ತುಮಕೂರು:ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಒದಗಿಸುವುದು ದೊಡ್ಡ ಸವಾಲಿನ ಕೆಲಸವಾಗಿದ್ದು,ಆರೋಗ್ಯ ಕ್ಷೇತ್ರದಲ್ಲಿ ಅರ್ಟಿಪಿಸಿಯಲ್ ಇಂಟಲಿಜೆಂಟ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಕೆ ಮಾಡುವ ಮೂಲಕ ಸವಾಲನ್ನು ಮೆಟ್ಟಿನಿಲ್ಲಲು ಸಾಧ್ಯ ಎಂದು ಸಿಂಗಾಪುರದ ಬಯೋ ಇರ್ಫಾಮೆಟಿಕ್ ಇನ್ಸಿಟ್ಯೂಟ್‍ನ ಪ್ರಧಾನ ವಿಜ್ಞಾನಿ ಡಾ.ಭಾನುಪ್ರಕಾಶ್ ತಿಳಿಸಿದ್ದಾರೆ.
ನಗರದ ಎಸ್.ಐ.ಟಿಯ ಬಿರ್ಲಾ ಸಭಾಂಗಣದಲ್ಲಿ ಎಲೆಕ್ಟ್ರಿಕಲ್ ಸೈನ್ಸ್ ವತಿಯಿಂದ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಟ್ಟದ ಎರಡನೇ ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷನ್ ಇನ್ ಎಲೆಕ್ಟ್ರಿಕಲ್ ಸೈನ್ಸ್-2024 ಉದ್ಘಾಟಿಸಿ ಮಾತನಾಡುತಿದ್ದ ಅವರು,ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈಗ ಕಾಯಿಲೆಗಳನ್ನು ಗುಣಪಡಿಸುವ ಕೆಲಸ ನಡೆಯುತ್ತಿದೆ.ಆದರೆ ಇಂಜಿನಿಯ ರಿಂಗ್ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರ ಎರಡು ಒಗ್ಗೂಡಿ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿಕೊಂಡು, ಖಾಯಿಲೆಯಬರದಂತೆ ತಡೆಯುವ ವಿಧಾನವನ್ನು ಸಂಶೋಧಿಸಲು ಸಾಧ್ಯ.ಇದರಿಂದ ಖಾಯಿಲೆಯ ತಪ್ಪು ಗ್ರಹಿಕೆ ಮತ್ತು ತಪ್ಪು ಚಿಕಿತ್ಸೆ ಎರಡನ್ನು ತಡೆಗಟ್ಟಬಹುದು ಎಂದರು.
ಭಾರತದಂತಹ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಮನುಷ್ಯನ ಜೀವಿತಾವಧಿ ತಂತ್ರಜ್ಞಾನದ ಫಲವಾಗಿ ಹೆಚ್ಚಳ ವಾಗಿದ್ದರೂ,ಅದು ಆರೋಗ್ಯಕರ ಜೀವಿತಾವಧಿಯೇ ಎಂಬುದನ್ನು ನಾವು ಅವಲೋಕಿಸಬೇಕಾಗಿದೆ.ಅತಿಯಾದ ಒತ್ತಡ ಮತ್ತು ಜೀವನ ಶೈಲಿಯಿಂದಾಗಿ ಶೇ20ರಷ್ಟು ಜನ ಭಾರತೀಯರು ಮಾನಸಿಕ ರೋಗಗಳಿಗೆ ತುತ್ತಾಗುತಿದ್ದಾರೆ.ಇದರಲ್ಲಿ ಶೇ50ರಷ್ಟು ಮಂದಿ ಎಂ.ಎನ್.ಸಿ. ಕಂಪನಿಯಗಳಲ್ಲಿ ಕೆಲಸ ಮಾಡುವವರು.ಇವರು ಒತ್ತಡ ಮತ್ತು ಮಾನಸಿಕ ಖಿನ್ನತೆ ಯಿಂದ ಬಳಲು ತಿದ್ದಾರೆ.ಇವರ ಒತ್ತಡದ ಬದುಕು ನಿವಾರಣೆಯಾಗಬೇಕಾದರೆ ಅರ್ಟಿಪಿಷಿಯಲ್ ಇಂಟಲ್‍ಜೆನ್ಸ್‍ನ ಬಳಕೆ ಅನಿವಾರ್ಯ ವಾಗಿದೆ.ಒಳ್ಳೆಯ ಆಹಾರ, ಜೀವನ ಶೈಲಿ ಅಳವಡಿಸಿಕೊಂಡ 60 ವರ್ಷದ ಮನುಷ್ಯನ ಮೆದುಳು 30 ವರ್ಷದ ಯವಕರ ರೀತಿ ಆಲೋಚಿಸಿದರೆ,ಜಂಕ್‍ಪುಡ್,ಒತ್ತಡದ ಜೀವನ ಇರುವ 30 ವರ್ಷದ ಯುವಕನ ಮೆದಳು 60ವರ್ಷದ ವಯೋವೃದ್ದರಂತೆ ಆಲೋಚಿಸುತ್ತಿರುವುದನ್ನು ಹಲವು ಸಂಶೋಧನಗಳ ಮೂಲಕ ತಿಳಿದು ಬಂದಿದೆ ಎಂದು ಡಾ.ಭಾನುಪ್ರಕಾಶ್ ತಿಳಿಸಿದರು.
ಮರಣ ಪ್ರಮಾಣ ಕಡಿಮೆ,ಅಂಗವಿಕಲತೆ ಕಡಿಮೆ ಮಾಡುವುದು ಹಾಗೂ ರೋಗಮುಕ್ತ ಜೀವನ ಆರೋಗ್ಯ ಕ್ಷೇತ್ರದ ಬಹುಮುಖ್ಯ ಗುರಿಗಳಾಗಿವೆ.ರೋಗವನ್ನು ಗುಣಪಡಿಸುವ ನಿಟ್ಟಿನಲ್ಲಿ ಔಷಧಿಗಳಿಗೆ ಗುಲಾಮರಾಗುತಿದ್ದೇವೆ.ಹಾಗಾಗಿ ರೋಗವೇ ಬರದಂತೆ ತಡೆಯುವ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಲು ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗ ಬೇಕಿದೆ.ಕೈಗಾರಿಕಾ ಕಾಂತ್ರಿ ಹಿಂದಿನ ನೂರು ವರ್ಷಗಳಿಗೆ ಹೊಲಿಕೆ ಮಾಡಿದರೆ ಬಹುಬೇಗ ನಡೆಯುತ್ತಿದೆ. ಬದಲಾವಣೆಗೆ ತಕ್ಕಂತೆ ನಾವುಗಳು ಬದಲಾಗಬೇಕು.ಇದು ತಂತ್ರಜ್ಞಾನದ ಅಳವಡಿಕೆಯಿಂದ ಸಾಧ್ಯ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ,ತಾಂತ್ರಿಕ ಶಿಕ್ಷಣ ಪಡೆದ ಯುವಜನರು ಮತ್ತು ಉದ್ದಿಮೆದಾರರು ತಮ್ಮಲ್ಲಿರುವ ಹೊಸ ಐಡಿಯಾಗಳನ್ನು ಹಿರಿಯರ ತಜ್ಞರ ಸಮ್ಮುಖದಲ್ಲಿ ಹಂಚಿಕೆ ಮಾಡಿಕೊಳ್ಳಲು ಸ್ಮಾರ್ಟ್ ಸಿಸ್ಟಮ್ ಫಾರ್ ಅಪ್ಲಿಕೇಷನ್ ಇನ್ ಎಲೆಕ್ಟ್ರಿಕಲ್ ಸೈನ್ಸ್-2024 ಒಂದು ಒಳ್ಳೆಯ ವೇದಿಕೆಯಾಗಿದೆ.