ತುಮಕೂರು : ತುಮಕೂರು ನಗರ ಪೊಲೀಸ್ ಠಾಣೆಯ ಸಿಪಿಐ ದಿನೇಶ್ ಕುಮಾರ್ ಬಿ.ಎಸ್.ಅವರನ್ನು ಕೊಡಗು ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿದ್ದ ದಿನೇಶ್ ಕುಮಾರ್ ಅವರು ವಕೀಲರು, ಪತ್ರಕರ್ತರು, ರೈತರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಕೇಸು ದಾಖಲಿಸುವ ಮೂಲಕ ಸದಾ ಸದ್ದು ಮತ್ತು ಸುದ್ದಿ ಮಾಡುತ್ತಿದ್ದ ಅವರನ್ನು ಕೊಡಗು ಜಿಲ್ಲೆಯ ಕುಶಾಲ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮಾರ್ಚ್ 24ರಂದೇ ವರ್ಗಾವಣೆಯ ಆದೇಶವಾಗಿದ್ದು ಯುಗಾದಿ ಕೊಡುಗೆಯಾಗಿ ಮಾರ್ಚ್ ಕೊನೆಯ ದಿನ ಆದೇಶ ಹೊರ ಬಿದ್ದಿದೆ.

ಇವರ ಸ್ಥಳಕ್ಕೆ ಇನ್ನೂ ಯಾರನ್ನು ನೇಮಕಾತಿ ಮಾಡಿಲ್ಲ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆ ಆಯೋಜಿಸಿದ್ದ ನಾಟಕದಲ್ಲಿ ದುರ್ಯೋಧನನ ಪಾತ್ರ ಮಾಡಿದ್ದ ದಿನೇಶ್‍ಕುಮಾರ್, ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳಿಂದ ದೊಡ್ಡ ದೊಡ್ಡ ಹಾರಗಳೊಂದಿಗೆ ಆಚರಣೆ ಮಾಡಿಕೊಂಡಿದ್ದರು.