ತುಮಕೂರು : ಕಳೆದ 40 ದಿನಗಳಿಂದ ತೆಂಗು ಬೆಳೆ ರೈತರು ನಡೆಸಲಾಗುತ್ತಿದ್ದ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಯಿತು. ರೈತರ ಹಿತರಕ್ಷಣೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ, ಕೊಬ್ಬರಿ ಬೆಳೆ ಕ್ವಿಂಟಾಲ್‍ಗೆ ರೂ. 15000/- ಕ್ಕೆ ಒತ್ತಾಯಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ನಡೆಸಲಾಗುತ್ತಿತ್ತು ಅದನ್ನು ಇಂದು ವಾಪಸ್ಸು ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರು ಧನಂಜಯ ಆರಾಧ್ಯ ತಿಳಿಸಿದ್ದಾರೆ.
ರೈತರುಗಳಾದ ನಾವುಗಳು ವಿವಿಧ ರೀತಿಯಲ್ಲಿ ಅಂದರೆ ಉಪವಾಸ ಸತ್ಯಾಗ್ರಹ, ಪಂಜಿನ ಮೇರವಣಿಗೆ, ಟ್ರಾಕ್ಟರ್ ರ್ಯಾಲಿ ಮತ್ತು ತುಮಕೂರು ನಗರ ಬಂದ್ ನೆಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನವನ್ನು ಸೆಳೆಯಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಜೊತೆಗೆ ಕೇಂದ್ರ ಸರ್ಕಾರ ಎಂ.ಎಸ್.ಪಿ ಬೆಲೆ ರೂ. 12,000/- ಜೊತೆಗೆ ರಾಜ್ಯ ಸರ್ಕಾರ 3,000/- ಪೆÇ್ರೀತ್ಸಾಹ ಧನ ನೀಡಲು ಆಗ್ರಹಿಸಿದರೂ, ರಾಜ್ಯ ಸರ್ಕಾರ ಕೇವಲ 1,500/- ಗಳ ಪೆÇ್ರೀತ್ಸಾಹ ಧನ ಹೆಚ್ಚಿಗೆ ನೀಡಿದ್ದು, ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಕೊಬ್ಬರಿ ಕ್ವಿಂಟಾಲ್‍ಗೆ 15,000/- ರೂ ನೀಡುವುದಾಗಿ ಹೇಳಿರುವ ಮಾತು ಹುಸಿಯಾಗಿಯೇ ಉಳಿದಿದೆ ಎಂದರು. ನಮಗೆ ಆಗಿರುವ ಅನ್ಯಾಯವನ್ನು ತೋರ್ಪಡಿಸುವ ನಿಟ್ಟಿನಲ್ಲಿ ನಾವು ಕಳೆದ 40 ದಿನಗಳಿಂದ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಿ ನಮ್ಮ 9 ಒತ್ತಾಯಗಳಲ್ಲಿ ಒಂದಾದ ಕೊಬ್ಬರಿ ಖರೀದಿ ಬಯೋಮೇಟ್ರಿಕ್ ನೊಂದಣಿ ಪ್ರಕ್ರಿಯೆ ನೊಂದಣಿಯನ್ನು ಸರ್ಕಾರ ನೇರವೆರಿದ್ದು, ಕೊಬ್ಬರಿ ಖರೀದಿ ನೊಂದಣಿ ಪ್ರಕ್ರಿಯೆಯಲ್ಲಿ ಮೋಸ ನೆಡೆದು ರೈತರಿಗೆ ಅನ್ಯಾಯವಾಗಿರುತ್ತದೆ ಎಂದರು. ಇದಕ್ಕೆ ರಾಜಕಾರಣಿಗಳು, ವರ್ತಕರು(ದಲ್ಲಾಳಿಗಳು) ಹೊಣೆಗಾರಿಯಾಗಿರುತ್ತಾರೆ ಎಂಬ ಆಕ್ರೋಷವನ್ನು ಹೊರ ಹಾಕಿದರು.
ಆದ ಪ್ರಯುಕ್ತ ಆಕ್ರಮ ನೊಂದಣಿಯನ್ನು ಗುರುತಿಸಿ ಸೂಕ್ತ ಕ್ರಮವಹಿಸಿ ತುರ್ತಾಗಿ ಕೊಬ್ಬರಿ ಖರೀದಿ(ನಾಪೇಡ್) ಪ್ರಕ್ರಿಯೆಯಲ್ಲಿ ತೊಡಗಬೇಕೆಂದು ಒತ್ತಾಯಿಸಿದೆ. ರಾಜ್ಯದ ಅಯವ್ಯಾಯ ರೈತರ ಕಾರ್ಮಿಕರ ದುಡಿಮೆಯಿಂದ ನಿರ್ಮಾಣವಾಗಿದ್ದು, ರಾಜ್ಯ ಆಯವ್ಯಯ ಬಜೆಟಿನ ಶೇ. 75% ರಷ್ಟು ಭಾಗ ರೈತಾಪಿ ವರ್ಗಕ್ಕೆ ಮೀಸಲಿಡಬೇಕೆಂದು ಪೆÇ್ರೀ. ಎಂ.ಡಿ ನಂಜುಂಡಸ್ವಾಮಿ ವಿಶ್ವರೈತ ಚೇತನ ಇವರು ಸರ್ಕಾರಗಳಿಗೆ ಒತ್ತಾಯಿಸುತ್ತ ಬಂದಿದ್ದು, ಆದರೆ ಈ ರೈತ ವಿರೋಧಿ ಸರ್ಕಾರ ಕೇವಲ 15% ರಿಂದ 20% ಭಾಗವನ್ನು ರೈತಾಪಿ ವರ್ಗಕ್ಕೆ ಮೀಸಲಿಟ್ಟಿದ್ದು, ಈ ನಡೆ ಖಂಡನಿಯವೆಂದು ತಿಳಿಸಿದರು. ಈ ಎಲ್ಲಾ ವಿಚಾರಗಳಿಂದ ಬೇಸತ್ತು 40 ದಿನಗಳ ಅಹೋರಾತ್ರಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ರೈತರ ಉಳಿವಿಗಾಗಿ ಉಗ್ರ ಚಳುವಳಿ ಪ್ರಾರಂಭಿಸಲು ತೆಂಗು ಬೆಳೆ
ರೈತರಿಗೆ ಕರೆನೀಡಿ ಅತೀ ಶೀಘ್ರದಲ್ಲಿಯೇ ಚಳುವಳಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಜೊತೆಗೆ ನಮ್ಮ ಸುದೀರ್ಘ 40 ದಿನ ನಡೆಸಿದ ರೈತ ಚಳುವಳಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಂತರಾಯಪ್ಪ, ಸಣ್ಣ ಧರ್ಮೇಗೌಡ, ನಾಗಣ್ಣ, ಬಾಳೇಗೌಡ, ಚಂದ್ರೇಗೌಡ, ಮಧುಸೂದನ್, ಮೊಹಮ್ಮದ್ ಗೌಸ್, ಉದಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.