ತುಮಕೂರು- ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾರಿಗೆ ಬಸ್ಗಳ ಸಂಚಾರ ವಿರಳವಾಗಿದ್ದು, ಸಮರ್ಪಗಳ ಬಸ್ಗಳ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡಿದರು. ಬಸ್ ನಿಲ್ದಾಣಗಳು ಬಸ್ಗಳಿಲ್ಲದೆ ಬಿಕೋ ಎನ್ನುತ್ತಿದ್ದವು.
ಕೆಎಸ್ಸಾರ್ಟಿಸಿ ನೌಕರರ ಮುಷ್ಕರದಿಂದಾಗಿ ಕಲ್ಪತರುನಾಡಿನ 10 ತಾಲ್ಲೂಕುಗಳಲ್ಲೂ ಸಹ ಸಾರಿಗೆ ಬಸ್ಗಳ ಸಂಚಾರದಲ್ಲಿ ಶೇ. 50 ರಷ್ಟು ವ್ಯತ್ಯಯ ಉಂಟಾಗಿದೆ. ಹೀಗಾಗಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಪ್ರತಿನಿತ್ಯದಂತೆ ಬಸ್ಗಳ ಸೌಲಭ್ಯ ಇಲ್ಲದೆ ತಮ್ಮ ತಮ್ಮ ಊರುಗಳಿಗೆ, ಕೆಲಸ ಕಾರ್ಯಗಳಿಗೆ ತೆರಳಲು ಪ್ರಯಾಸಪಡುವಂತಾಗಿದೆ.
ಬೆಂಗಳೂರು- ತುಮಕೂರು ಮಧ್ಯೆ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿವೆ. ಗ್ರಾಮೀಣ ಭಾಗದ ಕಡೆಗೆ ಹೋಗುವ ಬಸ್ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ಕುಳಿತಿರುವ ದೃಶ್ಯಗಳು ಕಂಡು ಬಂದವು.
ದೂರದ ಊರುಗಳಿಂದ ಬರುವ ಬಸ್ಗಳು ಮಾತ್ರ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿವೆ. ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿದೆ. ಜಿಲ್ಲೆಯಲ್ಲಿ ಪ್ರತಿ ದಿನ 675 ಬಸ್ಗಳು ಸಂಚರಿಸುತ್ತವೆ. 2,400ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇಂದು ಮುಷ್ಕರದಿಂದಾಗಿ ನೌಕರರು ಹಾಗೂ ಬಸ್ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರದ ಬಿಸಿ ಕಲ್ಪತರುನಾಡಿಗೂ ತಟ್ಟಿದೆ.
ಪ್ರತಿನಿತ್ಯದಂತೆ ಬಸ್ಗಳ ಸಂಚಾರದಲ್ಲಿ ಶೇ. 50 ರಷ್ಟು ಇಳಿಕೆಯಾಗಿರುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ತೆರಳಲಾಗದೆ ಪರದಾಡುತ್ತಿದ್ದ ದೃಶ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾಮಾನ್ಯವಾಗಿತ್ತು.
ಬಸ್ ಸಂಚಾರ ಆರಂಭಿಸಿಲ್ಲ, ಎಲ್ಲ ಬಸ್ಗಳನ್ನು ಡಿಪೆÇೀದಲ್ಲಿ ನಿಲ್ಲಿಸಲಾಗಿದೆ. ಬೇರೆ ಬೇರೆ ಕಡೆಯಿಂದ ಬರುವ ಬಸ್ಗಳು ಕರ್ತವ್ಯಕ್ಕೆ ಹಾಜರಾಗದ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಮುಷ್ಕರ ನಡೆಸದೆ ಕರ್ತವ್ಯಕ್ಕೆ ಹಾಜರಾಗುವಂತೆ ಈಗಾಗಲೇ ನೌಕರರಿಗೆ ಮನವಿ ಮಾಡಲಾಗಿದೆ.
ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗಿಯಾಗುವ ನೌಕರರ ವಿರುದ್ಧ ಸರ್ಕಾರದ ನಿಯಮಾವಳಿಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಹೇಳಿದರು.
