ತುಮಕೂರು : ತುಮಕೂರು ಲೋಕಸಭಾ ಚುನಾವಣೆ ಯ ಮತದಾನ ಮಧ್ಯಾಹ್ನ 3 ಗಂಟೆಗೆ ಶೇಕಡ. 72.15%ರಷ್ಟು ಮತದಾನವಾಗಿದ್ದು, 5 ಗಂಟೆಯವರೆಗಿನ ಮತದಾನದಲ್ಲಿ ಗುಬ್ಬಿಯು ಮತದಾದಲ್ಲಿ ನಾಗಲೋಟದಲ್ಲಿದ್ದರೆ, ತುಮಕೂರು ನಗರ ಹಿನ್ನೋಟದಲ್ಲಿದೆ.
ಮಧ್ಯಾಹ್ನ 5 ಗಂಟೆಯ ವೇಳೆಗೆ ತುಮಕೂರು ಲೋಕಸಭಾ ವ್ಯಾಪ್ತಿಯ ಚಿ.ನಾ.ಹಳ್ಳಿ 72.10%, ಗುಬ್ಬಿ 76.31%, ಕೊರಟಗೆರೆ 74.23%, ಮಧುಗಿರಿ 71.33%, ತಿಪಟೂರು 76.25%, ತುಮಕೂರು 62.17%, ತುಮಕೂರು ಗ್ರಾಮಾಂತರ 73,99% ಮತ್ತು ತುರುವೇಕೆರೆ74.83% ಶೇಕಡ ಮತದಾನವಾಗಿದ್ದು ಒಟ್ಟು 72.15%ರಷ್ಟು ಮತದಾನವಾಗಿದೆ.
6ಗಂಟೆಯಾದರೂ ಹಲವಾರು ಮತದಾನ ಕೇಂದ್ರಗಳಲ್ಲಿ ಮತದಾರರು ಸಾಲುಗಟ್ಟಿ ನಿಂತಿರುವುದು ಅಲ್ಲಿ ಕಂಡು ಬಂದಿದೆ. ಸಾಲಿನಲ್ಲಿ ನಿಂತವರಿಗೆ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಜಿಲ್ಲಾಧಿಕಾರಿಗಳ ಹೇಳಿಕೆ :ಮತದಾನದಲ್ಲಿ ಮಹಿಳೆಯರೇ ಮುಂದು
ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿದಂತೆ 19-ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಇಂದು(ಏಪ್ರಿಲ್ 26ರಂದು) ನಡೆದ ಚುನಾವಣಾ ಮತದಾನವು ಶಾಂತಿಯುತವಾಗಿ ನಡೆದಿದ್ದು, ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಶೇ.72.15ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದ್ದಾರೆ.
128-ಚಿಕ್ಕನಾಯನಕನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 1,09,586 ಪುರುಷ, 1,11,979 ಮಹಿಳಾ ಹಾಗೂ 2 ಇತರೆ ಸೇರಿ ಒಟ್ಟು 2,21,567 ಮತದಾರರಿದ್ದು, ಈ ಪೈಕಿ 1,59,751 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 72.10 ಮತದಾನವಾಗಿರುತ್ತದೆ.
135-ಗುಬ್ಬಿ 91,196 ಪುರುಷ, 92,506 ಮಹಿಳಾ ಹಾಗೂ 10 ಇತರೆ ಒಟ್ಟು 183712 ಮತದಾರರಿದ್ದು, ಈ ಪೈಕಿ ಒಟ್ಟು 140189 ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ.76.31 ಮತದಾನವಾಗಿರುತ್ತದೆ.
134-ಕೊರಟಗೆರೆ 1,02,837 ಪುರುಷ, 1,04,513 ಮಹಿಳೆ ಹಾಗೂ 11 ಇತರೆ ಸೇರಿ ಒಟ್ಟು 2,07,361 ಮತದಾರರಿದ್ದು, ಈ ಪೈಕಿ 1,53,914 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 74.23 ಮತದಾನವಾಗಿರುತ್ತದೆ.
138-ಮಧುಗಿರಿ 97,816 ಪುರುಷ, 98,019 ಮಹಿಳಾ ಹಾಗೂ 6 ಇತರೆ ಸೇರಿ ಒಟ್ಟು 1,95,841 ಮತದಾರರಿದ್ದು, ಈ ಪೈಕಿ 1,39,695 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 71.33 ಮತದಾನವಾಗಿರುತ್ತದೆ.
129-ತಿಪಟೂರು 90,340 ಪುರುಷ, 96305 ಮಹಿಳಾ ಹಾಗೂ 2 ಇತರೆ ಸೇರಿ ಒಟ್ಟು 1.86.647 ಮತದಾರರಿದ್ದು, ಈ ಪೈಕಿ 1,42,318 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 76.25 ಮತದಾನವಾಗಿರುತ್ತದೆ.
132-ತುಮಕೂರು ನಗರ 1,30,688 ಪುರುಷ, 1,37,297 ಮಹಿಳಾ ಹಾಗೂ 27 ಇತರೆ ಸೇರಿ ಒಟ್ಟು 2,68,012 ಮತದಾರರಿದ್ದು, ಈ ಪೈಕಿ 1,66,616 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 62.17 ಮತದಾನವಾಗಿರುತ್ತದೆ.
133-ತುಮಕೂರು ಗ್ರಾಮಾಂತರ 1,04,994 ಪುರುಷ, 1,08,591 ಮಹಿಳಾ ಹಾಗೂ 16 ಇತರೆ ಸೇರಿ ಒಟ್ಟು 2,13,601 ಮತದಾರರಿದ್ದು, ಈ ಪೈಕಿ 1,58,053 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 73.99 ಮತದಾನವಾಗಿರುತ್ತದೆ.
130-ತುರುವೇಕೆರೆ 91,608 ಪುರುಷ, 92,960 ಮಹಿಳೆ ಹಾಗೂ 0 ಇತರೆ ಸೇರಿದಂತೆ ಒಟ್ಟು 184568 ಮತದಾರರಿದ್ದು, ಈ ಪೈಕಿ 1,38,115 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 74.83 ಮತದಾನವಾಗಿರುತ್ತದೆ.
ಒಟ್ಟಾರೆ 19 ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಪುರುಷ ಮತದಾರರು 819065 ಇದ್ದು, 842170 ಮಹಿಳಾ ಮತದಾರರಿದ್ದು, ಇತರೆ 74 ಸೇರಿದಂತೆ ಈ ಮೇಲ್ಕಂಡ ವಿಧಾನಸಭಾ ಕ್ಷೇತ್ರಗಳಲ್ಲಿ 16,61,309 ಮತದಾರರಿರುತ್ತಾರೆ. ಈ ಪೈಕಿ 5,96,633 ಪುರುಷ, 6,01,999 ಮಹಿಳಾ, ಇತರೆ 19 ಸೇರಿದಂತೆ 11,98,651 ಮತದಾರರು ಮತದಾನ ಮಾಡಿದ್ದು, ಒಟ್ಟಾರೆ ಸಂಜೆ 5 ಗಂಟೆಯವರೆಗೆ ಶೇ.72.15 ಮತದಾನವಾಗಿರುತ್ತದೆ.