ತುಮಕೂರು :ಭಾರತದ ಉಕ್ಕಿನ ಮನುಷ್ಯ ಎಂದು ಕರಯಲ್ಪಡುವ ಬಿಜೆಪಿ ಅಧಿಕಾರಕ್ಕೆ ಬರಲು ತಮ್ಮ ವಯಸ್ಸಿನುದ್ದಕ್ಕೂ ರಥಯಾತ್ರೆ ಮಾಡಿದ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಬದುಕಿರುವಾಗಲೇ ಕೇಂದ್ರ ಸಚಿವ ವಿ.ಸೋಮಣ್ಣ ಶ್ರದ್ಧಾಂಜಲಿ ಅರ್ಪಿಸಿ, ಮೌನಾಚರಣೆ ಮಾಡಿದ ಘಟನೆ ಇಂದು ಗುಬ್ಬಿಯಲ್ಲಿ ನಡೆದಿದೆ.
ಯಾವ ವ್ಯಕ್ತಿ ಬಿಜೆಪಿ ಕಟ್ಟಿ ಬೆಳಸಿ ಅಧಿಕಾರಕ್ಕೆ ತಂದರೋ ಆ ವ್ಯಕ್ತಿ ಎಲ್.ಕೆ.ಅಡ್ವಾನಿಯನ್ನು ಕೊನೆಗೆ ಈ ದೇಶದ ಪ್ರಧಾನಿಯಾಗದಂತೆ ನೋಡಿಕೊಂಡ ಒಂದು ವರ್ಗ, ಇಂದು ಅದೇ ವರ್ಗ ಅಡ್ವಾಣಿ ಬದುಕಿರುವಾಗಲೇ ಸತ್ತಿದ್ದಾರೆಂದು ಕೇಂದ್ರ ಸಚಿವ ವಿ.ಸೋಮಣ್ಣ ಶ್ರದ್ಧಾಂಜಲಿ ಅರ್ಪಿಸಿದ್ದು ನಿಜಕ್ಕೂ ಅಡ್ವಾಣಿಗೆ ಮಾಡಿದ ಅಪಮಾನ ಎನ್ನಲಾಗುತ್ತಿದೆ.
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿಯವರು ಇತ್ತೀಚೆಗೆಯಷ್ಟೇ ಅನಾರೋಗ್ಯಕ್ಕೀಡಾಗಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕೇಂದ್ರ ಸಚಿವ ವಿ.ಸೋಮಣ್ಣ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಎಡವಟ್ಟು ಮಾಡಿಕೊಂಡಿದ್ದು, ಬದುಕಿರುವ ಅಡ್ವಾಣಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಪ್ರಸಂಗ ಗುಬ್ಬಿಯಲ್ಲಿ ಜುಲೈ 6ರ ಶನಿವಾರ ಜೆಡಿಎಸ್-ಬಿಜೆಪಿ ವಿ.ಸೋಮಣ್ಣನವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಹೊರವಲಯದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಅತಿಥಿಯಾಗಿ ಭಾಗವಹಿಸಿದ್ದರು.
ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿರುವ ನಡುವೆಯೇ, “ಇದೀಗ ತಾನೇ ಮಾಹಿತಿ ಬಂದಿದೆ. ಅಡ್ವಾಣಿಯವರು ಸಾವನ್ನಪ್ಪಿದ್ದಾರೆ. ನಾನು ದೆಹಲಿಗೆ ಹೋಗಬೇಕಿದೆ. ಈ ವಿಚಾರಕ್ಕೆ ದೆಹಲಿಗೆ ತೆರಳಬೇಕಾಗಿರುವ ಕಾರಣ ಕಾರ್ಯಕ್ರಮ ಮತ್ತೊಮ್ಮೆ ಮಾಡೋಣ. ಎಲ್ಲರೂ ಎದ್ದು ನಿಂತು ಮೌನಾಚರಣೆ ಮಾಡಿ” ಎಂದು ಬಹಿರಂಗ ಸಭೆಯಲ್ಲಿ ಸೋಮಣ್ಣ ಮನವಿ ಮಾಡಿಕೊಂಡಿದ್ದಾರೆ.
ಇದರಿಂದ ವಿ.ಸೋಮಣ್ಣ ನಗೆ ಪಾಟಿಲಿಗೆ ಗುರಿಯಾಗಿದ್ದಾರೆನ್ನಲಾಗುತ್ತಿದೆ. ಸೋಮಣ್ಣನವರಿಗೆ ಏನಾಗಿದೆ, ಬೆಳಿಗ್ಗೆ ಪತ್ರಕರ್ತರ ಮೇಲೆ ಗರಂ ಆಗಿದ್ದ ಅವರು, ಸಂಜೆಯ ವೇಳೆಗೆ ಬಿಜೆಪಿ ಕಟ್ಟಿ ಬೆಳಸಿದ ಇಂದು ಸೋಮಣ್ಣ ಮಂತ್ರಿಯಾಗಲು ಕಾರಣರಾದ ಅಡ್ವಾನಿಯವರನ್ನೇ ಸತ್ತಿದ್ದಾರೆಂದು ಶ್ರದ್ಧಾಂಜಲಿ ಅರ್ಪಿಸಿರುವುದು ನಗೆಪಾಟಲಿಗೆ ಮತ್ತು ದೇಶದ ನಾಯಕರೊಬ್ಬರು ಬದುಕಿರುವಾಗಲೇ ಶ್ರದ್ಧಾಂಜಲಿ ಅರ್ಪಿಸಿರುವುದು ಅವಮಾನಕ್ಕೀಡಾದಂತಾಗಿದೆ.