ಈ ಸಂಬಂಧ ನಿನ್ನೆಯೇ ನಮ್ಮ ನೌಕರರಿಗೆ ತಿಳುವಳಿಕೆ ನೀಡಿದ್ದೇವೆ. ಮುಷ್ಕರದಲ್ಲಿ ಭಾಗವಹಿಸಬೇಡಿ, ಪ್ರಯಾಣಿಕರಿಗೆ ತೊಂದರೆ ಆಗುತ್ತದೆ. ಎಲ್ಲಾ ವಿಚಾರವನ್ನು ತಿಳಿಸಿ ಕರ್ತವ್ಯಕ್ಕೆ ಹಾಜರಾಗಿ ಎಂದು ಮನವಿ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿ ಶೇ. 70 ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಯಲ್ಲಿ 278 ಬಸ್ಗಳು 8.30 ರೊಳಗೆ ಸಂಚರಿಸಬೇಕಿತ್ತು. ಇದುವರೆಗೂ 160 ಬಸ್ ಗಳು ಓಡಾಟ ಮಾಡಿವೆ. ಸ್ವಲ್ಪ ನೌಕರರು ಬಂದು ಡ್ಯೂಟಿ ಮಾಡುತ್ತಿದ್ದಾರೆ. ಸಾರ್ವಜನಿಕರು ಕಡಿಮೆ ಇದ್ದಾರೆ.
ತೊಂದರೆಯಾಗದಂತೆ ಎಲ್ಲೆಲ್ಲಿ ಜನ ಇದ್ದಾರೆ. ಆ ಕಡೆಗೆ ಬಸ್ಗಳನ್ನು ಡಿವಿಯೇಷನ್ ಮಾಡಿಕೊಂಡು ವ್ಯವಸ್ಥೆ ಮಾಡಿಕೊಡುತ್ತಿದ್ದೇವೆ. ಮಧ್ಯಾಹ್ನದ ವೇಳೆಗೆ ಇನ್ನಷ್ಟು ನೌಕರರು ಕೆಲಸಕ್ಕೆ ಬರಬಹುದು ಎಂದರು.

ಪ್ರಯಾಣಿಕರಿಗೆ ತೊಂದರೆಯಾಗದಂತೆ ಎಲ್ಲ ರೀತಿ ಪ್ರಯತ್ನ ಮಾಡುತ್ತಿದ್ದೇವೆ. ನೌಕರರ ಹಾಜರಾತಿ ಟೈಮ್ ಬೇರೆ ಬೇರೆ ಇರುತ್ತದೆ. ಈವರೆಗೂ ಶೇ. 70 ರಷ್ಟು ನೌಕರರು ಬಂದಿದ್ದಾರೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ, ಕೇವಲ ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿದ್ದಾರೆ ಎಂದು ಅವರು ಹೇಳಿದರು.
ಪ್ರಯಾಣಿಕರ ಸಂಖ್ಯೆ ಶೇ. 50 ರಷ್ಟು ಕಡಿಮೆಯಾಗಿದ್ದು, ನಮ್ಮ ಸಂಸ್ಥೆ ಎಸ್ಮಾ ಆಕ್ಟ್ ಗೆ ಒಳಪಡುತ್ತದೆ. ಎಸ್ಮಾ ಜಾರಿ ಇದ್ದೇ ಇದೆ. ಎಸ್ಮಾ ಎಲ್ಲಾರಿಗೂ ಅನ್ವಯವಾಗುತ್ತದೆ. ನೌಕರರ ಹತ್ತಿರ ಸಹಿ ಪಡೆದುಕೊಂಡಿದ್ದೇವೆ.
ಈಗಾಗಲೇ ನೌಕರರಿಗೆ ತಿಳುವಳಿಕೆ ನೀಡಿದ್ದೇವೆ. ಮೆಜಾರಿಟಿ ಜನರು ಬಂದಿದ್ದಾರೆ. ಕೆಲವರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಪ್ರತಿಭಟನೆ ಮಾಡಿಲ್ಲ, ಕರ್ತವ್ಯಕ್ಕೆ ಹಾಜರಾಗಿಲ್ಲ, ಪೆÇೀನ್ ಮಾಡಿ ಮನವೊಲಿಸಿ ಡ್ಯೂಟಿ ಮಾಡುವಂತೆ ಮನವಿ ಮಾಡುತ್ತಿದ್ದೇವೆ. ಮಧ್ಯಾಹ್ನದ ವೇಳೆಗೆ ಎಲ್ಲವೂ ಸ್ಪಷ್ಟವಾಗಿ ಗೊತ್ತಾಗಲಿದೆ. ಇಂದು ಕೋರ್ಟ್ ವಿಚಾರಣೆ ಕೂಡ ಇದೆ. ಅದನ್ನು ನೋಡಿಕೊಂಡು ಬರಬಹುದು. ನೌಕರರಿಗೆ ಒತ್ತಡ ಹಾಕಿಲ್ಲ, ಮನವಿ ಮಾಡಿಕೊಂಡಿದ್ದೇವೆ. ಜತೆಗೆ ವಾಟ್ಸಾಪ್ ಮೂಲಕವೂ ಮನವಿ ಮಾಡಿದ್ದೇವೆ. ತರಬೇತಿ ಹಾಗೂ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕೆಲಸಕ್ಕೆ ಬಳಸಿಕೊಂಡಿದ್ದೇವೆ ಎಂದು ಅವರು ಹೇಳಿದರು.