ಬೈರವೇಶ್ವರ ಬ್ಯಾಂಕ್ ಉಪಾಧ್ಯಕ್ಷ ನಟೇಶ್ ರವರಿಗೆ ಸನ್ಮಾನ

ತುಮಕೂರು : ಬೈರವೇಶ್ವರ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕೆ.ನಟೇಶ್ ರವರನ್ನು ಮಹಾನಗರಪಾಲಿಕೆ 26ನೇ ವಾರ್ಡಿನ ಮಾಜಿ ಸದಸ್ಯರಾದ ಹೆಚ್.ಮಲ್ಲಿಕಾರ್ಜುನಯ್ಯರವರ ಕಛೇರಿಯಲ್ಲಿ ವಾರ್ಡಿನ ನಾಗರೀಕರ ಪರವಾಗಿ ಸನ್ಮಾನಿಸಲಾಯಿತು.

ಪತ್ರಿಕೋದ್ಯಮಿಗಳು ಆದ ರಾಕ್ ಲೈನ್ ರವಿಕುಮಾರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಟೇಶ್ ರವರು ಸುಮಾರು 35 ವರ್ಷಗಳಿಂದ ವಾರ್ಡಿನ ನಿವಾಸಿಯಾಗಿದ್ದು ಅವರ ತಾಯಿಯವರಾದ ಜಯಮ್ಮ ಕವನಯ್ಯ ರವರು ರಾಜಕೀಯ ಕ್ಷೇತ್ರ ಸಹಕಾರಿ ಕ್ಷೇತ್ರಗಳಲ್ಲಿ ತುಂಬಾ ಹೆಸರನ್ನು ಪಡೆದಿದ್ದು ಅವರದೇ ಹಾದಿಯಲ್ಲಿ ನಮ್ಮ ನಟೇಶ್ ರವರು ರಾಜಕೀಯ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು 20 ವರ್ಷಗಳಿಂದ ಸಹಕಾರಿ ಕ್ಷೇತ್ರಗಳಲ್ಲಿ ಒಡನಾಟವಿದ್ದು ನೊಂದ ಜನರಿಗೆ ಅನುಕೂಲಗಳನ್ನು ಮಾಡಿ ಬಡವರ ನೋವಿಗೆ ಸ್ಪಂದಿಸಿ ಕಷ್ಟ ಸುಖಗಳಿಗೆ ಭಾಗಿಯಾಗಿ ಇದರ ಜೊತೆ ಜೊತೆಯಲಿ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದಾರೆ ಎಂದರು.

ಹೆಚ್ಚು ಹೆಚ್ಚು ಹಣವನ್ನು ನಾಗರಿಕರಗಳಿಗೆ ಸಾಲವಾಗಿ ಕೊಡುವುದರಲ್ಲಿ ಇವರದು ಸಹ ಬಹಳಷ್ಟು ಕೊಡುಗೆ ಇದ್ದು ಇಂತಹವರು ನಾಲ್ಕನೇ ಬಾರಿಗೆ ಗೆದ್ದು ಭೈರವೇಶ್ವರ ಬ್ಯಾಂಕಿನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತೋಷದ ವಿಷಯ ಹಾಗೂ ಇಂತಹ ಒಳ್ಳೆಯ ವ್ಯಕ್ತಿಯನ್ನು ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಸೇರಿ ಉಪಾಧ್ಯಕ್ಷರಾಗಿ ಆಯ್ಕೆ ಖುಷಿ ತಂದಿದ್ದು, ನಟೇಶ್ ರವರಿಗೆ ಕ್ಲಬ್ 26 ವತಿಯಿಂದ ಸನ್ಮಾನಿ ಸುತ್ತಿರುವುದು ನಮಗೆಲ್ಲರಿಗೂ ಸಂತೋಷದ ವಿಚಾರವಾಗಿದೆ ಹಾಗೂ ಇವರು ನಮ್ಮ ಸಂಘದ ಸದಸ್ಯರಾಗಿದ್ದಾರೆ ಎಂಬುದು ಸಹ ನಮ್ಮ ಹೆಗ್ಗಳಿಕೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಉಮೇಶ್ ಬಾಬು ಅಧ್ಯಕ್ಷರಾದ ವಿಶ್ವಮೂರ್ತಿ ಕಾರ್ಯದರ್ಶಿಯಾದ ಸಂತೋಷ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ್ ಮಂಜುನಾಥ್ ಪಾಣಿ ವಾಸಣ್ಣ ವೇಣುಗೋಪಾಲ್ ಪ್ರಕಾಶ್ ಭಾರತೀಶ್ ಶ್ರೀನಿವಾಸ್ ನಿಖಿಲ್ ಗೌಡ ಹಾಗೂ ವಾರ್ಡಿನ ಮುಖಂಡರುಗಳು ಹಾಜರಿದ್ದರು

Leave a Reply

Your email address will not be published. Required fields are marked *