ದ್ವಿಚಕ್ರ ವಾಹನ ಕಳ್ಳನ ಬಂಧನ, 30 ವಾಹನ ವಶ

ತುಮಕೂರು : ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿ ರೂ. 11,23,390 ರೂ ಬೆಲೆಯ ಒಟ್ಟು 30 ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ಹೊಸ ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2025ರ ಏಪ್ರಿಲ್ 20ರಂದು ಸುಮುಖ ಭಾರದ್ವಾಜ್ ಎಂಬುವವರು ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಗೆ ಹಾಜರಾಗಿ, ಏಪ್ರಿಲ್17ರಂದು ಬೆಳಿಗ್ಗೆ 8 ಗಂಟೆಯದಲ್ಲಿ ಬೆಂಗಳೂರಿಗೆ ಕೆಲಸಕ್ಕೆ ಹೋಗುವಾಗ ನಗರದ ರೈಲ್ವೆ ಸ್ಟೇಷನ್ ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಕೌಂಪೌಂಡ್ ಪಕ್ಕದಲ್ಲಿ ನನ್ನ ಎಂ-06 EW-6246 ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಹೋಗಿದ್ದು, ಸಾಯಂಕಾಲ ವಾಪಸ್ ಬಂದಾಗ ವಾಹನ ಇಲ್ಲದನ್ನು ಕಂಡು, ಕಳ್ಳತನವಾಗಿದೆ ಎಂದು ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಆಂಧ್ರಪ್ರದೇಶದ ಚಿತ್ತಪ್ಪಗಾರಿ ಆನಂದ್ ಎಂಬುವರನ್ನು ಬೆಂಗಳೂರಿನಲ್ಲಿ ಬಂಧಿಸಿ ಆರೋಪಿಯಿಂದ ರೂ. 11,23,390 ರೂ ಬೆಲೆಯ ಒಟ್ಟು 30 ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡಿದಿದ್ದಾರೆಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *