ತುಮಕೂರು ಕ್ಷೇತ್ರದವರೂ ಮೋದಿಯವರ ಮತದಾರರು: ವಿ.ಸೋಮಣ್ಣ

ತುಮಕೂರು: ಭವ್ಯ ಭಾರತದ ಸರ್ವತೋಮುಖ ಅಭಿವೃದ್ಧಿಗೆ, ದೇಶದ ರಕ್ಷಣೆ, ದೇಶದ ಜನರು ಶಾಂತಿ, ಸುರಕ್ಷತೆ, ನೆಮ್ಮದಿಯಿಂದ ಬಾಳಲು ನರೇಂದ್ರ ಮೋದಿಯವರು ಮತೊಮ್ಮೆ ಪ್ರಧಾನಿ ಆಗಬೇಕು. ಕೇವಲ ವಾರಾಣಸಿಯವರು ಮಾತ್ರ ಮೋದಿಯವರ ಮತದಾರರಲ್ಲ, ತುಮಕೂರಿನ ಮತದಾರರೂ ಮೋದಿಯವರನ್ನು ಗೆಲ್ಲಿಸುವ ಮತದಾರರೇ. ನನಗೆ ಮತ ನೀಡುವುದರೊಂದಿಗೆ ಮೋದಿಯರನ್ನು ಗೆಲ್ಲಿಸಿ ಮತ್ತೊಮೆ ಪ್ರಧಾನ ಮಂತ್ರಿ ಮಾಡಬೇಕು ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಮನವಿ ಮಾಡಿದರು.

ಶನಿವಾರ ನಗರದಲ್ಲಿ ನಡೆದ ತಿಗಳ ಸಮುದಾಯ ಮುಖಂಡರ ಸಭೆಯಲ್ಲಿ ಅಗ್ನಿಬನ್ನಿರಾಯ ಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸ್ವಾಭಿಮಾನಕ್ಕೆ, ಕಠಿಣ, ಸ್ಪಷ್ಟ ನಿರ್ಧಾರಕ್ಕೆ ಮತ್ತೊಂದು ಹೆಸರು ತಿಗಳ ಸಮಾಜ. ಈ ಸಮಾಜದ ಜೊತೆ ನನಗೆ ಹತ್ತಾರು ವರ್ಷಗಳ ಒಡನಾಟವಿದೆ. ಹೂವು, ತರಕಾರಿ ಬೆಳೆಯುವ ಶ್ರಮಜೀವಿ ತಿಗಳರು ಬೆಳೆಯುವ ಹೂವು ನಿತ್ಯ ಕೋಟ್ಯಾಂತರ ಮನೆ ಬೆಳಗುತ್ತವೆ. ಅಂತಹ ಬೆಳಗುವ ಹೃದಯಯ ಶ್ರೀಮಂತಿಕೆ ಈ ಸಮುದಾಯದವರದ್ದು ಎಂದರು.

ಈ ಸೋಮಣ್ಣ ಮಾಡಬೇಕು ಎಂದುಕೊಂಡ ಕೆಲಸವನ್ನು ಮಾಡಿಯೇ ತೀರುತ್ತಾರೆ. ಜನಸಮಾನ್ಯರ ಬದುಕು, ಬವಣೆಗಳ ಅರಿವಿದೆ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಸುಧಾರಣೆ ಮಾಡುತ್ತಲೇ ಬೆಳೆದುಬಂದಿರುವುದಾಗಿ ಹೇಳಿದ ವಿ.ಸೋಮಣ್ಣ, ಈ ಚುವಣೆಯಲ್ಲಿ ನಾನು ನಿಮಿತ್ತ ಮಾತ್ರ, ನೀವು ನನಗೆ ಮತ ನೀಡುವುದು ಮೋದಿಗೆ ಮತ ನೀಡಿದಂತೆ, ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಚುನಾವಣೆಯಲ್ಲಿ ತಮಗೆ ಮತ ನೀಡಿ ಚುನಯಿಸಬೇಕು ಎಂದು ವಿನಂತಿಸಿಕೊಂಡರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೃಷಿಯನ್ನೇ ಕಾಯಕ ಮಾಡಿಕೊಡ ಕಾಯಕನಿಷ್ಠೆಯ ತಿಗಳ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಇಂತಹ ಸಮುದಾಯಗಳು ಎಲ್ಲಾ ರೀತಿಯಲ್ಲೂ ಸ್ವಾವಲಂಬಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲೆಂದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಯೋಜನೆಗಳ ಪ್ರಯೋಜನೆಗಳನ್ನು ಜನರಿಗೆ ಪರಿಚಯಿಸಿ ಅವುಗಳ ಪ್ರಯೋಜನೆ ಪಡೆಯುವಂತೆ ತಿಳಿಸಿ ಹಾಗೂ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಮತ ನೀಡಿ ಗೆಲ್ಲಿಸುವಂತೆ ಕೋರಿದರು.

ಶಾಸಕ ಸುರೇಶ್‍ಗೌಡರು ಮಾತನಾಡಿ, ಈ ಚುನಾವಣೆಯಲ್ಲಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಿದರೆ ಇವರು ಪ್ರಧಾನಿ ಮೋದಿ ಸರ್ಕಾರದಲ್ಲಿ ಸಚಿವರಾಗುತ್ತಾರೆ. ಅದರೊಂದಿಗೆ ಜಿಲ್ಲೆಯಲ್ಲಿ ನೀರಾವರಿ, ರಸ್ತೆ, ಕೈಗಾರಿಕೆಗಳ ಅಭಿವೃದ್ಧಿಗೆ ಅವಕಾಶವಾಗುತ್ತದೆ. ಜಿಲ್ಲೆಗೆ ಕೇಂದ್ರ ಮಂತ್ರಿ ಸ್ಥಾನ ದೊರೆಯುವ ಅವಕಾಶ ಸೋಮಣ್ಣರ ಗೆಲುವಿನಿಂದ ಸಾಧ್ಯವಾಗುತ್ತದೆ ಎಂದರು.

ಬಿಜೆಪಿ ಮುಖಂಡ ದಿಲೀಪ್‍ಕುಮಾರ್, ನಗರ ಸಭೆ ಮಾಜಿ ಅಧ್ಯಕ್ಷೆ ಎಲ್.ಕಮಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಟಿ.ಹೆಚ್.ಕೃಷ್ಣಪ್ಪ., ಬಿಜೆಪಿ ನಗರ ಓಬಿಸಿ ಅಧ್ಯಕ್ಷ ಹನುಮಂತರಾಜು, ತಿಗಳ ಸಮಾಜದ ಮುಖಂಡರಾದ ಅಣೆತೋಟ ಶ್ರೀನಿವಾಸ್, ವೆಂಕಟಪ್ಪ, ಹುಚ್ಚೇಗೌಡ್ರು, ಅನಂತರಾಜು, ಲಕ್ಷ್ಮಯ್ಯ, ಬಲರಾಂ, ಸೂರ್ಯಪ್ರಕಾಶ್, ಪುಟ್ಟಲಕ್ಷ್ಮಮ್ಮ, ಗುಬ್ಬಿ ನಂಜೇಗೌಡರು, ವೈ.ಟಿ.ರಾಜೇಂದ್ರ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *