ಜುಲೈ 13,14, ರಾಜ್ಯಮಟ್ಟದ ಮಾಧ್ಯಮ “ಸಂಭ್ರಮ-2023”

ತುಮಕೂರು: ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಜುಲೈ 13 ಮತ್ತು 14ರಂದು ಎರಡು ದಿನಗಳ ರಾಜ್ಯಮಟ್ಟದ ಮಾಧ್ಯಮ ಹಬ್ಬ “ಸಂಭ್ರಮ-2023” ಆಯೋಜಿಸಲಾಗಿದೆ ಎಂದು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್. ರವಿಪ್ರಕಾಶ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡ ಅವರು, ಎರಡು ದಿನಗಳ ರಾಜ್ಯ ಮಟ್ಟದ ಮಾಧ್ಯಮೋತ್ಸವ ಸಂಭ್ರಮ-2023 ಕಾರ್ಯಕ್ರಮವು ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿ.ಜಿ. ಸೆಮಿನಾರ್ ಹಾಲ್‍ನಲ್ಲಿ ಜರುಗಲಿದೆ. ಕಾರ್ಯಕ್ರಮವನ್ನು ಜುಲೈ 13 ರಂದು ಬೆಳಗ್ಗೆ 10.30ಕ್ಕೆ ಸವ್ಯಸಾಚಿ ಡಾ.ಜಿ. ಪರಮೇಶ್ವರ, ಕುಲಾಧಿಪತಿಗಳು, ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ಮತ್ತು ಮಾನ್ಯ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶ್ರೀ ಸುದರ್ಶನ್ ಚನ್ನಂಗಿಹಳ್ಳಿ, ಟಿವಿ9 ನಿರೂಪಕರಾದ ಶ್ರೀಮತಿ ಸುಕನ್ಯ, ಸಾಹೇ ವಿವಿ ಉಪ ಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ಹಿರಿಯ ಪತ್ರಕರ್ತರಾದ ಎಸ್ ನಾಗಣ್ಣ, ತುಮಕೂರು ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಪ್ರಭಾವತಿ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಚಿ.ನೀ. ಪುರುಷೋತ್ತಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕೊಡುಗೆ ನೀಡಿದ ಜಿಲ್ಲೆಯ ಸುಮಾರು 27 ಹಿರಿಯ ಪತ್ರಕರ್ತರಿಗೆ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಮಾಧ್ಯಮೋತ್ಸವದ ಎರಡನೇ ದಿನದ ಕಾರ್ಯಕ್ರಮವು ಜುಲೈ 14ರಂದು ಬೆಳಗ್ಗೆ 10.30ಕ್ಕೆ ಪಿ.ಜಿ ಸೆಮಿನಾರ್ ಹಾಲ್‍ನಲ್ಲಿ ಜರುಗಲಿದ್ದು, ಶ್ರೀ ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮತ್ತು ಕಾರ್ಡಿಯಾಕ್ ಫ್ರಾಂಟಿಡಾದ ನಿರ್ದೇಶಕರಾದ ಡಾ ತಮೀಮ್ ಅಹಮದ್ ಅವರು ”ಮಾಧ್ಯಮ ಮತ್ತು ಆರೋಗ್ಯ ಸಂವಹನ” ಕುರಿತು ವಿಚಾರ ಮಂಡಿಸಲಿದ್ದಾರೆ. ಸಾಹೇ ವಿವಿಯ ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪೂರ್‍ವಾಡ್, ಪತ್ರಕರ್ತರಾದ ಮಧುಕರ್, ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶಶಿಧರ್ ದೋಣಿಹಕ್ಲು, ತುಮಕೂರು ಮಹಾನಗರ ಪಾಲಿಕೆಯ ಸದಸ್ಯರಾದ ಜೆ.ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಹಿರಿಯ ವಿದ್ಯಾರ್ಥಿಗಳನ್ನು ಒಳಗೊಂಡ ಹಳೆಯ ವಿದ್ಯಾರ್ಥಿಗಳ ಸಮಾಗಮ ಸಭೆ ನಡೆಯಲಿದೆ. ಮಧ್ಯಾಹ್ನ 3ಗಂಟೆಗೆ ಎರಡು ದಿನಗಳ ಮಾಧ್ಯಮೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆರವೇರಲಿದ್ದು, ಇದೇ ಸಂದರ್ಭದಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕರಾದ ಡಾ.ಬಿ.ಟಿ. ಮುದ್ದೇಶ್ ಮಾತನಾಡಿ, ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರಾದ ಬಿ.ಕೆ. ಗಣೇಶ, ಪಾವಗಡ ಶಾಸಕರಾದ ಎಚ್ ವಿ ವೆಂಕಟೇಶ್, ಲೇಖಕರಾದ ಡಾ ಅಮ್ಮಸಂಸ್ರ ಸುರೇಶ್, ಸ್ನೇಹ ಮನೋವಿಕಾಸ ಕೇಂದ್ರದ ಡಾ. ಲೋಕೇಶ್ ಬಾಬು, ತುಮುಲ್ ಅಧ್ಯಕ್ಷರಾದ ಮಹಲಿಂಗಯ್ಯ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಗಿರೀಶ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಂ, ಜಿಲ್ಲಾ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ರಾಯಸಂದ್ರ ರವಿಕುಮಾರ್, ಸ್ಫೂರ್ತಿ ಡೆವಲಪರ್ಸ್ ಮಾಲೀಕರಾದ ಎಸ್ ಪಿ ಚಿದಾನಂದ್, ಎಸ್‍ಎಸ್‍ಸಿಎಂಎಸ್ ಆಡಳಿತಾಧಿಕಾರಿ ಖಲಂದರ್ ಪಾಷ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಎರಡು ದಿನಗಳ ಮಾಧ್ಯಮ ಹಬ್ಬದ ಸಂಪೂರ್ಣ ವಿವರ ತಿಳಿಸಿಕೊಟ್ಟರು.

ಎರಡು ದಿನಗಳ ಮಾಧ್ಯಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗಾಗಿ ವರದಿಗಾರಿಕೆ, ಲೇಖನ ಬರವಣಿಗೆ, ರೇಡಿಯೋ ಜಾಕಿ, ಟೆಲಿವಿಷನ್ ಸುದ್ಧಿ ವಾಚನ ಸ್ಪರ್ಧೆಗಳು ಒಳಗೊಂಡಂತೆ ವಿವಿಧ 8 ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಈ ಎಲ್ಲಾ ಸ್ಪರ್ಧೆಗಳು ಪಿ.ಜಿ. ಬ್ಲಾಕ್‍ನಲ್ಲಿ ನಡೆಯಲಿವೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‍ಎಸ್‍ಸಿಎಂಎಸ್‍ನ ಆಡಳಿತಾಧಿಕಾರಿ ಖಲಂದರ್ ಪಾಷ, ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರ, ಜ್ಯೋತಿ ಸಿ, ಶ್ವೇತ ಎಂ.ಪಿ, ಹರೀಶ್‍ಕುಮಾರ್ ಬಿ.ಸಿ, ರವಿಕುಮಾರ್ ಸಿ.ಹೆಚ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *