ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು : ಸಮಸ್ಯೆಗೆ ಸ್ಪಂದಿಸದ ಗುಬ್ಬಿ ತಹಶೀಲ್ದಾರ್ ಗೆ ತೀವ್ರ ತರಾಟೆ

ತುಮಕೂರು : ಸಮಸ್ಯೆಗಳನ್ನು ಹೊತ್ತು ವೃದ್ಧರು, ಅಂಗವಿಕಲರು ಲೋಕಾಯುಕ್ತರ ಬಳಿಗೆ ಬಂದಿದ್ದನ್ನು ನೋಡಿದರೆ ಅಧಿಕಾರಿ ವರ್ಗಗಳು ಇಂತಹವರ ಸಮಸ್ಯೆಗಳನ್ನು ಬಗೆಹರಿಸಲೂ ಅಸಹಾಯಕವಾಗಿದೆಯೇ ಎಂಬ ಪ್ರಶ್ನೆ ಅಲ್ಲಿ ಬಂದಿದ್ದವರನ್ನು ಕಾಡುತ್ತಿತ್ತು.

ಗುಬ್ಬಿ ಪೊಲೀಸ್ ಹಿಂಭಾಗ ಕೆರೆಯಲ್ಲಿ ವಾಸಿಸುತ್ತಿರುವ ಹಂದಿಜೋಗರಿಗೆ ಬೇರೆ ಕಡೆ ವಸತಿ ಕಲ್ಪಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಉಪಲೋಕಯುಕ್ತ ವೀರಪ್ಪ ಸೂಚಿಸಿದರು. ಶನಿವಾರ ಸಾಧ್ಯವಾದರೆ ಸ್ಥಳಕ್ಕೆ ಭೇಟಿ ನೀಡುವುದಾಗಿ ಉಪಲೋಕಾಯುಕ್ತರು ತಿಳಿಸಿದರು.

ಹಂದಿಜೋಗರಿಗೆ ವಸತಿ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮತ್ತು ರೈತರೊಬ್ಬರ ಜಮೀನಿಗೆ ದಾರಿ ಬಿಡಿಸಿ ಕೊಡುವಲ್ಲಿ ಕ್ರಮ ಕೈಗೊಳ್ಳದಿರುವ ಬಗ್ಗೆ ಉಪಲೋಕಯುಕ್ತ ವೀರಪ್ಪ ಅವರು ಗುಬ್ಬಿ ತಹಶೀಲ್ದಾರ್ ಆರತಿಯವರಿಗೆ ತೀರ್ವ ತರಾಟೆ ತೆಗದುಕೊಂಡು, ನಮ್ಮ ಬಳಿಯೇ ಅನುಚಿತವಾಗಿ ವರ್ತಿಸುವ ನೀವು ಸಾರ್ವಜನಿಕರ ಸಮಸ್ಯೆಗಳನ್ನು ಯಾವ ರೀತಿ ಬಗೆ ಹರಿಸುತ್ತೀರ, ಸ್ಪಂದಿಸುತ್ತೀರ, ಮೊದಲು ಮಾನವೀಯ ನೆಲೆಯೊಳಗೆ ಕೆಲಸ ಮಾಡುವಂತೆ ತಾಕೀತು ಮಾಡಿದರು.

ಒಂದು ಹಂತದಲ್ಲಿ ತಹಶೀಲ್ದಾರ್ ಆರತಿಯವರು ಉಪಲೋಕಯುಕ್ತರ ಜೊತೆಗೆ ವಾದಕ್ಕಿಳಿದ್ದು, ಉಪಲೋಕಯುಕ್ತರನ್ನು ಕೆರಳಿಸಿತ್ತು, ನಮಗೇ ಜೋರು ಧ್ವನಿಯಲ್ಲಿ ಮಾತನಾಡುವ ನೀವು ಜಿಲ್ಲಾಧಿಕಾರಿಗಳು ಸೂಚಿಸಿದರೂ ನೀವು ಕೆಲಸ ಮಾಡಿಲ್ಲವೆಂದರೆ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂದು ಪ್ರಶ್ನಿಸಿ, ಯಾರ ಹತ್ತಿರ ನೀವು ಮಾತನಾಡುತ್ತಿದ್ದೀರಿ ಎಂಬ ಅರಿವಿದೆಯೇ ಎಂದಾಗ ತಹಶೀಲ್ದಾರ್ ಪೇಚಿಗೆ ಸಿಲುಕಿ ಲೋಕಾಯುಕ್ತರ ಬಳಿ ಕ್ಷಮೆಯಾಚಿಸಿದರು.

ಬಹುತೇಕ ಕಂದಾಯ ಇಲಾಖೆಯ ಮೇಲೆಯೇ ಸಾಕಷ್ಟು ದೂರುಗಳು ಬಂದಿದ್ದು, ಸುಮಾರು 600ಕ್ಕೂ ಹೆಚ್ಚು ದೂರುಗಳು ಬಂದಿವೆ.

ತುರುವೇಕೆರೆ, ಗುಬ್ಬಿ ಶಿರಾ, ತುಮಕೂರು ತಾಲ್ಲಕಿನ ಕಂದಾಯ ಇಲಾಖೆಯ ದೂರುಗಳು ಬಂದಿವೆ.

Leave a Reply

Your email address will not be published. Required fields are marked *