ತುಮಕೂರು : ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿಯನ್ನು ಕಾನೂನು ಕಾನೂನು ಹೋರಾಟದ ಮೂಲಕ ಕಾಂಗ್ರೆಸ್ ಪಕ್ಷ ಬಿಡಿಸಿಕೊಳ್ಳಲಿದೆ ಎಂದು ಗೃಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹೇಳಿದರು.
ಅವರು ಇಂದು ರಿಂಗ್ ರಸ್ತೆಯಲ್ಲಿ ಕಾಂಗ್ರೆಸ್ಸಿನ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತುಮಕೂರಿನ ಜಿಲ್ಲಾ ಜೆಡಿಎಸ್ ಕಚೇರಿ ಮೂಲತಹ ಕಾಂಗ್ರೆಸ್ ಕಚೇರಿಯಾಗಿದ್ದು, ಈಗಾಗಲೇ ಅದಕ್ಕೆ ಪೂರಕವಾದ ದಾಖಲೆಗಳನ್ನು ಸಂಗ್ರಹಿಸಿದ್ದು, ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದು, ಕಾನೂನು ಹೋರಾಟದ ಮೂಲಕ ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್ ಪಕ್ಷವು ಬಿಡಿಸಿಕೊಳ್ಳಲಿದೆ ಎಂದು ಮಾನ್ಯ ಸಚಿವರು ಹೇಳಿದರು.
ಬೆಂಗಳೂರು ಜೆಡಿಎಸ್ ಕಛೇರಿಯನ್ನು ಸಹ ಕಾಂಗ್ರೆಸ್ ಪಕ್ಷ ಬಿಡಿಸಿಕೊಂಡಿದ್ದು, ದೇವರಗೌಡರಿಂದಲೇ ಕೀಯನ್ನು ಪಡೆದುಕೊಂಡಿದ್ದೆವು ಎಂದು ಹೇಳಿದರು.