ತುಮಕೂರು : ತುಮಕೂರಿನ 2ನೇ ವರ್ಷದ ದಸರಾದಲ್ಲಿ ಹೆಲಿಕಾಪ್ಟರ್ ರೈಡ್ ಕಲ್ಪಿಸಿದ್ದು, ಹೆಲಿಕಾಪ್ಟರ್ ನಲ್ಲಿ ಜಾಲಿ ರೈಡ್ ಮಾಡಿದವರು ರೈಡ್ ತುಂಬಾ ಖುಷಿಯಾಗಿರುತ್ತದೆ ಎಂದು ಮೈತ್ರಿನ್ಯೂಸ್ ಗೆ ತಮ್ಮ ಅನುಭವವನ್ನು ಹಂಚಿಕೊಂಡರು.
ಸೆಪ್ಟಂಬರ್ 22ರಿಂದಲೇ ತುಮಕೂರಿನ ವಿಶ್ವವಿದ್ಯಾನಿಲಯದಲ್ಲಿ ಹೆಲಿಕಾಪ್ಟರ್ ಜಾಲಿ ರೈಡ್ ಏರ್ಪಡಿಸಲಾಗಿದ್ದು, ನಿರೀಕ್ಷೆಗೂ ಮೀರಿ ಜನರು ಹೆಲಿಕಾಪ್ಟರ್ ಜಾಲಿ ರೈಡ್ ಗೆ ಮುಗಿಬಿದಿದ್ದಾರೆ.
ವಿಶ್ವವಿದ್ಯಾಲಯದ ಹೆಲಿಪ್ಯಾಡ್ ನಿಂದ ಹಾರುವ ಹೆಲಿಕಾಪ್ಟರ್, ತುಮಕೂರು ನಗರ, ಸಿದ್ದಗಂಗೆ, ಮಂದಾರಗಿರಿ(ಬಸ್ತಿ ಬೆಟ್ಟ) ಮತ್ತು ತುಮಕೂರು ಅಮಾನಿಕೆರೆಯನ್ನು ಹೆಲಿಕಾಪ್ಟರ್ ಮೂಲಕ ತೋರಿಸಲಾಗುವುದು ಎಂದು ಜಾಲಿ ರೈಡ್ ಮಾಡಿಕೊಂಡು ಬಂದ ಲಕ್ಷ್ಮೀಶ್ ಹೇಳುತ್ತಾರೆ, ತುಮಕೂರು ಜನತೆಗೆ ಇದು ಬೇಕಾಗಿತ್ತು, ಪ್ಲೈಟಾದರೆ ಹತ್ತ ಬಹುದು, ಹೆಲಿಕಾಪ್ಟರ್ ಸಿಗುತ್ತಿರಲಿಲ್ಲ, ಇದೊಂದು ಅವಕಾಶ ಮಾಡಿಕೊಟ್ಟಿರುವ ಜಿಲ್ಲಾಡಳಿತಕ್ಕೆ ತುಂಬಾ ಧನ್ಯವಾದಗಳು, ಹೆಲಿ ರೈಡ್ ತುಂಬಾ ವಂಡರ್ಫುಲ್ ಎಕ್ಸ್ಫಿರಿಯೆನ್ಸ್ ಎನ್ನುತ್ತಾರೆ.
ಹೆಲಿಕಾಪ್ಟರ್ನಲ್ಲಿ ಒಮ್ಮೆಗೆ ಐದು ಜನರು ರೈಡ್ ಮಾಡಬಹುದು, ವಿಶ್ವವಿದ್ಯಾನಿಲಯದ ಹೆಲಿಪ್ಯಾಡಿನಿಂದ ಪುರನೇ ಹಾರುವ ಹೆಲಿಕಾಪ್ಟರ್ ನೋಡಲು ತುಂಬಾ ಖುಷಿ ಕೊಡುತ್ತದೆ, ಐದಾರು ನಿಮಿಸ ಜಾಲಿರೈಡ್ ಮಾಡಿಸಿಕೊಂಡು ಬರುವ ಹೆಲಿಕಾಪ್ಟರ್ ಹೆಲಿಪ್ಯಾಡ್ನಲ್ಲಿ ನಿಂತ ಕೂಡಲೆ ಅದರಲ್ಲಿರುವ ಪ್ರಯಾಣಿಕರು ಇಳಿದ ತಕ್ಷಣವೆ, ಹೆಲಿರೈಡ್ ಗೆ ಕಾಯುತ್ತಿರುವ ಐದು ಜನರನ್ನು ತಕ್ಷಣವೇ ಹತ್ತಿಸಲಾಗುತ್ತದೆ, 5ಜನರನ್ನು ಹತ್ತಿಸಿಕೊಂಡ ಕೂಡಲೇ ಹೆಲಿಕಾಪ್ಟರ್ ಮೇಲಕ್ಕೆ ಪುರನೇ ಹಾರುತ್ತದೆ.
ಇಂದು ಎರಡನೇ ಶನಿವಾರವಾದ್ದರಿಂದ ಹೆಲಿರೈಡ್ಗೆ ಹೆಚ್ಚು ಜನರು ನೋಂದಾವಣೆ ಮಾಡಿಕೊಂಡಿದ್ದಾರೆಂದು ಅಲ್ಲಿಯ ನೋಂದವಣಿಗಾರರು ತಿಳಿಸಿದರು.
ಈ ದಿನ 300ಜನ ಹೆಲಿರೈಡ್ ಮಾಡಿದರು, ಇದರಿಂದ 11,70,000 ರೂ.ಗಳು ಸಂಗ್ರಹವಾಗಿದೆ.
ಒಟ್ಟಿನಲ್ಲಿ ದಸರಾ ಪ್ರಯುಕ್ತ ಹೆಲಿಕಾಪ್ಟರ್ ರೈಡ್ ತುಮಕೂರು ಜನತೆಗೆ ಖುಷಿಯನ್ನು ತಂದಿದ್ದು, ಹೆಲಿರೈಡ್ಗೆ ಒಬ್ಬರಿಗೆ 3900ರೂಪಾಯಿಗಳನ್ನು ಚಾರ್ಜ್ ಮಾಡಲಾಗುತ್ತದೆ, ಎರಡು ಸಾವಿರವಾಗಿದ್ದರೆ ನಮ್ಮಂತಹವರು ಹೋಗಿ ಬರಬಹುದಿತ್ತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು.