ತುಮಕೂರು: 6 ತಿಂಗಳ ಮೇಯರ್ ಆಗಿ ಪ್ರಭಾವತಿ, ಉಪ ಮೇಯರ್ ಆಗಿ ಟಿ.ಕೆ.ನರಸಿಂಹಮೂರ್ತಿ.

ತುಮಕೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಕಸರತ್ತು ನಡೆದು ಮಹಾನಗರ ಪಾಲಿಕೆಗೆ 6 ತಿಗಳ ಮೇಯರ್ ಆಗಿ ಎಂ. ಪ್ರಭಾವತಿ ಹಾಗೂ ಉಪ ಮೇಯರ್ ಆಗಿ ಟಿ.ಕೆ.ನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾದರು.

ಮಹಾನಗರ ಪಾಲಿಕೆಯ ಸಭಾಂಗಣದಲ್ಲಿಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾ ಅಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಪಾಲಿಕೆಯ 24ನೇ ಅವಧಿಯ ಚುನಾವಣೆಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಆಯ್ಕೆಯಾದವರನ್ನು ಘೋಷಿಸಿದರು.

ಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ನಡೆಸಿ ಉಪಮೇಯರ್ ಸ್ಥಾನಕ್ಕೆ ಹೆಚ್. ಮಲ್ಲಿಕಾರ್ಜುನಯ್ಯ ಹಾಗೂ ಟಿ.ಕೆ. ನರಸಿಂಹಮೂರ್ತಿ ಅವರು ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರ ನಾಮಪತ್ರಗಳ ಪರಿಶೀಲಿಸಿದ ಚುನಾವಣಾಧಿಕಾರಿಗಳು, ಇಬ್ಬರ ನಾಮಪತ್ರಗಳೂ ಸಹ ಸಿಂಧುವಾಗಿವೆ ಎಂದು ಘೋಷಿಸಿದರು.

ನಂತರ ನಾಮಪತ್ರ ಹಿಂಪಡೆಯಲು 10 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಹೆಚ್. ಮಲ್ಲಿಕಾರ್ಜುನಯ್ಯ ಅವರು ತಮ್ಮ ನಾಮಪತ್ರವನ್ನು ಹಿಂಪಡೆದರು. ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದು ಅವಿರೋಧವಾಗಿ ಆಯ್ಕೆಯಾದ ಟಿ.ಕೆ.ನರಸಿಂಹಮೂರ್ತಿ ಅವರನ್ನು ಉಪಮೇಯರ್ ಆಗಿ ಘೋಷಿಸಲಾಯಿತು.

ಮೇಯರ್ ಸ್ಥಾನಕ್ಕೆ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಇದ್ದುದರಿಂದ ಅವಿರೋಧವಾಗಿ ಎಂ. ಪ್ರಭಾವತಿಸುಧೀಶ್ವರ್ ಅವರು ಮೇಯರ್ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾತಿ ಬಂದಿದ್ದರಿಂದ ಕಾಂಗ್ರೆಸ್‍ನ ಪ್ರಭಾವತಿ ಸುಧೀಶ್ವರ ಮತ್ತು ರೂಪಶ್ರೀ ನಡೆವೆ ಮೇಯರ್ ಸ್ಥಾನಕ್ಕೆ ಪ್ರಬಲ ಪೈಪೋಟಿ ಇದ್ದುದರಿಂದ ಇಬ್ಬರಿಗೂ ಆರಾರು ತಿಂಗಳ ಅವಧಿಗೆ ಮೇಯರ್ ಆಗಳು ಅವಕಾಶ ಕಲ್ಪಿಸುವ ಒಪ್ಪಂದದ ಮೇಲೆ ಮೊದಲ ಅವಧಿ 6ತಿಂಗಳಿಗೆ ಮೇಯರ್ ಆಗಿ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಆಯ್ಕೆಯಾಗಿದ್ದಾರೆ.
ಒಟ್ಟು 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 10, ಜೆಡಿಎಸ್10 ಮತ್ತು 3ಮಂದಿ ಪಕ್ಷೇತರ ಸದಸ್ಯರುಗಳಿದ್ದಾರೆ.

ತುಮಕೂರು ನಗರದಲ್ಲಿ ಶಾಸಕರು ಮತ್ತು ಸಂಸದರು ಬಿಜೆಪಿ ಪಕ್ಷದವರಿದ್ದರು ಪಾಲಿಕೆಯ ಗದ್ದುಗೆಯನ್ನು ಹಿಡಿಯಲು ಸಾಧ್ಯವಾಗಿಲ್ಲ.
ಮೇಯರ್ ಮತ್ತು ಉಪಮೇಯರ್ ಅವಧಿ 6ತಿಂಗಳಿಗೆ ಮಾತ್ರ ಎರಡೂ ಪಕ್ಷಗಳು ಒಪ್ಪಂದ ಮಾಡಿಕೊಂಡಿದ್ದಾರನ್ನಲಾಗಿದೆ, ಆರು ತಿಂಗಳ ನಂತರ ಯಾವ ಬೆಳವಣಿಗೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *