸುವ ಮಳೆ ಕಂಡು ಹಾರ್ಟ್ ಅಟ್ಯಾಕ್ ಆಗಬಹುದೆಂದು ಹೃದಯ ಕಾಯಿಲೆಯವರನ್ನು ಮೆರವಣಿಗೆಗೆ ಬರದಂತೆ ತಡೆ ಹಿಡಿಯಲಾಗಿದೆ.

ಹೃದಯ ಕಾಯಿಲೆ ಇದೆಯೋ ಇಲ್ಲವೋ ಎಂಬುದನ್ನು ತಪಾಷಣೆ ಮಾಡಲು ನೂರಾರು ಹೃದ್ರೋಗ ತಜ್ಞರನ್ನು ನಗರದ ಹಳೆ ಮಹಾನಗರ ಪಾಲಿಕೆ ಕಟ್ಟಡದಲ್ಲಿ ಹೈ ವೋಲ್ಟೇಜ್ ಮ್ಯೂಸಿಕ್‍ನೊಂದಿಗೆ ಏರ್ಪಡಿಸಲಾಗಿದೆ.
ನನ್ನ ನಾಮ ಪತ್ರ ಸಲ್ಲಿಕೆ ಮೆರವಣಿಗೆಯನ್ನು ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ, ನಿರಾಶರಾಗಿ ಕೊರಗದಿರಿ.

ಇದನ್ನು ಓದಿ ಶತ ಮಾರ್ಖರಾದವರಿಗೆಲ್ಲಾ ಮೂರ್ಖರ(ಏಪ್ರಿಲ್-1) ದಿನಾಚರಣೆಯ ಶುಭಾಶಯಗಳು.

-ನಿಮ್ಮ ಮೂರ್ಖ ಮಹಾರಾಜ ಕತ್ತೆ.

Leave a Reply

Your email address will not be published. Required fields are marked *