ಕೈಗಾರಿಕಾ ಕ್ಷೇತ್ರದ ತಜ್ಞರು ಮತ್ತು ಶೈಕ್ಷಣಿಕಾ ಕ್ಷೇತ್ರದ ತಜ್ಞರ ಜ್ಞಾನದ ವಿನಿಮಯ ವೇದಿಕೆ ಇದಾಗಿದೆ.ಜಗತ್ತಿಗೆ ಹೊಸ ಅವಿಷ್ಕಾರದ ಬಗ್ಗೆ ತಿಳುವಳಿಕೆ ಮಾಡುವುದರ ಜೊತೆಗೆ, ತಮಲ್ಲಿರುವ ಇನೋವೆಟಿವ್ ಐಡಿಯಾವನ್ನು ಹಂಚಿಕೊಳ್ಳುವ ಅವಕಾಶವನ್ನು ಸಿದ್ದಗಂಗಾ ಕಳೆದ ಎರಡು ವರ್ಷಗಳಿಂದ ಮಾಡುತ್ತಾ ಬಂದಿದೆ. ಇದಕ್ಕಾಗಿ ಆಯೋಜಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇಂಜಿನಿಯರಿಂಗ್ ಎಂಬುದು ಶಿಸ್ತು ಬದ್ದ ಶಿಕ್ಷಣ.ಸಮಾಜದ ಆಗು ಹೋಗುಗಳನ್ನು ಅರಿತು, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ತಾವು ಕಲಿತ ಜ್ಞಾನವನ್ನು ಬಳಕೆ ಮಾಡಬೇಕಿದೆ.ಹವಾಮಾನ ವೈಪರಿತ್ಯ, ಹಸಿವು, ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಆಲೋಚಿಸಬೇಕಾಗಿದೆ. ಇದು ನಿಮ್ಮ ವೃತ್ತಿ ಜೀವನ ಉನ್ನತ ಮಟ್ಟಕ್ಕೇರಲು ಸಹಾಯಕವಾಗಲಿದೆ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಐ.ಟಿ. ನಿರ್ದೇಶಕರಾದ ಡಾ.ಎಂ.ಎನ್.ಚನ್ನಬಸಪ್ಪ ವಹಿಸಿದ್ದರು. ಬೆಂಗಳೂರಿನ ಇಐ ಕ್ಯುಮಿನಾ ಟೆಕ್ನಾಲಜಿಸ್‍ನ ಅಧ್ಯಕ್ಷರಾದ ಶ್ರೀಮತಿ ಚೇತನಾ ಮೋಹನ್ ಅವರು ಟೆಕ್ನಿಷಿಯಂ-2024ಗೆ ಸಂಬಂಧಿಸಿದ ಹವ್ಯಾಸಿ ಪ್ರಾಜೆಕ್ಟ್ ಪ್ರದರ್ಶನ ಉದ್ಘಾಟಿಸಿ ತಾಂತ್ರಿಕ ಭಾಷಣ ಮಾಡಿದರು.ಎಸ್.ಐ.ಟಿ. ಸಿಇಓ ಡಾ.ಶಿವಕುಮಾರಯ್ಯ, ಪ್ರಾಂಶುಪಾಲರಾದ ಡಾ.ಎಸ್.ವಿ.ದಿನೇಶ್,ಕೋ ಅಡಿನೇಟರ್ ಎಸ್.ಐ.ಟಿ.ಯ ಡಾ.ಹೆಚ್.ಕೆ.ಇ.ಲತಾ,ತಾಂತ್ರಿಕ ಮುಖ್ಯಸ್ಥ ರಾದ ಡಾ.ಜಿ.ಆರ್.ಕಿರಣ್ಮಯಿ, ಸಂಯೋಜಕ ರಾದ ಡಾ.ಫÀನ್ವಾಲಾ ಫೆನಿಲ್ ಚೇತನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.