ಸಜ್ಜನ ರಾಜಕಾರಣಿ ರೆಡ್ಡಿಚಿನ್ನಲ್ಲಪ್ಪ ನಿಧನ

ತುಮಕೂರು ನಗರಸಭೆಯ ಮಾಜಿ ಅಧ್ಯಕ್ಷರಾದ ರೆಡ್ಡಿ ಚಿನ್ನಯಲ್ಲಪ್ಪ (74ವರ್ಷ) ಅವರು ಆಗಸ್ಟ್ 12ರ ಸೋಮವಾರ ನಿಧನ ಹೊಂದಿದ್ದಾರೆ.

ರೆಡ್ಡಿ ಚಿನ್ನಯಲ್ಲಪ್ಪ ಅವರು ತುಮಕೂರು ನಗರಸಭೆಯ ಅಧ್ಯಕ್ಷರಾಗಿ ಮತ್ತು ತುಮಕೂರು ಟೂಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು.

ಮೈಕ್ರೋಸ್ಕೋಪಿಕ್ ಜಾತಿಗೆ ಸೇರಿದವರಾಗಿದ್ದ ರೆಡ್ಡಿ ಚಿನ್ನಯಲ್ಲಪ್ಪನವರು ಪ್ರಾರಂಭದಿಂದ ಕೊನೆಯ ತನಕವೂ ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದು ದುಡಿದವರು.

ಸಾಮಾಜಿಕ ಮತ್ತು ರಾಜಕೀಯವಾಗಿ ತುಂಬಾ ಶ್ರಮದಿಂದ ಮೇಲೆ ಬಂದವರು.

ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ಒಂದು ಚಾಪನ್ನು ಮೂಡಿಸಿಕೊಂಡಿದ್ದರು.

ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ರೆಡ್ಡಿ ಚೆನ್ನಯಲಪ್ಪನವರ ನಿಧನದಿಂದ ತುಮಕೂರು ಒಬ್ಬ ಸಜ್ಜನ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು,  ಬೆಂಗಳೂರಿನ   ಕಿರಿಯ ಪುತ್ರಿ ಮನೆಯಲ್ಲಿ ಜುಲೈ.29ರಂದು ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟುಬಿದ್ದಿತ್ತು. ತಕ್ಷಣ ಅವರನ್ನು  ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 8 ಗಂಟೆಯಲ್ಲಿ ನಿಧನ ಹೊಂದಿದ್ದಾರೆ.. ಅಂತಿಮ ದರ್ಶನವನ್ನು ಆಗಸ್ಟ್ 13 ರ ಮಂಗಳವಾರ ಬೆಳಗ್ಗೆ ಹನುಮಂತಪುರ ಬೈಪಾಸ್ ರಸ್ತೆಯ ಮೃತರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕರಾಗಿ ಬೆಳದಿದ್ದ ರೆಡ್ಡಿ ಚಿನ್ನಯಲ್ಲಪ್ಪ ಮಾಜಿ ಲೋಕಸಭಾ ಸದಸ್ಯ ಕೆ.ಲಕ್ಕಪ್ಪ ಗರಡಿಯಲ್ಲಿ ಬೆಳೆದು ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿದ್ದರು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ,ನಂತರ  1983ರಲ್ಲಿ ತುಮಕೂರಿನ ಶ್ರೀರಾಮನಗರ ವಾರ್ಡ್‌ನಿಂದ ನಗರಸಭೆ ಸದಸ್ಯರಾಗಿ, 1984ರಲ್ಲಿ ನಗರಸಭಾ ಅಧ್ಯಕ್ಷರಾದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ರೆಡ್ಡಿ ಚಿನ್ನಯಲ್ಲಪ್ಪ 2000ದಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿದ್ದರು. ಇತ್ತೀಚೆಗೆ ಪಕ್ಷ ಅವರನ್ನು ಕಡೆಗಣಿಸಿದ್ದರಿಂದ ರಾಜಕಾರಣದಿಂದ ದೂರವೆ ಉಳಿದಿದ್ದರು.
ಕೊನೆಯತನಕ ಕಾಂಗ್ರೆಸ್ ಪಕ್ಷದ ಕಟ್ಟಾಳುವಾಗಿದ್ದರು.

Leave a Reply

Your email address will not be published. Required fields are marked *